HOME » NEWS » Tech » SAVE UP TO RS 12000 IN THE BENELLI DIWALI SPARKLE OFFER ON THE RED AND BLACK COLOUR MODEL HG

Benelli Diwali offer: ಇಂಪಿರಿಯಲ್​ 400 ಬೈಕಿನ ಮೇಲೆ ಆಕರ್ಷಕ ಕೊಡುಗೆ!

Diwali Sparkle Offer: ಬೆನೆಲ್ಲಿ ಇಂಪಿರಿಯಲ್​ 400 ಬಿಎಸ್​6 ಬೈಕ್​ ಸಿಂಗರ್​ ಸಿಲಿಂಡರ್​ ಮತ್ತು ಏರ್​ ಕೂಲ್ಡ್​ 374ಸಿಸಿ ಎಂಜಿನ್​ ಹೊಂದಿದೆ.

news18-kannada
Updated:November 4, 2020, 2:46 PM IST
Benelli Diwali offer: ಇಂಪಿರಿಯಲ್​ 400 ಬೈಕಿನ ಮೇಲೆ ಆಕರ್ಷಕ ಕೊಡುಗೆ!
ಇಂಪಿರಿಯಲ್ 400
  • Share this:
ಬೆನೆಲ್ಲಿ ಇಂಡಿಯಾ ಸಂಸ್ಥೆ ‘ದಿವಾಲಿ ಸ್ಪಾರ್ಕ್​ ಆಫರ್​‘ ಹೊರಡಿಸಿದೆ. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗಾಗಿ ಇಂಪಿರಿಯಲ್​ 400 ಬೈಕಿನ ಮೇಲೆ ಆಕರ್ಷಕ ಕೊಡುಗೆ ನೀಡುತ್ತಿದೆ. ಬಿಎಸ್​6 ಎಂಜಿನ್​ ಹೊಂದಿರುವ ಬೆನೆಲ್ಲಿ ಇಂಪಿರಿಯಲ್​ 400 ಬೈಕ್​ ಮೇಲೆ 12 ಸಾವಿರ ರೂ ಉಳಿತಾಯ ಮಾಡುವ ಅವಕಾಶವನ್ನು ನೀಡಿದೆ.

ಸದ್ಯ ಕೆಂಪು ಮತ್ತು ಕಪ್ಪು ಬಣ್ಣದ ಬೈಕಿನ ಮೇಲೆ ಈ ಆಫರ್​ ನೀಡುತ್ತಿದೆ. ಜೊತೆಗೆ 4,999 ರೂ.ವಿನ ಇಎಮ್​ಐ ಆಯ್ಕೆಯನ್ನು ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, 6 ಸಾವಿರ ನೀಡುವ ಮೂಲಕ ಆನ್​ಲೈನ್​ನಲ್ಲಿ ಇಂಪಿರಿಯಲ್​ 400 ಬೈಕ್​ ಬುಕ್​ ಮಾಡಬಹುದಾದ ಅವಕಾಶವನ್ನು ನೀಡುತ್ತಿದೆ.

ಬೆನೆಲ್ಲಿ ಇಂಪಿರಿಯಲ್​ 400 ಬಿಎಸ್​6 ಬೈಕ್​ ಸಿಂಗರ್​ ಸಿಲಿಂಡರ್​ ಮತ್ತು ಏರ್​ ಕೂಲ್ಡ್​ 374ಸಿಸಿ ಎಂಜಿನ್​ ಹೊಂದಿದೆ. 21ಹೆಚ್​ಪಿ ಪವರ್​ ಮತ್ತು 29ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. 5 ಸ್ಪೀಡ್​ ಗೇರ್​ ಬಾಕ್ಸ್​ ಹೊಂದಿರುವ ಈ ಬೈಕ್​ನಲ್ಲಿ​ ಎಲೆಕ್ಟ್ರಿಕ್​ ಸ್ಟ್ರಾಟರ್​ ನೀಡಲಾಗಿದೆ.

135ಕೆಎಮ್​ಪಿಹೆಚ್​ ಟಾಪ್​ ಸ್ಟೀಡ್​ ಹೊಂದಿದ್ದು, ಡುಯೆಲ್​​​​ ಚಾನೆಲ್​​ ಎಬಿಎಸ್​​ ಅಳವಡಿಸಲಾಗಿದೆ. ಇದರ ಬೆಲೆ 1.99 ಲಕ್ಷ ರೂ(ಎಕಸ್​ ಶೋ.ರೂಂ) ಆಗಿದೆ.
First published: November 4, 2020, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories