Samsung's Blue Fest Sale: ಸ್ಮಾರ್ಟ್​ ಟಿವಿ, ಎಸಿ, ವಾಷಿಂಗ್​ ಮೆಷಿನ್​ ಮೇಲೆ ಭರ್ಜರಿ ರಿಯಾಯಿತಿ

Samsung Blue Fest sale: ಸ್ಯಾಮ್‌ಸಂಗ್‌ 'ಬ್ಲೂ ಫೆಸ್ಟ್' ಸೇಲ್​ ನಡೆಸುತ್ತಿದೆ. ಈ ಮಾರಾಟದಲ್ಲಿ ಸ್ಯಾಮ್​ಸಂಗ್​ ಕಂಪನಿಯ ಕೆಲವು ಉತ್ಮನ್ನಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಅಂದಹಾಗೆಯೇ ಗ್ರಾಹಕರಿಗೆ ಸ್ಯಾಮ್​ಸಂಗ್​ ವಿತರಿಸುವ ಕೊಡುಗೆಗಳು ಮತ್ತು ಡೀಲ್‌ಗಳನ್ನು ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೋಳಿ (Holi) ಹಬ್ಬದ ಸಡಗರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಅಂತಹ ಪರಿಸ್ಥಿತಿಯಲ್ಲಿ ಶಾಪಿಂಗ್ (Shopping) ಮಾಡಲು   ಯೋಚಿಸುತ್ತಿದ್ದರೆ, ಸ್ಯಾಮ್‌ಸಂಗ್ (Samsung) ಕಂಪನಿ ಗ್ರಾಹಕರಿಗೆ ಸಹಾಯ ಮಾಡುತ್ತದೆ. ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್ (Samsung Online Store) ಮತ್ತು ಎಲ್ಲಾ ಚಿಲ್ಲರೆ ಅಂಗಡಿಗಳು ಸ್ಮಾರ್ಟ್ ಟಿವಿಗಳು (Smart Tv), ವಾಷಿಂಗ್ ಮೆಷಿನ್‌ಗಳು (Washing Machine) ಮತ್ತು ಫ್ರಿಜ್‌ಗಳಂತಹ ಅನೇಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ.

    ಸ್ಯಾಮ್‌ಸಂಗ್‌ 'ಬ್ಲೂ ಫೆಸ್ಟ್' ಸೇಲ್​ ನಡೆಸುತ್ತಿದೆ. ಈ ಮಾರಾಟದಲ್ಲಿ ಸ್ಯಾಮ್​ಸಂಗ್​ ಕಂಪನಿಯ ಕೆಲವು ಉತ್ಮನ್ನಗಳ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಅಂದಹಾಗೆಯೇ ಗ್ರಾಹಕರಿಗೆ ಸ್ಯಾಮ್​ಸಂಗ್​ ವಿತರಿಸುವ ಕೊಡುಗೆಗಳು ಮತ್ತು ಡೀಲ್‌ಗಳನ್ನು ನೋಡೋಣ.

    ಸ್ಯಾಮ್‌ಸಂಗ್‌ನ 'ಬ್ಲೂ ಫೆಸ್ಟ್' ಮಾರಾಟ 

    ಮಾರ್ಚ್ 12 ರಿಂದ ಸ್ಯಾಮ್‌ಸಂಗ್ 'ಬ್ಲೂ ಫೆಸ್ಟ್' ಮಾರಾಟವನ್ನು ಘೋಷಿಸಿದೆ. ಇದರಲ್ಲಿ ನಿಮಗೆ ಎಲ್ಲಾ ರೀತಿಯ ಗೃಹೋಪಯೋಗಿ ಉಪಕರಣಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸ್ಯಾಮ್‌ಸಂಗ್‌ನ ಈ ವಿಶೇಷ ಮಾರಾಟವು ಏಪ್ರಿಲ್ 30, 2022 ರವರೆಗೆ ಮುಂದುವರಿಯುತ್ತದೆ ಮತ್ತು ಇದರಲ್ಲಿ ನಿಮಗೆ ತ್ವರಿತ ರಿಯಾಯಿತಿಗಳು ಮತ್ತು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಜೊತೆಗೆ ಸುಲಭ EMI ಮತ್ತು ಶೂನ್ಯ ಡೌನ್‌ಪೇಮೆಂಟ್ ಆಯ್ಕೆಗಳನ್ನು ನೀಡಲಾಗುತ್ತದೆ.

    ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿ ಮತ್ತು ಎಸಿ ಖರೀದಿಸಿ

    'ಬ್ಲೂ ಫೆಸ್ಟ್' ಸಮಯದಲ್ಲಿ ನೀವು Samsung Neo QLED, QLED & Crystal 4K UHD ಟಿವಿಗಳ ಪ್ರೀಮಿಯಂ ಶ್ರೇಣಿಯನ್ನು 25% ವರೆಗೆ ತ್ವರಿತ ರಿಯಾಯಿತಿ, 20% ವರೆಗೆ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಮತ್ತು ಶೂನ್ಯ ಡೌನ್‌ಪೇಮೆಂಟ್‌ನಂತಹ ಸುಲಭ ಪಾವತಿ ಆಯ್ಕೆಗಳೊಂದಿಗೆ ಖರೀದಿಸಬಹುದು.

    AC ಗಳ ಕುರಿತು ಮಾತನಾಡುವುದಾದರೆ, ವಿಂಡ್‌ಫ್ರೀ ಏರ್ ಕಂಡೀಷನರ್‌ಗಳನ್ನು ಖರೀದಿಸುವಾಗ, ನೀವು 20% ವರೆಗಿನ ಕ್ಯಾಶ್‌ಬ್ಯಾಕ್, ರೂ 990 ರ ಆರಂಭಿಕ EMI ಮತ್ತು ಸಮಗ್ರ ಐದು ವರ್ಷಗಳ ವಾರಂಟಿಯಂತಹ ವೈಶಿಷ್ಟ್ಯಗಳನ್ನು ಪಡೆಯಬಹುದು.

    ಇದನ್ನೂ ಓದಿ: Android ಬಳಕೆದಾರರಿಗೆ ಯೂಟ್ಯೂಬ್ ತರುತ್ತಿದೆ “ಟ್ರಾನ್ಸ್‌ಕ್ರಿಪ್ಷನ್‌” ವೈಶಿಷ್ಟ್ಯ..!

    ವಾಷಿಂಗ್ ಮೆಷಿನ್ ಮತ್ತು ಫ್ರಿಡ್ಜ್ ಮೇಲೆಯೂ ರಿಯಾಯಿತಿ ಲಭ್ಯವಿದೆ

    ಬಟ್ಟೆ ತೊಳೆಯುವ ಯಂತ್ರವನ್ನು ಖರೀದಿಸಲು ಬಯಸಿದರೆ AI EcoBubble ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಶ್ರೇಣಿಯನ್ನು 29,900 ರೂಪಾಯಿಗಳ ವಿಶೇಷ ಬೆಲೆಯಲ್ಲಿ ಖರೀದಿಸಬಹುದು. ಇದು ಮಾತ್ರವಲ್ಲದೆ, ಈ ಡೀಲ್‌ಗಳಲ್ಲಿ ರೂ.990 ರಿಂದ ಪ್ರಾರಂಭವಾಗುವ 20% ಕ್ಯಾಶ್‌ಬ್ಯಾಕ್, ಶೂನ್ಯ ಡೌನ್‌ಪೇಮೆಂಟ್ ಮತ್ತು EMI ಗಳ ಪ್ರಯೋಜನಗಳನ್ನು ಸಹ ನೀವು ಪಡೆಯಬಹುದು.

    ಅಂತಹ ಕೊಡುಗೆಗಳನ್ನು ಫ್ರಿಜ್‌ನಲ್ಲಿಯೂ ಕಾಣಬಹುದು. ಡಿಜಿ-ಟಚ್ ಕೂಲ್ 5-ಇನ್-1 ಸಿಂಗಲ್ ಡೋರ್ ರೆಫ್ರಿಜರೇಟರ್ ಅನ್ನು 16,700 ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದು. ಇದರಲ್ಲಿ ನೀವು 10% ವರೆಗೆ ಕ್ಯಾಶ್‌ಬ್ಯಾಕ್, ರೂ 990 ರ EMI ಪ್ರಾರಂಭ ಮತ್ತು ಶೂನ್ಯ ಡೌನ್‌ಪೇಮೆಂಟ್‌ನಂತಹ ಆಯ್ಕೆಗಳನ್ನು ಸಹ ಪಡೆಯುತ್ತೀರಿ.

    ಇದನ್ನೂ ಓದಿ: Smartphones: 15 ಸಾವಿರದ ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು..

    ನಾವು ನಿಮಗೆ ಮೊದಲೇ ಹೇಳಿದಂತೆ ಸ್ಯಾಮ್‌ಸಂಗ್‌ನ ಈ ಬ್ಲೂ ಫೆಸ್ಟ್ ಮಾರಾಟವು ಏಪ್ರಿಲ್ 30, 2022 ರವರೆಗೆ ಸ್ಯಾಮ್‌ಸಂಗ್‌ನ ಆನ್‌ಲೈನ್ ಸ್ಟೋರ್ ಮತ್ತು ದೇಶದ ಎಲ್ಲಾ ಸಣ್ಣ ಮತ್ತು ದೊಡ್ಡ ಚಿಲ್ಲರೆ ಅಂಗಡಿಗಳಲ್ಲಿ ಲೈವ್ ಆಗಿರುತ್ತದೆ.
    Published by:Harshith AS
    First published: