ದಸರಾ ಭರ್ಜರಿ ಆಫರ್: ಸ್ಯಾಮ್​ಸಂಗ್ ಮೊಬೈಲ್​ ಮೇಲೆ ಸಿಗುತ್ತಿದೆ 30 ಸಾವಿರ ರೂ. ರಿಯಾಯಿತಿ

zahir | news18
Updated:October 10, 2018, 4:26 PM IST
ದಸರಾ ಭರ್ಜರಿ ಆಫರ್: ಸ್ಯಾಮ್​ಸಂಗ್ ಮೊಬೈಲ್​ ಮೇಲೆ ಸಿಗುತ್ತಿದೆ 30 ಸಾವಿರ ರೂ. ರಿಯಾಯಿತಿ
zahir | news18
Updated: October 10, 2018, 4:26 PM IST
-ನ್ಯೂಸ್ 18 ಕನ್ನಡ

ಅಮೆಜಾನ್ ಗ್ರೇಟ್​ ಇಂಡಿಯನ್ ಫೆಸ್ಟಿವಲ್ ಸೇಲ್​ ಬುಧವಾರದಿಂದ (ಅಕ್ಟೋಬರ್ 10) ಆರಂಭವಾಗಿದೆ. ಇಲ್ಲಿ ಮೊಬೈಲ್, ಫ್ಯಾಷನ್, ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಹಲವು ಪ್ರೊಡಕ್ಟ್​ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಹಲವು ಕಂಪನಿಗಳು ಕ್ಯಾಶ್​ಬ್ಯಾಕ್ ಆಫರ್​ಗಳನ್ನು ಒದಗಿಸಿದೆ. ಈ ಬೃಹತ್ ಆನ್​ಲೈನ್​ ಮೇಳದಲ್ಲಿ ಅಮೆಜಾನ್ ಜೊತೆ ಸ್ಯಾಮ್​ಸಂಗ್ ಇಂಡಿಯಾ ಕೂಡ ಕೈ ಜೋಡಿಸಿದ್ದು, ತನ್ನ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​ ನೀಡಿದೆ. ಅಕ್ಟೋಬರ್ 10 ರಿಂದ 15ರವರೆಗೆ ನಡೆಯುವ ಈ ಫೆಸ್ಟೀವ್ ಸೇಲ್​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್-8​ ಮೊಬೈಲ್​​ ಮೇಲೆ ಬರೋಬ್ಬರಿ 30,700 ರೂ. ಡಿಸ್ಕೌಂಟ್​ ನೀಡಿ ಅಚ್ಚರಿ ಮೂಡಿಸಿದ್ದಾರೆ. 74,690 ರೂ. ಮೂಲ ಬೆಲೆಯ ನೋಟ್​-8 ಫೋನ್​ನ್ನು ಕೇವಲ 43,990 ರೂ.ನಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲದೆ ಇದರ ಮೇಲೆ ನೋ ಕಾಸ್ಟ್​ EMI ರೀತಿಯ ಹಲವು ಕೊಡುಗೆಗಳನ್ನು ಕೂಡ ಪಡೆಯಬಹುದಾಗಿದೆ.

ಕಳೆದ ಜನವರಿಯಲ್ಲಿ ಬಿಡುಗಡೆಯಾಗಿದ್ದ Samsung Galaxy A8+ ಮೊಬೈಲ್​ನ್ನು 32,990 ರೂ. ಬದಲಾಗಿ 23,990 ರೂ.ಗೆ ಕೊಂಡುಕೊಳ್ಳುವ ಅವಕಾಶ ಕೂಡ ಈ ಇಲ್ಲಿದೆ. ಈ ಮೊಬೈಲ್​ನ್ನು EMI ಮೂಲಕ ಖರೀದಿಸಲು ಬಯಸುವ ಗ್ರಾಹಕರಿಗೆ ನೊ ಕಾಸ್ಟ್​ ಸೌಲಭ್ಯ ಕೂಡ ಸಿಗುತ್ತದೆ.

Galaxy S9 ಮೊಬೈಲ್​ ಮೇಲೆ ಭಾರೀ ರಿಯಾಯಿತಿ ನೀಡಲಾಗಿದ್ದು, 64GB S9 ಫೋನ್​ನ್ನು 57,900 ರೂ. ಬದಲಾಗಿ 42,990 ರೂ.ಗೆ ಖರೀದಿಸಬಹುದು. 128GB ಮೆಮೊರಿಯ ಫೋನ್​ನ್ನು 44,990 ರೂ.(ಮೂಲ ಬೆಲೆ 61,900ರೂ.) ಮತ್ತು 256GB ಸ್ಟ S9 ಸ್ಮಾರ್ಟ್​ಫೋನ್​ನ್ನು 16,910ರೂ.ಗಳ ರಿಯಾಯಿತಿ ಮೂಲಕ 65,900 ರೂ. ಹೊರತಾಗಿ ಕೇವಲ 48,990ರೂ.ಗೆ ತಮ್ಮದಾಗಿಸಿಕೊಳ್ಳಬಹುದು.

ಇದಲ್ಲದೆ Galaxy On7 Prime 4GB/64GB ಮೆಮೊರಿಯ ಸ್ಮಾರ್ಟ್​​ಫೋನ್​ಗಳ ಮೇಲೂ ಭರ್ಜರಿ ರಿಯಾಯಿತಿ ಕೊಡಲಾಗಿದೆ. 14,990 ಬೆಲೆಯ ಗ್ಯಾಲಾಕ್ಸಿ ಒನ್7 ಪ್ರೈಮ್​ನ್ನು 10,990 ರೂ.ಗೆ ಖರೀದಿಸಬಹುದು. Galaxy On7 ಫೋನ್​ 11,190 ಬದಲಾಗಿ ಕೇವಲ 6,790 ರೂ.ಗೆ ಸಿಗುತ್ತಿದೆ. 9,190ರೂ.ನ Galaxy On5 Pro ಮೊಬೈಲ್​ಗಳನ್ನು ಕೇವಲ 5,990ರೂ.ಗೆ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಆಫರ್​ ಬೆಲೆಗಳ ಹೊರತಾಗಿಯೂ SBI ಕ್ರೆಡಿಟ್ ಕಾರ್ಡ್​-ಡೆಬಿಟ್​ ಕಾರ್ಡ್​ ಬಳಕೆದಾರರಿಗೆ 10% ತ್ವರಿತ ರಿಯಾಯಿತಿಗಳನ್ನು ಸ್ಯಾಮ್​ಸಂಗ್ ಒದಗಿಸುತ್ತಿದೆ.
First published:October 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ