Harry Potter: ನಿಮ್ಮ ಮೊಬೈಲ್​ನಲ್ಲಿ ಹ್ಯಾರಿ ಪಾಟರ್‌ನಂತೆ ಮ್ಯಾಜಿಕ್‌ ಮಾಡಬಹುದಂತೆ, ಹೇಗೆ ಗೊತ್ತೇ..?

ಲುಮೋಸ್ ಹಾಗೂ ನಾಕ್ಸ್ ಹೇಳುವುದು ನಾವೇ ಹ್ಯಾರಿ ಪಾಟರ್ ಎಂಬಂತೆ ಭಾಸವಾಗಿಸುತ್ತದೆ ಎಂದು ಇನ್ನೊಬ್ಬ ಅಭಿಮಾನಿ ತಮ್ಮ ಸಂತಸವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹ್ಯಾರಿ ಪಾಟರ್ ಅಭಿಮಾನಿಗಳಿಗೆ 2022 ಅತ್ಯಂತ ಆಹ್ಲಾದಮಯ ಸಮಯವಾಗಿದೆ ಎಂಬುದಂತೂ ನಿಜ. ಹ್ಯಾರಿ ಪಾಟರ್(Harry Potter) 20ನೇ ಆ್ಯನಿವರ್ಸರಿ: ರಿಟರ್ನ್ ಟು ಹ್ಯಾಗ್‌ವರ್ತ್ಸ್ (Harry Potter 20th Anniversary: ​​Return to Hogwarts) ಪಾಟರ್ ಅಭಿಮಾನಿಗಳಿಗೆ ಒಂದು ರೀತಿಯ ಉನ್ಮಾದಕತೆಯನ್ನುಂಟು ಮಾಡಿದೆ. ಹ್ಯಾರಿ ಪಾಟರ್ ಕುರಿತು ಅಗಾಧವಾದ ಅರಿವನ್ನುಂಟು ಮಾಡುವ ಸಾಕ್ಷ್ಯಚಿತ್ರ (Documentary)ಇದಾಗಿದ್ದು, ಚಿತ್ರದ ನಟರು ಹಾಗೂ ನಿರ್ಮಾಪಕರನ್ನು ಒಂದುಗೂಡಿಸುತ್ತದೆ. J.K. ರೌಲಿಂಗ್ (J.K.Rowling) ಪುಸ್ತಕಗಳಿಂದ ಚಲನಚಿತ್ರ ತುಣುಕುಗಳನ್ನು ಅಳವಡಿಸಿಕೊಳ್ಳಲಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಮಂತ್ರದಂಡದ ಮಿಂಚು:

ಹ್ಯಾರಿ ಪಾಟರ್ ಬಳಸುವ ಲುಮೋಸ್ ಮ್ಯಾಕ್ಸಿಮಾ ಮಂತ್ರದಂಡದ ಅದೇ ಮಿಂಚನ್ನು ಇದೀಗ ಇದೀಗ ಪಾಟರ್ ಅಭಿಮಾನಿಗಳು ತಮ್ಮ ಸ್ಮಾರ್ಟ್ ಡಿವೈಸ್‌ಗಳಲ್ಲಿ ಕೂಡ ಬಳಸಬಹುದಾಗಿದೆ. ಲುಮೋಸ್ ಎಂದು ಹೇಳುವಾಗ ಆ್ಯಪಲ್‌ನ ಸಿರಿಯು ಫ್ಲ್ಯಾಷ್‌ಲೈಟ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಫೀಚರ್ ಇದೀಗ ಆ್ಯಂಡ್ರಾಯ್ಡ್‌ನಲ್ಲೂ ಲಭ್ಯವಾಗಿದೆ. ನಾಕ್ಸ್ ಎಂದು ಹೇಳಿದರೆ ಫ್ಲ್ಯಾಶ್‌ಲೈಟ್ ಅನ್ನು ಆಫ್ ಮಾಡುತ್ತದೆ. ತಮ್ಮ ಸ್ಮಾರ್ಟ್ ಡಿವೈಸ್‌ಗಳಲ್ಲಿ ಈ ಫೀಚರ್ ಬಳಸುವ ಬಳಕೆದಾರರು ನಿಜ ಜೀವನದ ಮಾಂತ್ರಿಕರ ಅನುಭವವನ್ನು ಅವರಿಗೆ ಮಾಡಿಸುತ್ತದೆ. ಇದೀಗ ಈ ಅಂಶವನ್ನು ಪಾಟರ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಹೇಗೆಲ್ಲಾ ತಮಗಾದ ಅನುಭವಗಳನ್ನು ಅವರುಗಳು ಹಂಚಿಕೊಂಡಿದ್ದಾರೆ ಎಂಬುದನ್ನು ನಾವು ಕಾಣಬಹುದಾಗಿದೆ.

ಇದನ್ನೂ ಓದಿ: 3.56 ಕೋಟಿ ರೂಪಾಯಿ ಬೆಲೆಯ ಕಾದಂಬರಿ ಚಿಟಿಕೆ ಹೊಡೆಯುವಷ್ಟರಲ್ಲಿ ಸೇಲ್! ಯಾವುದು ಆ ಪುಸ್ತಕ? ಕೊಂಡವರಾರು?

ಟ್ವಿಟ್ಟರ್‌ನಲ್ಲಿ ಹ್ಯಾರಿ ಪಾಟರ್ ಅಭಿಮಾನಿಗಳು ಹಂಚಿಕೊಂಡ ಮಾಹಿತಿ ಏನು?

ಸಿರಿಗೆ ನೀವು ಲುಮೋಸ್ ಎಂದು ಹೇಳಿದರೆ ಸಾಕು ಫ್ಲ್ಯಾಷ್‌ಲೈಟ್ ಸಕ್ರಿಯಗೊಳ್ಳುತ್ತದೆ ಎಂಬುದನ್ನು ಇದೀಗ ಅನ್ವೇಷಿಸಿದೆ. ನಿಜಕ್ಕೂ ಆ್ಯಪಲ್ ಈ ವಿಷಯದಲ್ಲಿ ಉತ್ತಮವಾಗಿದೆ ಎಂದು ಅಭಿಮಾನಿಯೊಬ್ಬರು ತಮಗಾದ ಅನುಭವವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಸಿರಿ/ಗೂಗಲ್ ಅಸಿಸ್ಟೆಂಟ್‌ನಲ್ಲಿ ಕೂಡ ‘’ಲುಮೋಸ್” ಎಂದು ಹೇಳಿ ನಿಮಗಾಗುವ ಅಚ್ಚರಿಯನ್ನು ಬಹಿರಂಗಪಡಿಸಿ ಎಂದು ಬರೆದುಕೊಂಡಿದ್ದಾರೆ. ಹ್ಯಾರಿ ಪಾಟರ್ ಅಭಿಮಾನಿಗಳೇ… ನಿಮ್ಮ ಫೋನ್‌ಗೆ “ಹೇ ಸಿರಿ ಲುಮೋಸ್” ಎಂದು ಹೇಳಿ ನೀವು ನಿರಾಶರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಆಶ್ಚರ್ಯಕರ ಸಲಹೆ

ನಾನು ಹೇ ಸಿರಿ ಲುಮೋಸ್ ಎಂದು ಹೇಳಿದೆ, ಹಾಗೂ ನನ್ನ ಡಿವೈಸ್‌ನ ಫ್ಲ್ಯಾಶ್‌ಲೈಟ್ ಆನ್ ಆಯಿತು ಹಾಗೂ ಹೇ ಸಿರಿ ನಾಕ್ಸ್ ಎಂದು ಹೇಳಿದಾಗ ಲೈಟ್ ಆಫ್ ಆಯಿತು ಇದು ಮಂತ್ರದಂಡವಾಗಿದೆ ಎಂದು ಇನ್ನೊಬ್ಬ ಅಭಿಮಾನಿ ಬರೆದುಕೊಂಡಿದ್ದಾರೆ. ಓಹ್ ದೇವರೇ ಬೆಳಕಿಗಾಗಿ ಹ್ಯಾರಿ ಪಾಟರ್ ಉಚ್ಚರಿಸುವ ಧ್ವನಿ ಆದೇಶಗಳನ್ನು ಗೂಗಲ್ ಹಾಗೂ ಸಿರಿ ಅರಿತುಕೊಂಡಿದೆ. ನೀವು ಧ್ವನಿ ಆದೇಶದಲ್ಲಿ ಯಾವುದೇ ಲೈಟ್‌ಗಳಿಗಾಗಿ ಗೂಗಲ್ ಹೋಮ್ ಬಳಸುತ್ತಿದ್ದರೆ, ಲುಮೋಸ್ ಹಾಗೂ ನಾಕ್ಸ್ ಅನ್ನು ಬಳಸಿ ನೋಡಿ ಎಂದು ಇನ್ನೊಬ್ಬರು ಆಶ್ಚರ್ಯಕರವಾಗಿ ಸಲಹೆಯನ್ನು ನೀಡಿದ್ದಾರೆ.

ಹ್ಯಾರಿ ಪಾಟರ್ ಅಭಿಮಾನಿ ಟ್ವೀಟ್

ಲುಮೋಸ್ ಹಾಗೂ ನಾಕ್ಸ್ ಹೇಳುವುದು ನಾವೇ ಹ್ಯಾರಿ ಪಾಟರ್ ಎಂಬಂತೆ ಭಾಸವಾಗಿಸುತ್ತದೆ ಎಂದು ಇನ್ನೊಬ್ಬ ಅಭಿಮಾನಿ ತಮ್ಮ ಸಂತಸವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ನಾವೆಲ್ಲರೂ ನಮ್ಮ ಕೈಯಲ್ಲಿ ಮಂತ್ರದಂಡವನ್ನು ಹಿಡಿದುಕೊಂಡಿರುವಂತೆ ಭಾಸವಾಗುತ್ತದೆ ಎಂದು ಇನ್ನೊಬ್ಬ ಹ್ಯಾರಿ ಪಾಟರ್ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: OnePlus Watch: ಸಖತ್ತಾಗಿದೆ ಹ್ಯಾರಿ ಪಾಟರ್ ಆವೃತ್ತಿ, 16,999 ರೂ. ಗೆ ಸಿಗುತ್ತೆ ಈ ಸ್ಮಾರ್ಟ್ ವಾಚ್​!

harrypotter.fandom.com ಉಲ್ಲೇಖಿಸಿರುವಂತೆ, ಲುಮೋಸ್ (ಬೆಳಕಿನ ಮಾಂತ್ರಿಕ ದಂಡ) ಒಂದು ಮನವಿಯಾಗಿದ್ದು ರಾತ್ರಿಯಲ್ಲಿ ಮಂತ್ರದಂಡದಿಂದ ಬೆಳಕನ್ನು ನೋಡುವಂತೆ ಮಾಡುತ್ತದೆ. ಮಾಂತ್ರಿಕ ದಂಡವನ್ನು ಬಳಸುವ ತರಬೇತಿ ಹಾಗೂ ಶಿಕ್ಷಣವನ್ನು ಹಾಗ್ವಾರ್ಟ್ಸ್ ಸ್ಕೂಲ್ ಆಫ್ ವಿಚ್‌ಕ್ರಾಫ್ಟ್ ಮತ್ತು ವಿಝಾರ್‌ಡ್ರಿಯಲ್ಲಿ (Hogwarts School of Witchcraft and Wizardry) ಮೊದಲ ವರ್ಷದ ಡಿಫೆನ್ಸ್ ಎಗೆನ್ಸ್ಟ್ ದಿ ಡಾರ್ಕ್ ಆರ್ಟ್ಸ್ ಅಂಡ್ ಚಾರ್ಮ್ಸ್ ಕೋರ್ಸ್‌ನಲ್ಲಿ ನೀಡಲಾಯಿತು. ಕತ್ತಲೆಯ ಪ್ರದೇಶದಲ್ಲಿ ಹಾಗೂ ರಾತ್ರಿ ಸಮಯ ಬೆಳಕಿಗಾಗಿ ಮಂತ್ರದಂಡದಿಂದ ಬೆಳಕಿನ ಉತ್ಪತ್ತಿಗಾಗಿ ಈ ಮಂತ್ರವನ್ನು ಪಠಿಸಲಾಗುತ್ತದೆ.
Published by:vanithasanjevani vanithasanjevani
First published: