• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Technology: ಬರ್ತಿದ್ಯಂತೆ AI ಮೀರಿಸುವ ಟೆಕ್ನಾಲಜಿ! ಇದೇನಾದ್ರೂ ಸಕ್ಸಸ್‌ ಆದ್ರೆ ಜಗತ್ತೇ ಬದಲಾಗೋದು ಗ್ಯಾರಂಟಿ!

Technology: ಬರ್ತಿದ್ಯಂತೆ AI ಮೀರಿಸುವ ಟೆಕ್ನಾಲಜಿ! ಇದೇನಾದ್ರೂ ಸಕ್ಸಸ್‌ ಆದ್ರೆ ಜಗತ್ತೇ ಬದಲಾಗೋದು ಗ್ಯಾರಂಟಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ಹೊಸ ಆವಿಷ್ಕಾರದಲ್ಲಿ ವಿಜ್ಞಾನಿಗಳ ತಂಡವೊಂದು ಹೊಸ ಸೂಪರ್ ಕಂಡಕ್ಟಿವಿಟಿ ವಸ್ತುವನ್ನು ಬೆಳಕಿಗೆ ತಂದಿದೆ. ಈ ವಸ್ತು ಸಂಪೂರ್ಣವಾಗಿ ಅಭಿವೃದ್ಧಿಯಾದರೆ ಶಕ್ತಿ ಮತ್ತು ಎಲೆಕ್ಟ್ರಾನಿಕ್ಸ್ ಪ್ರಪಂಚವು ಬೇರೆಯದ್ದೇ ಹಂತಕ್ಕೆ ಹೋಗುತ್ತದೆ ಎಂದು ಹೇಳಲಾಗಿದೆ.

  • Share this:

    ಎಲ್ಲಾ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಬಳಸಲಾಗುವ ಸೂಪರ್ ಕಂಡಕ್ಟರ್​​ಗಳನ್ನು ಮೊದಲ ಬಾರಿಗೆ 1932 ರಲ್ಲಿ ಡಚ್ ಭೌತವಿಜ್ಞಾನಿ (Physicist) ಹೀಕ್ ಕ್ಯಾಮೆರ್ಲಿಂಗ್ ಒನ್ಸ್ ಅವರು ಕಂಡುಹಿಡಿದರು. ಆದಾದ ನಂತರ 1930ರ ಈಚೆಗೆ 2 ಸೂಪರ್ ಕಂಡಕ್ಟರ್​​ಗಳನ್ನು ಒಳಗೊಂಡಂತೆ ಅನೇಕ ವಿಧದ ಸೂಪರ್ ಕಂಡಕ್ಟರ್‌ಗಳ (Super Conductor) ಆವಿಷ್ಕಾರ ಇಲ್ಲಿಯವರೆಗೂ ನಡೆಯುತ್ತಲೇ ಇದೆ.


    ಹೊಸ ಸೂಪರ್‌ ಕಂಡಕ್ಟರ್‌ ವಸ್ತು ಆವಿಷ್ಕಾರ


    ಇತ್ತೀಚಿನ ಹೊಸ ಆವಿಷ್ಕಾರದಲ್ಲಿ ವಿಜ್ಞಾನಿಗಳ ತಂಡವೊಂದು ಹೊಸ ಸೂಪರ್ ಕಂಡಕ್ಟಿವಿಟಿ ವಸ್ತುವನ್ನು ಬೆಳಕಿಗೆ ತಂದಿದೆ. ಈ ವಸ್ತು ಸಂಪೂರ್ಣವಾಗಿ ಅಭಿವೃದ್ಧಿಯಾದರೆ ಶಕ್ತಿ ಮತ್ತು ಎಲೆಕ್ಟ್ರಾನಿಕ್ಸ್ ಪ್ರಪಂಚವು ಬೇರೆಯದ್ದೇ ಹಂತಕ್ಕೆ ಹೋಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ರೈಲುಗಳು ಮತ್ತು ಅಲ್ಟ್ರಾ-ಸಮರ್ಥ ವಿದ್ಯುತ್ ಗ್ರಿಡ್‌ಗಳಲ್ಲಿ ಇದು ಅಳವಡಿಕೆಯಾಗಬಹುದು ಎನ್ನಲಾಗಿದೆ.


    ನ್ಯೂಯಾರ್ಕ್‌ ವಿಜ್ಞಾನಿಗಳಿಂದ ಸಂಶೋಧನೆ


    ನ್ಯೂಯಾರ್ಕ್‌ನ ರೋಚೆಸ್ಟರ್ ವಿಶ್ವವಿದ್ಯಾನಿಲಯದ ರಂಗಾ ಡಯಾಸ್ ಎಂಬ ಸಹಾಯಕ ಪ್ರಾಧ್ಯಾಪಕ ಮತ್ತು ಅವರ ಸಹೋದ್ಯೋಗಿಗಳು ಹೈಡ್ರೋಜನ್, ಸಾರಜನಕ ಮತ್ತು ಲುಟೆಟಿಯಮ್ ಸಹಾಯದಿಂದ ಈ ಸೂಪರ್‌ ಕಂಡಕ್ಟರ್ ವಸ್ತುವನ್ನು ತಯಾರಿಸಿದ್ದಾರೆಂದು ‌ನ್ಯೂ ಸೈಂಟಿಸ್ಟ್ ವರದಿ ಮಾಡಿದೆ.


    ಇದನ್ನೂ ಓದಿ: ತಳ್ಳೋ ಗಾಡಿಯಲ್ಲಿ ಹಣ್ಣು ಖರೀದಿಸಿದ ಆನಂದ್ ಮಹೀಂದ್ರಾ, ಇ-ರುಪೀ ಮಹತ್ವ ತಿಳಿಸಿಕೊಟ್ಟ ಖ್ಯಾತ ಉದ್ಯಮಿ!


    ವಸ್ತುವಿನ ಬಳಕೆಯು ಸದ್ಯ ಪ್ರಾಯೋಗಿಕ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿದೆ ಎಂಬ ಅಂಶವು ಆವಿಷ್ಕಾರದ ಮೇಲೆ ಮತ್ತಷ್ಟು ಭರವಸೆಯನ್ನು ಹುಟ್ಟುಹಾಕಿದೆ.


    ಈ ಹೊಸ ಸೂಪರ್‌ ಕಂಡಕ್ಟರ್‌ ವಸ್ತು, ಕೇವಲ 69 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನ ಹಾಗೂ ಭೂಮಿಯ ಮೇಲ್ಮೈ ವಾತಾವರಣದಲ್ಲಿರುವ ಒತ್ತಡದ ಸುಮಾರು 1000 ಪಟ್ಟಾದ ಒಂದು ಗಿಗಾಪಾಸ್ಕಲ್ ಗಳಷ್ಟು ಒತ್ತಡದಲ್ಲಿ ಸೂಪರ್ ಕಂಡಕ್ಟಿವ್ ಆಗಿ ಪರಿವರ್ತನೆಯಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇತರೆ ಸೆಮಿಕಂಡಕ್ಟರ್ ಗಳಿಗೆ ಬೇಕಾದ ಒತ್ತಡವನ್ನು ಗಮನಿಸಿದರೆ ಇದು ಸಾಕಷ್ಟು ಅಲ್ಪ ಪ್ರಮಾಣವೇ ಆಗಿದೆ.


    ಸಾಂಕೇತಿಕ ಚಿತ್ರ


    ಸಂಶೋಧಕರು ಎರಡು ವಜ್ರದ ಅಂವಿಲ್‌ಗಳನ್ನು ಬಳಸಿ ವಸ್ತುವನ್ನು ರಚಿಸಲು ಮೂರು ಘಟಕಗಳನ್ನು ಸಂಯೋಜಿಸಿದ್ದಾರೆ. ಇದು ವಸ್ತುಗಳನ್ನು ಅತ್ಯಂತ ಹೆಚ್ಚಿನ ಒತ್ತಡಕ್ಕೆ ಒಳಗಾಗುವಂತೆ ಸಹಾಯ ಮಾಡುತ್ತದೆ. ಇದೇ ತತ್ವದ ಮೇಲೆ ಸಂಶೋಧಕರ ತಂಡವು ಈ ಸೂಪರ್‌ ವಸ್ತುವನ್ನು ಕಂಡುಹಿಡಿದಿದ್ದಾಗಿ ನೇಚರ್ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟವಾದ ಪ್ರಬಂಧದಲ್ಲಿ ತಿಳಿಸಿದ್ದಾರೆ.


    ಈ ವಸ್ತುವನ್ನು ಪುಡಿಮಾಡಿದಾಗ ವಸ್ತುವು ನೀಲಿ ಬಣ್ಣದಿಂದ ಕೆಂಪು ಬಣ್ಣಕ್ಕೆ ಬದಲಾಯಿತು, ಇದನ್ನು ನಾವು "ರೆಡ್ಮ್ಯಾಟರ್" ಎಂದು ಕರೆದಿದ್ದೇವೆ ಎಂದು ಸಂಶೋಧಕರು ಜರ್ನಲ್‌ನಲ್ಲಿ ತಿಳಿಸಿದ್ದಾರೆ.


    "ಹೊಸ ತಂತ್ರಜ್ಞಾನಗಳ ಉದಯ"


    ಈ ಹೊಸ ಸಂಶೋಧನೆ ಬಗ್ಗೆ ಮಾತನಾಡಿದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ರಂಗಾ ಡಯಾಸ್ ನೇತೃತ್ವದ ತಂಡವು, "ಈ ವಸ್ತುವಿನೊಂದಿಗೆ, ಹೆಚ್ಚಿನ ಸೂಪರ್ ಕಂಡಕ್ಟಿವಿಟಿ ಮತ್ತು ಅನ್ವಯಿಕ ಹೊಸ ತಂತ್ರಜ್ಞಾನಗಳ ಉದಯವಾಗಲಿದೆ. ಮತ್ತೊಂದು ಕ್ರಾಂತಿಕಾರಿ ಬೆಳವಣಿಗೆಯನ್ನು ನೋಡಬಹುದು" ಎಂದು ಸಂಶೋಧನೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.


    "ಇನ್ನು ಇದರಿಂದ ಸೂಪರ್ ಕಂಡಕ್ಟಿಂಗ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್, ವಿದ್ಯುತ್ ಶಕ್ತಿ ಪ್ರಸರಣ ಮಾರ್ಗಗಳು, ಸಾರಿಗೆ ಮತ್ತು ಸಮ್ಮಿಳಿತ ಶಕ್ತಿಗಾಗಿ ಮ್ಯಾಗ್ನೆಟಿಕ್ ಕನ್ಫೈನ್ಮೆಂಟ್ ನಂತಹ ಗಮನಾರ್ಹ ಸುಧಾರಣೆಗಳು ವಾಸ್ತವವಾಗಲಿದೆ. ನಾವು ಕೂಡ ಈಗ ಆಧುನಿಕ ಸೂಪರ್ ಕಂಡಕ್ಟಿಂಗ್ ಯುಗದಲ್ಲಿದ್ದೇವೆ " ಎಂದು ಪ್ರೊಫೆಸರ್ ಡಯಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




    ಹೊಸ ಸೂಪರ್‌ ಕಂಡಕ್ಟಿಂಗ್‌ ವಸ್ತುಗಳ ಬಳಕೆ ಎಲ್ಲೆಲ್ಲಿ ಸಾಧ್ಯ?


    ಸಂಶೋಧನೆ ತಂಡವು ಸೂಪರ್ ಕಂಡಕ್ಟಿಂಗ್ ಗುಣಲಕ್ಷಣಗಳನ್ನು ಹೊಂದಿರುವ ಇದೊಂದು ಮ್ಯಾಜಿಕಲ್‌ ವಸ್ತು ಎಂದು ಬಿಂಬಿಸಿದ್ದಾರೆ. ಹಾಗೆ ಇದನ್ನು ಎಲ್ಲಿ ಅನ್ವಯ ಮಾಡಬಹುದು ಎಂಬುದನ್ನು ಕೂಡ ತಿಳಿಸಿದ್ದಾರೆ.


    • ಆವಿಷ್ಕಾರವು ಪ್ರತಿರೋಧವಿಲ್ಲದೆ ಗ್ರಿಡ್‌ಗಳಿಗೆ ಶಕ್ತಿಯನ್ನು ರವಾನಿಸಲು ಸಾಧ್ಯವಾಗಿಸುತ್ತದೆ ಮತ್ತು ಇದರ ಪರಿಣಾಮವಾಗಿ ಗಂಟೆಗೆ 200 ಮಿಲಿಯನ್ ಮೆಗಾವ್ಯಾಟ್‌ಗಳ ಶಕ್ತಿಯನ್ನು ಉಳಿಸಬಹುದು.

    • ವಾಯುಗಾಮಿ ವೇಗದ ರೈಲುಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳಂತಹ ವಾಹಕತೆ ಅಗತ್ಯವಿರುವ ಯಾವುದೇ ಪ್ರದೇಶದಲ್ಲಾದರೂ ಬಳಸಬಹುದು.

    • MRI ಮತ್ತು ಮ್ಯಾಗ್ನೆಟೋಕಾರ್ಡಿಯೋಗ್ರಫಿಯಂತಹ ವೈದ್ಯಕೀಯ ಚಿತ್ರಣ ಮತ್ತು ಸ್ಕ್ಯಾನಿಂಗ್ ತಂತ್ರಗಳಲ್ಲಿ ಬಳಸಿಕೊಳ್ಳಬಹುದು.

    • ಅನಿಯಮಿತ ಶಕ್ತಿಯ ಮೂಲವಾಗಿ ಸಮ್ಮಿಳನವನ್ನು ಸಾಧಿಸಲು ಪ್ಲಾಸ್ಮಾವನ್ನು ನಿರ್ಬಂಧಿಸಲು ಕಾಂತೀಯ ಕ್ಷೇತ್ರಗಳನ್ನು ಬಳಸುವ ಟೋಕಾಮ್ಯಾಕ್ ಯಂತ್ರಗಳಲ್ಲಿ ಬಳಸಬಹುದು.


    ಏನಿದು ಸೂಪರ್‌ ಕಂಡಕ್ಟರ್?


    ಸೂಪರ್ ಕಂಡಕ್ಟರ್ ಎನ್ನುವುದು ಒಂದು ಅಂಶ ಅಥವಾ ಮಿಶ್ರಲೋಹವಾಗಿದ್ದು, ನಿರ್ದಿಷ್ಟ ಮಿತಿ, ತಾಪಮಾನಕ್ಕಿಂತ ಕಡಿಮೆ ತಾಪಮಾನಕ್ಕೊಳಪಟ್ಟಾಗ ವಸ್ತುವು ಎಲ್ಲಾ ವಿದ್ಯುತ್ ಪ್ರತಿರೋಧವನ್ನು ಕಳೆದುಕೊಳ್ಳುತ್ತದೆ. ಸೂಪರ್ ಕಂಡಕ್ಟರ್ಗಳು ವಿದ್ಯುತ್ ಪ್ರವಾಹವನ್ನು ಯಾವುದೇ ಇಂಧನ ನಷ್ಟವಿಲ್ಲದೆಯೇ ಹರಿಯುವಂತೆ ಅನುಮತಿಸುತ್ತದೆ.

    Published by:Prajwal B
    First published: