SBI: ಎಸ್​ಬಿಐ ಎಟಿಎಂನಲ್ಲಿ ಟ್ರಾನ್ಸ್ಯಾಕ್ಷನ್​ ವಿಫಲವಾಗಿಯೂ ಹಣ ಕಟ್​ ಆಗಿದೆಯೇ? ಹಾಗಿದ್ರೆ ಹೀಗೆ ದೂರು ದಾಖಲಿಸಿ

ಖಾತೆಯಿಂದ ಹಣ ಕಟ್​ ಆದರೂ ನಿಮ್ಮ ಕೈಗೆ ನೋಟು ಬರದೆ ಇದ್ದರೆ ಈ ಬಗ್ಗೆ ದೂರು ದಾಖಲಿಸಲು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ವೆಬ್​ಸೈಟ್​ನಲ್ಲಿ ಒಂದು ವಿಭಾಗವನ್ನೇ ಮಾಡಿದೆ. ಅಲ್ಲಿ ದೂರು ದಾಖಲು ಮಾಡೋದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.

  • Share this:
    ಎಟಿಎಂನಲ್ಲಿ ಹಣ ತೆಗೆಯೋಕೆ ಎಂದು ನೀವು ಹೋಗಿರುತ್ತೀರಿ. ಕೆಲವೊಮ್ಮೆ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಹಣ ಇಲ್ಲದೆ ಇರುವುದು, ತಾಂತ್ರಿಕ ದೋಷ ಕಾಣಿಸಿಕೊಳ್ಳುವುದು ಸೇರಿ ಅನೇಕರ ಸಮಸ್ಯೆಗಳು ಎದುರಾಗುತ್ತವೆ. ಇದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ಖಾತೆಯಿಂದ ಹಣ ಕಟ್​ ಆದರೂ ನಿಮ್ಮ ಕೈಗೆ ಹಣ ಸೇರದೆ ಇರುವುದು. ಹೀಗಾದಾಗ ಸಾಮಾನ್ಯವಾಗಿ ಆತಂಕ ಎದುರಾಗೋದು ಸಾಮಾನ್ಯ. ಹಾಗಾದರೆ, ಇದಕ್ಕೆ ಏನು ಮಾಡಬೇಕು? ಎಂಬುದಕ್ಕೆ ಇಲ್ಲಿದೆ ಉತ್ತರ. ಈ ರೀತಿ ಖಾತೆಯಿಂದ ಹಣ ಕಟ್​ ಆದರೂ ನಿಮ್ಮ ಕೈಗೆ ನೋಟು ಬರದೆ ಇದ್ದರೆ ಈ ಬಗ್ಗೆ ದೂರು ದಾಖಲಿಸಲು ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ವೆಬ್​ಸೈಟ್​ನಲ್ಲಿ ಒಂದು ವಿಭಾಗವನ್ನೇ ಮಾಡಿದೆ. ಅಲ್ಲಿ ದೂರು ದಾಖಲು ಮಾಡೋದು ಹೇಗೆ ಎಂಬುದಕ್ಕೆ ಇಲ್ಲಿದೆ ಉತ್ತರ.

    • ಮೊದಲು ಎಸ್​ಬಿಐ ವೆಬ್​ಸೈಟ್​ಗೆ ಭೇಟಿ ನೀಡಿ.

    • ಸಿಎಂಎಸ್​ ಪೋರ್ಟಲ್​ಗೆ ಭೇಟಿ ನೀಡಿ.

    • ನಂತರ, ಗ್ರಾಹಕರ ವಿಧ, ಖಾತೆ ಸಂಖ್ಯೆ, ದೂರು ದಾರನ ಹೆಸರು, ಬ್ಯಾಂಕ್​ ಬ್ರ್ಯಾಂಚ್​ ಕೋಡ್, ಮೊಬೈಲ್​ ಸಂಖ್ಯೆ, ಇಮೇಲ್ ಅಡ್ರೆಸ್, ದೂರಿನ ವಿಧವನ್ನು ಉಲ್ಲೇಖ ಮಾಡಿ.

    • ಮಾಹಿತಿ ತುಂಬಿದ ಬಳಿಕ ಅಲ್ಲಿ ಇರುವ ಕ್ಯಾಪ್ಚಾ ಕೋಡ್​ಅನ್ನು ಬರೆಯಿರಿ.

    • ನಂತರ ನಿಮಗೆ ದೂರಿನ ಸಂಖ್ಯೆ ಸಿಗುತ್ತದೆ. ಅಲ್ಲದೆ, ದೂರಿನ ಸಂಖ್ಯೆ ಮೆಸೇಜ್​ ಹಾಗೂ ಇಮೇಲ್​ಗೆ ಬಂದಿರುತ್ತದೆ.

    ಇತರೆ ಆಯ್ಕೆ:

    ಕಸ್ಟಮರ್​ ಕೇರ್​ ಸಂಖ್ಯೆ:

    ನೀವು ಎಸ್​ಬಿಐ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿಯೂ ದೂರನ್ನು ದಾಖಲಿಸಬಹುದು. ಈ ವೇಳೆ ನೀವು ನೀಡಿರುವ ದೂರು ಸಮಂಜಸ ಎನಿಸಿದರೆ ಅವರು ನಿಮ್ಮ ಹಣವನ್ನು ಹಿಂದಿರುಗಿಸುತ್ತಾರೆ.

    ಬ್ಯಾಂಕ್​ ಬ್ರ್ಯಾಂಚ್​ ಸಂಪರ್ಕಿಸಿ: ನೀವು ಹಣ ತೆಗೆಯಲು ಪ್ರಯತ್ನಿಸಿದ ಎಟಿಎಂನಿಂದ ಹತ್ತಿರ ಇರುವ ಬ್ಯಾಂಕ್​ ಬ್ರ್ಯಾಂಚ್​ಅನ್ನು ಸಂಪರ್ಕಿಸಿ.  ಬ್ಯಾಂಕ್​ ಬ್ರ್ಯಾಂಚ್: ಸಮೀಪದ ಬ್ಯಾಂಕ್​ ಬ್ರ್ಯಾಂಚ್​ನಲ್ಲಿ ನಿಮ್ಮ ಸಮಸ್ಯೆ ಬಗೆಹರಿಯದೇ ಇದ್ದರೆ, ನಿಮ್ಮ ಖಾತೆ ಹೊಂದಿರುವ ಬ್ಯಾಂಕ್​ ಬ್ರ್ಯಾಂಚ್​ಅನ್ನು ಸಂಪರ್ಕಿಸಿ. ಈ ಮೂಲಕ ಅಲ್ಲಿ ದೂರನ್ನು ದಾಖಲಿಸಿ.
    Published by:Rajesh Duggumane
    First published: