• Home
  • »
  • News
  • »
  • tech
  • »
  • SBI: ನೀವು ಎಸ್​ಬಿಐ ಗ್ರಾಹಕರೇ?; ಹಾಗಿದ್ದರೆ ಈ 5 ತಪ್ಪುಗಳನ್ನು ಮಾಡಲೇಬೇಡಿ!

SBI: ನೀವು ಎಸ್​ಬಿಐ ಗ್ರಾಹಕರೇ?; ಹಾಗಿದ್ದರೆ ಈ 5 ತಪ್ಪುಗಳನ್ನು ಮಾಡಲೇಬೇಡಿ!

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

SBI: ಇತ್ತೀಚೆಗೆ ಆನ್​ಲೈನ್ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿಡಲು ಎಸ್​ಬಿಐ ಕೆಲವೊಂದಿಷ್ಟು ಸೂಚನೆಗಳನ್ನು ನೀಡಿದೆ.

  • Share this:

ಭಾರತದ ಅತಿದೊಡ್ಡ ಬ್ಯಾಂಕ್ ಜಾಲ ಹೊಂದಿರುವ ಎಸ್​ಬಿಐನಲ್ಲಿ ನೀವು ಖಾತೆ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿಯನ್ನು ನೀವು ಖಂಡಿತ ಓದಲೇಬೇಕು. ದೇಶಾದ್ಯಂತ ದಿನದಿಂದ ದಿನಕ್ಕೆ ಆನ್​ಲೈನ್ ವಂಚನೆಯ ಪ್ರಕರಣಗಳು ಹೆಚ್ಚುತ್ತಲೇ ಇವೆ. ಬ್ಯಾಂಕ್ ವ್ಯವಹಾರಗಳು ಡಿಜಿಟಲೀಕರಣಗೊಂಡ ಬಳಿಕ ಸೈಬರ್ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿವೆ. ಹೀಗಾಗಿಯೇ ಬ್ಯಾಂಕ್​ಗಳು ತನ್ನ ಗ್ರಾಹಕರಿಗೆ ಓಟಿಪಿ, ಎಟಿಎಂ ವಿವರ, ಬ್ಯಾಂಕ್ ಖಾತೆಯ ಮಾಹಿತಿ ಇತ್ಯಾದಿಗಳನ್ನು ನೀಡದಿರುವಂತೆ ಎಚ್ಚರಿಕೆ ನೀಡುತ್ತಲೇ ಇವೆ. ಈಗ ಎಸ್​ಬಿಐ ಕೂಡ ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಬ್ಯಾಂಕಿಂಗ್ ಸಂಬಂಧಿಸಿದ ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಗ್ರಾಹಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಎಸ್​ಬಿಐ ಸೂಚಿಸಿದೆ.


ಬ್ಯಾಂಕ್ ಖಾತೆ ಹೊಂದಿರುವವರು ತಮ್ಮ ವ್ಯವಹಾರಗಳು ಸುಲಭವಾಗಲಿ ಎಂಬ ಕಾರಣಕ್ಕೆ ಆನ್​ಲೈನ್ ಬ್ಯಾಂಕಿಂಗ್ ಮಾಡುತ್ತಾರೆ ಆದರೆ, ಇದರಿಂದ ಮೋಸ ಹೋದವರೂ ಸಾಕಷ್ಟು ಜನರಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿಡಲು ಎಸ್​ಬಿಐ ಕೆಲವೊಂದಿಷ್ಟು ಸೂಚನೆಗಳನ್ನು ನೀಡಿದೆ. ಎಸ್​ಬಿಐ ಗ್ರಾಹಕರು ದಸರಾ ಹಬ್ಬದ ವೇಳೆ ಆಫರ್​ಗಳು ಸಿಗುತ್ತದೆ ಎಂದು ಆನ್​ಲೈನ್​ ಶಾಪಿಂಗ್ ಮಾಡುವ ಮೊದಲು ಈ 5 ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.


ಇದನ್ನೂ ಓದಿ: ನಂಬ್ತಿರೋ…ಬಿಡ್ತಿರೋ..ಈ LED ಸ್ಮಾರ್ಟ್​ಟಿವಿ ಬೆಲೆ ಕೇವಲ 3232 ರೂ!


1. ನಿಮ್ಮ ಓಟಿಪಿ, ಪಿನ್, ಸಿವಿವಿ, ಯುಪಿಐ ಪಿನ್​ ನಂಬರ್​ಗಳನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಶೇರ್ ಮಾಡಬೇಡಿ. ಹಲವರು ತಮ್ಮ ಪಾಸ್​ವರ್ಡ್​ಗಳನ್ನು ಎಟಿಎಂ ಕಾರ್ಡ್​ಗಳಲ್ಲಿ ಬರೆದಿಟ್ಟುಕೊಳ್ಳುತ್ತಾರೆ. ಹೀಗೆ ಎಂದಿಗೂ ಮಾಡಬೇಡಿ.


2. ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಫೋನ್​ನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಆ ಮಾಹಿತಿಯನ್ನು ಡಿಲೀಟ್ ಮಾಡುವುದು ಉತ್ತಮ. ನಿಮ್ಮ ಅಕೌಂಟ್ ನಂಬರ್, ಪಾಸ್​ವರ್ಡ್​, ಎಟಿಎಂ ಪಾಸ್​ವರ್ಡ್​ ಸೇವ್ ಮಾಡಿಟ್ಟುಕೊಳ್ಳುವುದು ಅಥವಾ ನಿಮ್ಮ ಪಾಸ್​ಬುಕ್, ಎಟಿಎಂ ಕಾರ್ಡ್​ನ ಫೋಟೋ ತೆಗೆದು ಸೇವ್ ಮಾಡಿಟ್ಟುಕೊಳ್ಳುವುದು ಅಪಾಯಕಾರಿ.


3. ಹಲವು ಸಂದರ್ಭದಲ್ಲಿ ನಿಮಗೆ ಫೋನ್ ಮಾಡಿ ಪಾಸ್​ವರ್ಡ್​ ಚೇಂಜ್ ಮಾಡಿ, ಓಟಿಪಿ ತಿಳಿಸಿ ಎಂದು ಕೇಳಲಾಗುತ್ತದೆ. ಆದರೆ, ಯಾವ ಬ್ಯಾಂಕ್​ನವರೂ ನಿಮ್ಮ ಬಳಿ ಈ ಮಾಹಿತಿಗಳನ್ನು ಕೇಳುವುದಿಲ್ಲ. ಹೀಗಾಗಿ, ಯಾವ ಕಾರಣಕ್ಕೂ ನಿಮ್ಮ ಎಟಿಎಂ ಮಾಹಿತಿಯನ್ನು ಶೇರ್ ಮಾಡಬೇಡಿ.


4. ನೀವು ಆನ್​ಲೈನ್ ಬ್ಯಾಂಕಿಂಗ್ ಮಾಡುವವರಾದರೆ ನಿಮ್ಮ ಮೊಬೈಲ್ ಡೇಟಾ ಅಥವಾ ಮನೆಯ ವೈಫೈ ಬಳಸಿ, ಯಾವ ಕಾರಣಕ್ಕೂ ಪಬ್ಲಿಕ್ ಇಂಟರ್ನೆಟ್, ಬೇರೆಯವರ ಮನೆಯ ವೈಫೈ ಬಳಸಿ ಆನ್​ಲೈನ್ ವಹಿವಾಟು ಮಾಡಬೇಡಿ. ಇದರಿಂದ ಗ್ರಾಹಕರ ಖಾಸಗಿ ಮಾಹಿತಿ ಸೋರಿಕೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಎಸ್​ಬಿಐ ಎಚ್ಚರಿಕೆ ನೀಡಿದೆ.


5. ನಿಮ್ಮ ಬ್ಯಾಂಕ್​ನ ಯೂಸರ್ ಐಡಿ, ಪಿನ್ ನಂಬರ್, ಪಾಸ್​ವರ್ಡ್​, ಸಿವಿವಿ, ಓಟಿಪಿ, ವಿಪಿಎ (ಯುಪಿಐ)ಗಳನ್ನು ಯಾವ ಬ್ಯಾಂಕ್​ನವರೂ ಫೋನ್ ಮಾಡಿ ಕೇಳುವುದಿಲ್ಲ. ಅದು ನಿಮ್ಮ ಖಾಸಗಿ ಮಾಹಿತಿ ಎಂಬುದು ನೆನಪಿನಲ್ಲಿರಲಿ. ಬ್ಯಾಂಕ್​ನವರ ಹೆಸರಿನಲ್ಲಿ ಈ ಮಾಹಿತಿಯನ್ನು ಕೇಳಿದರೆ ನೀವು ಕೊಡಬೇಡಿ.

Published by:Sushma Chakre
First published: