ಮೊಬೈಲ್ ಪ್ರಿಯರಿಗೆ ಗುಡ್ ನ್ಯೂಸ್: SBIನಿಂದ ಅಮೆಜಾನ್​ನಲ್ಲಿ ಭರ್ಜರಿ ಕೊಡುಗೆ!

SBI offer on Amazon: ಅಮೆಜಾನ್ ನಲ್ಲಿ ಎಸ್‌ಬಿಐ ಕಾರ್ಡ್ ಬಳಸುವ ಮೂಲಕ ನೀವು ಐಫೋನ್, ಸ್ಯಾಮ್‌ಸಂಗ್, ರೆಡ್‌ಮಿ, ಒನ್‌ಪ್ಲಸ್, ಒಪ್ಪೊ, ವಿವೋ, ಎಲ್‌ಜಿ, ನೋಕಿಯಾ ಮತ್ತು ಇತರ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಶೇಕಡಾ 40 ರವರೆಗೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಸ್ಮಾರ್ಟ್​ಫೋನ್​ (Photo: Google)

ಸ್ಮಾರ್ಟ್​ಫೋನ್​ (Photo: Google)

  • Share this:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಅಮೆಜಾನ್ ನಲ್ಲಿ ಎಸ್‌ಬಿಐ ಕಾರ್ಡ್ ಬಳಸುವ ಮೂಲಕ ನೀವು ಐಫೋನ್, ಸ್ಯಾಮ್‌ಸಂಗ್, ರೆಡ್‌ಮಿ, ಒನ್‌ಪ್ಲಸ್, ಒಪ್ಪೊ, ವಿವೋ, ಎಲ್‌ಜಿ, ನೋಕಿಯಾ ಮತ್ತು ಇತರ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಶೇಕಡಾ 40 ರವರೆಗೆ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ 5 ರಷ್ಟು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಸಿಗಲಿದ್ದು ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯ ಲಾಭ ಪಡೆಯಬಹುದು. ಎಸ್‌ಬಿಐ ಗ್ರಾಹಕರು ಪ್ರತಿ ಕಾರ್ಡ್‌ಗೆ 5,000 ರೂ. ಕನಿಷ್ಟ ವಹಿವಾಟಿನ ಮೇಲೆ ಪ್ರತಿ ಕಾರ್ಡ್‌ಗೆ 1,000 ರೂ. ಗರಿಷ್ಠ ರಿಯಾಯಿತಿ ಇರಲಿದೆ. ಈ ಕೊಡುಗೆ ಪಡೆಯಲು ಎಸ್‌ಬಿಐ ಗ್ರಾಹಕರು ಯೋನೊ ಎಸ್‌ಬಿಐಗೆ ಲಾಗ್ ಇನ್ ಆಗಬೇಕು ಮತ್ತು “Best Offers" (ಅತ್ಯುತ್ತಮ ಕೊಡುಗೆಗಳು) ವಿಭಾಗಕ್ಕೆ ಹೋಗಬೇಕು. ಈ ವಿಭಾಗದಲ್ಲಿ, ಎಸ್‌ಬಿಐ ಗ್ರಾಹಕರು ಅಮೆಜಾನ್‌ ಆನ್‌ಲೈನ್‌ ಶಾಪಿಂಗ್ ತಾಣಕ್ಕೆ ಹೋಗಬೇಕಾಗುತ್ತದೆ. ಅಮೆಜಾನ್‌ನಲ್ಲಿ ಮೊಬೈಲ್‌ನಲ್ಲಿರುವ ಎಸ್‌ಬಿಐ ಕೊಡುಗೆಗೆ ಯಾವುದೇ EMI ವೆಚ್ಚ ಅಥವಾ ಶುಲ್ಕವಿರುವುದಿಲ್ಲ.

ಅಮೆಜಾನ್ 2021, ಮೊಬೈಲ್‌ ಮೇಲೆ ಎಸ್‌ಬಿಐ ಕೊಡುಗೆ:

ಎಸ್‌ಬಿಐ ಕಾರ್ಡ್ ಬಳಕೆದಾರರು ಈ ಕೆಳಗೆ ನಮೂದಿಸಿದ ಮೊಬೈಲ್‌ಗಳ ರಿಯಾಯಿತಿ ಕೊಡುಗೆ ಇರಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಫೋನನ್ನು 10,999 ರೂಗಳಿಗೆ ಖರೀದಿಸಬಹುದು. ರೆಡ್‌ಮಿ ನೋಯೆಟ್ 10 ಫೋನಿಗೆ ಬೆಲೆ 11,999 ಆಗಿದ್ದು, ರೂಪಾಯಿಗೆ ಸಿಗಲಿದೆ.  ರೆಡ್‌ಮಿ 9 ಫೋನ್ ಮೇಲೆ  8,799 ರೂಪಾಯಿ ಕೊಡುಗೆ ನೀಡಿದರೆ, ಒನ್‌ಪ್ಲಸ್ ನಾರ್ಡ್ 5 ಜಿ ಫೋನ್ ನ ಬೆಲೆ 29,999 ರೂಪಾಯಿ ನಿಗದಿಪಡಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 31 ಫೋನಿಗೆ ಮೇಲೆ 18,499 ಕೊಡುಗೆ ನೀಡಲಾಗಿದ್ದು, ರೆಡ್‌ಮಿ ನೋಟ್ 9 ಫೋನ್ 10,999 ರೂಪಾಯಿಗೆ ಸಿಗಲಿದೆ. ರೆಡ್‌ಮಿ 9 ಪವರ್ ಫೋನ್ ಮೇಲೆ 10,499 ರೂಪಾಯಿಗೆ ಕೊಡುಗೆಯಿದ್ದು, ಐಫೋನ್ ಮಿನಿಗೆ 67,100 ರೂ. ಬೆಲೆ ನಿಗದಿಪಡಿಸಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಫೋನ್ 7,499 ರೂಪಾಯಿಗೆ ಕೈಗೆ ಸಿಗಲಿದ್ದು, ಒನ್ ಪ್ಲಸ್ 8 ಪ್ರೊ 5 ಜಿ ಫೋನ್ ಮೇಲೆ ಬೆಲೆ 54,999 ಕೊಡುಗೆ ನೀಡಲಾಗಿದೆ.  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21 ಫೋನಿಗೆ ರೂ 13,999, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 02 ಫೋನಿಗೆ ಬೆಲೆ 8,999 ರೂ. ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್ ಫೋನ್​  27,999 ರೂಪಾಯಿಗೆ ಸಿಗಲಿದೆ. ಒಪ್ಪೋ ಎ 31 ಫೋನಿನ ಬೆಲೆ 9,990, ರೆಡ್‌ಮಿ ನೋಟ್ 9 ಪ್ರೊ ಫೋನಿಗೆ 12,999 ರೂ., ಒಪ್ಪೋ ಎ 15 ಎಸ್" ಫೋನಿಗೆ ಬೆಲೆ 11,490 ರೂ., ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 12 ಫೋನಿನ ಬೆಲೆ 12,999 ರೂ.,  ಒಪ್ಪೋ ಎ 15 ಫೋನಿನ ಬೆಲೆ 9,990 ರೂ. ಮತ್ತು ವಿವೋ ವೈ 20
ಫೋನಿಗೆ 11,490 ರೂಪಾಯಿಗೆ ನೀಡಲಾಗುತ್ತಿದೆ.

ಜತೆಗೆ ಎಸ್‌ಬಿಐ ಕಾರ್ಡ್ ಹೊಂದಿರುವವರು ಮಿ 10 ಐ ಫೋನ್ ಅನ್ನು 21,999 ರೂಗೆ ಮಾರಾಟ ಮಾಡುತ್ತಿದೆ. ಒಪ್ಪೋ ಎಫ್ 19 ಫೋನ್ ಅನ್ನು ಬೆಲೆ 25,990 ರೂ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಫೋನ್ ನ ಬೆಲೆ 21,999 ರೂ, ಒಪ್ಪೋ ಎಫ್ 19 ಪ್ರೊ ಫೋನ್ ನ ಬೆಲೆ 21,490 ರೂ, ವಿವೋ ವಿ 20 ಫೋನ್ ನ ಬೆಲೆ 22,990 ರೂ,  ವಿವೋ ವಿ 20 ಎಸ್‌ಇ ಫೋನ್ ನ ಬೆಲೆ 19,990 ರೂ, ಒಪ್ಪೋ ಎಫ್ 17 ಫೋನ್ ನ ಬೆಲೆ 16,990, ವಿವೊ ವೈ 51 ಫೋನ್ ನ ಬೆಲೆ 17,990 ರೂ., ವಿವೋ ವೈ 31 ಫೋನ್ ನ ಬೆಲೆ 16,490 ರೂ., ಒಪ್ಪೋ ಎ 52 ಫೋನ್ ನ ಬೆಲೆ 14,990 ರೂ., ಒಪ್ಪೋ ಎ 53 ಫೋನ್ ನ ಬೆಲೆ 12,990 ರೂ. ಮತ್ತು ವಿವೋ ವೈ 30 ಫೋನ್ ನ ಬೆಲೆ 13,990 ರೂಪಾಯಿಗೆ ಸಿಗಲಿದೆ.

ಅಷ್ಟೇ ಅಲ್ಲದೇ, ಐಫೋನ್ 11 ಪ್ರೊ ಮ್ಯಾಕ್ಸ್ ಮೇಲೆ 94,900 ರೂ. ದರ ನಿಗದಿಪಡಿಸಲಾಗಿದ್ದು, ಐಫೋನ್ 12  ಮೇಲೆ 1,19,900 ರೂ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಫೋನ್ ನ ಬೆಲೆ 81,999 ರೂ., ಒನ್ ಪ್ಲಸ್ 8 ಪ್ರೊ ಫೋನ್ 54,999 ರೂಪಾಯಿಗೆ ಸಿಗಲಿದೆ. ಸ್ಯಾಮಸಂಗ್ ನೋಟ್ 20 ಫೋನ್ ನ ಬೆಲೆ 1,04,999 ನಿಗದಿಪಡಿಸಲಾಗಿದ್ದು, ಮಿ 10 ಟಿ ಪ್ರೊ ಫೋನ್ 37,999 ರೂಪಾಯಿಗೆ ಸಿಗಲಿದೆ ಮತ್ತು ಐಫೋನ್ 12 ಮಿನಿ ಫೋನ್ ನ ಬೆಲೆ 67,100 ಗೆ ಸಿಗಲಿದೆ. ಇವೆಲ್ಲಾ ಕೊಡುಗೆಗಳು ಕೇವಲ ಎಸ್‌ಬಿಐ ಕಾರ್ಡ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.

ಅಮೆಜಾನ್‌ ನಲ್ಲಿ ಮೊಬೈಲ್‌ಗಳಲ್ಲಿ ಎಸ್‌ಬಿಐ ಆಫರ್ ಪಡೆಯಲು ಇಂದೇ ಕೊನೆಯ ದಿನವಾಗಿದೆ. ಅಂದರೆ ಮಂಗಳವಾರ ಇದರ ಕೊಡುಗೆ ಮುಕ್ತಾಯಗೊಳ್ಳಲಿದೆ.
First published: