TikTok: ಟಿಕ್​ಟಾಕ್​ ಬ್ಯಾನ್​ ಅಭಿಯಾನಕ್ಕೆ ಕೈ ಜೋಡಿಸಿದ ಸ್ಯಾಂಡಲ್​ವುಡ್​ ನಿರ್ದೇಶಕರು!

#BanTikTok ​ಅಭಿಯಾನ ಪ್ರಾರಂಭವಾದ ನಂತರ ಆ್ಯಪ್​ ಬಳಸುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೆಚ್ಚಿನ ಜನರು ಟಿಕ್​ ಟಾಕ್​ ಅನ್​ ಇನ್​​ಸ್ಟಾಲ್​ ಮಾಡಿ ಯ್ಯೂಟೂಬ್​ನತ್ತ ಮೊರೆ ಹೋಗಿದ್ದಾರೆ.

news18-kannada
Updated:May 21, 2020, 7:07 AM IST
TikTok: ಟಿಕ್​ಟಾಕ್​ ಬ್ಯಾನ್​ ಅಭಿಯಾನಕ್ಕೆ ಕೈ ಜೋಡಿಸಿದ ಸ್ಯಾಂಡಲ್​ವುಡ್​ ನಿರ್ದೇಶಕರು!
ಎ.ಪಿ ಅರ್ಜುನ್. ಪವನ್​ ಒಡೆಯರ್​​​, ಸಂತೋಷ್​ ಆನಂದ್​ ರಾಮ್​​
  • Share this:
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಟಿಕ್​ಟಾಕ್​ ಬ್ಯಾನ್​ ಮಾಡುವ ಬಗ್ಗೆ ಅಭಿಯಾನ ಪ್ರಾರಂಭವಾಗಿದೆ. ಸಾಕಷ್ಟು ಜನರು BanTikTok ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ಇದೀಗ ಸ್ಯಾಂಡಲ್​ವುಡ್​ನ​ ಕೆಲವು ನಿರ್ದೇಶಕರು ಕೂಡ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್​ ಆನಂದ್​ ರಾಮ್​​ ಕೂಡ ಟಿಕ್​ಟಾಕ್​​ ಬ್ಯಾನ್​ ಮಾಡುವ ಬಗ್ಗೆ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇವರ ಟ್ವೀಟ್​ಗೆ ಸಾಕಷ್ಟು ಜನರು ಕಾಮೆಂಟ್​ ಬರೆದಿದ್ದಾರೆ. ಇನ್ನು ನಿರ್ದೇಶಕ ಪವನ್​ ಒಡೆಯರ್​​​, ಎ.ಪಿ ಅರ್ಜುನ್​ ಕೂಡ ಕೂಡ ಟಿಕ್​ಟಾಕ್​ ಆ್ಯಪ್​ ಬಳಸದಂತೆ ಹೇಳಿದ್ದಾರೆ.

ಇತ್ತೀಚೆಗೆ ಬಾಲಿವುಡ್​ನ ಹಿರಿಯ ನಟ ಪರೇಶ್​​ ರಾವಲ್​​ #BanTikTok ಎಂದು ಟ್ವೀಟ್​ ಮಾಡಿದ್ದರು. ಅವರ ಟ್ವೀಟ್​ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.

 


#BanTikTok ​ ಅಭಿಯಾನ ಪ್ರಾರಂಭವಾದ ನಂತರ ಆ್ಯಪ್​ ಬಳಸುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೆಚ್ಚಿನ ಜನರು ಟಿಕ್​ಟಾಕ್​ ಅನ್​ ಇನ್​​ಸ್ಟಾಲ್​ ಮಾಡಿ ಯ್ಯೂಟೂಬ್​ನತ್ತ ಮೊರೆ ಹೋಗಿದ್ದಾರೆ. ಅದಕ್ಕಾಗಿ #BringBackcarryMinatiyoutubeVideo ಅಭಿಯಾನವೂ ಆರಂಭಿಸಿದ್ದಾರೆ.

ಇನ್ನು ಕಳೆದ ವಾರ ಪ್ಲೇ ಸ್ಟೋರ್​ನಲ್ಲಿ ಟಿಕ್​ಟಾಕ್​ ಆ್ಯಪ್​​​ 4.6 ರೇಟಿಂಗ್​ ಹೊಂದಿತ್ತು. ಬ್ಯಾನ್​​ ಟಿಕ್​ಟಾಕ್​ ಅಭಿಯಾನ ಪ್ರಾರಂಭವಾದ ನಂತರ 2.0ಗೆ ಇಳಿದಿದೆ. ಸದ್ಯ 1.3 ರೇಟಿಂಗ್​​ನಲ್ಲಿದೆ.

ರಶ್ಮಿಕಾ ಬದಲು ನನಗೆ ಬೇರೆ ಯಾವ ಹೆಸರು ಸೂಕ್ತ ಹೇಳಿ?; ಅಭಿಮಾನಿಗಳಲ್ಲಿ ಲಿಲ್ಲಿ ಪ್ರಶ್ನೆ
First published: May 21, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading