ಸಂಕ್ರಾಂತಿ ಬಂತೆಂದರೆ ಮತ್ತೆ ಹಬ್ಬ ಶುರುವಾಗಿದೆ ಎಂದರ್ಥ. ಈ ಸಂದರ್ಭದಲ್ಲಿ ಎಲ್ಲಾ ಸ್ಮಾರ್ಟ್ಫೋನ್ ಬ್ರಾಂಡ್ಗಳು (Smartphone Brands) ತನ್ನ ಪ್ರೊಡಕ್ಟ್ಗಳ ಮಾರಾಟವನ್ನು ಹೆಚ್ಚಿಸಲು ಕೆಲಸ ಮಾಡುತ್ತಿರುತ್ತವೆ. ಇದೀಗ ಸಂಕ್ರಾಂತಿ ಆಫರ್ನಲ್ಲಿ (Sankranti Offers) ಅದ್ಭುತ ವೈಶಿಷ್ಟ್ಯಗಳೊಂದಿಗೆ ವಿವಿಧ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಮಾರ್ಟ್ಫೋನ್ ಕಂಪೆನಿಗಳು ಕೂಡ ಯಾವುದೇ ಸಂಭ್ರಮದ ದಿನಗಳು, ಹಬ್ಬಗಳು ಬಂದಾಗ ತನ್ನ ಪ್ರೊಡಕ್ಟ್ಗಳ ಉತ್ಪಾದನೆ ಹೆಚ್ಚು ಮಾಡುತ್ತದೆ. ಜೊತೆಗೆ ಅದರ ಬೆಲೆಗಳ ಮೇಲೂ ರಿಯಾಯಿತಿಗಳನ್ನು ಘೋಷಿಸುತ್ತದೆ. ಈ ಸ್ಮಾರ್ಟ್ಫೋನ್ಗಳು ಕಡಿಮೆ ಬೆಲಯನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಫೀಚರ್ಸ್ಗಳನ್ನು (Features) ಇದು ಹೊಂದಿರುತ್ತದೆ. ಗ್ರಾಹಕರು ಕೂಡ ಇದೇ ರೀತಿಯ ಉದ್ದೇಶವನ್ನು ಇಟ್ಟುಕೊಂಡು ಸ್ಮಾರ್ಟ್ಫೋನ್ಗಳನ್ನು ಖರೀದಿ ಮಾಡುತ್ತಾರೆ.
ಇದೀಗ ಮಾರುಕಟ್ಟೆಯಲ್ಲಿ 15,000 ರೂಪಾಯಿ ಒಳಗಿನ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸ್ಮಾರ್ಟ್ಫೋನ್ಗಳನ್ನು ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹಾಗಿದ್ರೆ ಈ ಸಂಕ್ರಾಂತಿ ಆಫರ್ನಲ್ಲಿರುವ ಸ್ಮಾರ್ಟ್ಫೋನ್ಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್23 5ಜಿ
ಅದ್ಭುತ ಫೀಚರ್ಸ್ಗಳೊಂದಿಗೆ ಬಜೆಟ್ ಶ್ರೇಣಿಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳ ಪಟ್ಟಿಯಲ್ಲಿ ಈ ಸ್ಮಾರ್ಟ್ಫೋನ್ ಕೂಡ ಒಂದು. ಈ ಹ್ಯಾಂಡ್ಸೆಟ್ 6.6-ಇಂಚಿನ ಪೂರ್ಣ ಹೆಚ್ಡಿ+ ಎಲ್ಸಿಡಿ ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಅಮೆಜಾನ್ ರಿಪಬ್ಲಿಕ್ ಡೇ ಸೇಲ್; 19 ಸಾವಿರದ ಸ್ಮಾರ್ಟ್ವಾಚ್ ಅನ್ನು ಕೇವಲ 1,799ಕ್ಕೆ ಖರೀದಿಸಿ
ಇನ್ನು ಈ ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 750G SoC ಚಿಪ್ಸೆಟ್ನಿಂದ ನಡೆಸಲ್ಪಡುತ್ತಿದೆ. ಇನ್ನು ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 6ಜಿಬಿ ರ್ಯಾಮ್ ಮತ್ತು 128ಜಿಬಿ ರೂಪಾಂತರವನ್ನು ರೂ.14,999 ಗೆ ಪಡೆಯಬಹುದು.
ಮೊಟೊರೊಲಾ ಜಿ62 5ಜಿ
ಈ ಸ್ಮಾರ್ಟ್ಫೋನ್ನ 6ಜಿಬಿ ರ್ಯಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿದ ಸ್ಮಾರ್ಟ್ಫೋನ್ ಅನ್ನು ಪ್ರಸ್ತುತ ರೂ.14,999 ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದು 6.5-ಇಂಚಿನ ಫುಲ್ ಹೆಚ್ಡಿ+ಐಪಿಎಸ್ ಡಿಸ್ಪ್ಲೇ ಜೊತೆಗೆ 120 Hz ರಿಫ್ರೆಶ್ ರೇಟ್ನೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನಾಪ್ಡ್ರಾಗನ್ 695 ಎಸ್ಓಸಿ ಪ್ರೊಸೆಸರ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್, 16ಎಮ್ಪಿ ಫ್ರಂಟ್ ಕ್ಯಾಮೆರಾ, 5000 mAh ಬ್ಯಾಟರಿಯಂತಹ ಫೀಚರ್ಸ್ಗಳನ್ನು ಒಳಗೊಂಡಿದೆ.
ಇನ್ಫಿನಿಕ್ಸ್ ನೋಟ್ 12 5ಜಿ
ಇನ್ಫಿನಿಕ್ಸ್ನ ಈ 5ಜಿ ಫೋನ್ ಅತ್ಯುತ್ತಮ ಫೀಚರ್ಸ್ಗಳನ್ನು ಹೊಂದಿದೆ. ಇದು 6.7-ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ ಜೊತೆಗೆ 90 Hz ರಿಫ್ರೆಶ್ ರೇಟ್ನೊಂದಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 810 ಎಸ್ಓಸಿನಿಂದ ಕಾರ್ಯನಿರ್ವಹಿಸುತ್ತದೆ.
ಈ ಮೊಬೈಲ್ನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50ಎಮ್ಪಿ ಪ್ರೈಮರಿ ಕ್ಯಾಮೆರಾ, 2ಎಮ್ಪಿ ಡೆಪ್ತ್ ಸೆನ್ಸಾರ್ ಜೊತೆಗೆ ಎಐ ಲೆನ್ಸ್. ಅನ್ನು ಹೊಂದಿದೆ. ಜೊತೆಗೆ 16ಎಮ್ಪಿ ಫ್ರಂಟ್ ಕ್ಯಾಮೆರಾ, 5000 mAh ಬ್ಯಾಟರಿಯಂತಹ ವೈಶಿಷ್ಟ್ಯಗಳು ಈ ಹ್ಯಾಂಡ್ಸೆಟ್ನಲ್ಲಿವೆ. ಇನ್ಫಿನಿಕ್ಸ್ ನೋಟ್ 12 6ಜಿಬಿ ರ್ಯಾಮ್ ಮತ್ತು 64 ಜಿಬಿ ರೂಪಾಂತರವು ರೂ.12,999 ಕ್ಕೆ ಲಭ್ಯವಿದೆ.
ಪೋಕೋ ಎಮ್4 ಪ್ರೋ 5ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ