Football World Cup 2018

ಇನ್ಮುಂದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ SARAHAH ಆ್ಯಪ್​ ಇರಲ್ಲ..!


Updated:March 5, 2018, 4:50 PM IST
ಇನ್ಮುಂದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ SARAHAH ಆ್ಯಪ್​ ಇರಲ್ಲ..!

Updated: March 5, 2018, 4:50 PM IST
- ನ್ಯೂಸ್ 18 ಕನ್ನಡ

ಜನಪ್ರಿಯ ಸಾರಾಹ್(SARAHAH)​ ಅಪ್ಲಿಕೇಷನ್​ನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್​ ಪ್ಲೇಸ್ಟೋರ್​ನಿಂದ ತೆಗೆದುಹಾಕಲಾಗಿದೆ. ಕಳೆದ ವರ್ಷ ಪ್ರಾರಂಭವಾದ ಈ ಅಪ್ಲಿಕೇಷನ್​ ಕಡಿಮೆ ಅವಧಿಯಲ್ಲೇ ಹೆಚ್ಚಿನ ಜನಪ್ರಿಯತೆ ಗಳಿಸಿತು. ಇದೀಗ ಕಿರುಕುಳ ಪ್ರಚಾರ ಮಾಡುವಂತಹ ಆರೋಪದ ಮೇಲೆ ಈ ಅಪ್ಲಿಕೇಷನ್​ನ್ನು ತೆಗೆಯಲಾಗಿದೆ.

ಏನಿದು ಸಾರಾಹ್​ ಅಪ್ಲಿಕೇಶನ್?
'ಸಾರಾಹ್' ಜನಪ್ರಿಯ ಅನಾಮಧೇಯ ಸಂದೇಶ ಕಳಿಹಿಸುವ ಒಂದು  ಆ್ಯಪ್.  ಜಗತ್ತಿನಾದ್ಯಂತ ಸುಮಾರು 30 ಕೋಟಿ ಬಳಕೆದಾರರು ಇದ್ದಾರೆ. ಸೌದಿ ಅರೇಬಿಯಾದಲ್ಲಿ ಈ ಅಪ್ಲಿಕೇಶನ್​ನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್​  ಸಹಾಯದಿಂದ ನಿಮ್ಮ ಗುರುತನ್ನು ಬಹಿರಂಗಪಡಿಸದೆ ನೀವು ಯಾರಿಗೆ ಬೇಕಾದರೂ ಸಂದೇಶ ಕಳುಹಿಸಬಹುದು.

BBC ವರದಿಯ ಪ್ರಕಾರ, ಆಸ್ಟ್ರೇಲಿಯಾದ ಕತ್ರಿನಾ ಕಾಲಿನ್ಸ್ ನ   13 ವರ್ಷದ ಮಗಳಿಗೆ ಈ ಮೆಸೇಜಿಂಗ್ ಅಪ್ಲಿಕೇಶನ್ ಫ್ಲಾಟ್​ಫಾರ್ಮ್​ನಲ್ಲಿ ಅವಮಾನಕರ ಸಂದೇಶಗಳನ್ನು ಕಳುಹಿಸಲಾಗಿತ್ತು. ಹೀಗಾಗಿ ಕಾಲಿನ್ಸ್​  ಈ ಅಪ್ಲಿಕೇಷನ್​ ನಿಷೇಧಕ್ಕೆ ಮನವಿ ಸಲ್ಲಿಸಿದ್ದರು. ಸುಮಾರು 470,000 ಜನರು ಈ ಮನವಿಗೆ ಸಹಿ ಹಾಕಿದ್ದಾರೆ.

ವರದಿಗಳ ಪ್ರಕಾರ,  ಇದೀಗ ಗೂಗಲ್ ಆ್ಯಪಲ್​ ಪ್ಲೇಸ್ಟೋರ್​ಗಳಿಂದ ಈ ಅಪ್ಲಿಕೇಷನ್​ನ್ನು ತೆಗೆದುಹಾಕಲಾಗಿದ್ದು, ಡೌನ್​ಲೋಡ್ ಮಾಡಲು ಸಾಧ್ಯವಿಲ್ಲ. ಈಗಾಗಲೇ ಬಳಸುತ್ತಿರುವವರು ಅದನ್ನು ಮುಂದುವರಿಸಬಹುದು ಎಂದು ತಿಳಿದು ಬಂದಿದೆ. ವಿಶ್ವದಾದ್ಯಂತ ಸುಮಾರು 30 ಕೋಟಿ ಬಳಕೆದಾರರು ಈ ಅಪ್ಲಿಕೇಶನ್​ನಲ್ಲಿ  ತಮ್ಮ ಖಾತೆಯನ್ನು ತೆರೆದಿದ್ದಾರೆ.

 
First published:March 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ