ಭಾರತದಲ್ಲಿಂದು Samsung Galaxy A-series ಈವೆಂಟ್! Galaxy A73 ಮತ್ತು Galaxy A33 ಬಿಡುಗಡೆಗೆ ಕಾದು ಕುಳಿತ ಜನರು!

Samsung Galaxy A-series: ಭಾರತದಲ್ಲಿ ಗ್ಯಾಲಕ್ಸಿ ಎ73 ಮತ್ತು ಗ್ಯಾಲಕ್ಸಿ ಎ33 5ಜಿ ಫೋನ್‌ಗಳನ್ನು ಘೋಷಿಸಬಹುದು. ಬ್ರ್ಯಾಂಡ್ ಈಗಾಗಲೇ ದೇಶದಲ್ಲಿ ಗ್ಯಾಲಕ್ಸಿ ಎ53 ಅನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಮೂರು ಸಾಧನಗಳನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸ್ಯಾಮ್‌ಸಂಗ್ (Samsung)‌ ತನ್ನ ಹೊಸ ಗ್ಯಾಲಕ್ಸಿ ಎ-ಸೀರೀಸ್ (Galaxy A- Series) ಈವೆಂಟ್ ಅನ್ನು ಇಂದು ಭಾರತದಲ್ಲಿ ಆಯೋಜಿಸಲು ಸಜ್ಜಾಗಿದ್ದು, ಈ ಈವೆಂಟ್‌ನಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಗಳನ್ನು (Smartphones) ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಭಾರತದಲ್ಲಿ ಗ್ಯಾಲಕ್ಸಿ ಎ73 (Galaxy A73) ಮತ್ತು ಗ್ಯಾಲಕ್ಸಿ ಎ33 (Galaxy A33) 5ಜಿ ಫೋನ್‌ಗಳನ್ನು ಘೋಷಿಸಬಹುದು. ಬ್ರ್ಯಾಂಡ್ ಈಗಾಗಲೇ ದೇಶದಲ್ಲಿ ಗ್ಯಾಲಕ್ಸಿ ಎ53 ಅನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಮೂರು ಸಾಧನಗಳನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ (Market) ಬಿಡುಗಡೆ ಮಾಡಲಾಯಿತು. ಆದ್ದರಿಂದ ಇತರ ಎರಡು ಸ್ಮಾರ್ಟ್‌ಫೋನ್‌ಗಳು ಇಂದು ತಮ್ಮ ಪದಾರ್ಪಣೆ ಮಾಡುವ ಹೆಚ್ಚಿನ ಸಾಧ್ಯತೆಗಳಿವೆ. ಈ ಗ್ಯಾಲಕ್ಸಿ ಎ-ಸೀರೀಸ್ ಹ್ಯಾಂಡ್ ಸೆಟ್‌ಗಳ ಬಗ್ಗೆ ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದರೆ, ಅವುಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಲ್ಲಿ ತಿಳಿಯಿರಿ.

  ಈ ಈವೆಂಟ್ ಇಂದು ಮಧ್ಯಾಹ್ನ ಪ್ರಾರಂಭವಾಗುತ್ತದೆ. ಸ್ಯಾಮ್‌ಸಂಗ್‌ ಈಗಾಗಲೇ ಲೈವ್ ಸ್ಟ್ರೀಮ್ ಲಿಂಕ್ ಅನ್ನು ಪ್ರಕಟಿಸಿದೆ ಮತ್ತು ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಸಹ ಇತ್ತೀಚಿನ ಗ್ಯಾಲಕ್ಸಿ ಎ-ಸೀರೀಸ್ ಈವೆಂಟ್ ಅನ್ನು ನೋಡಬಹುದು. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ33 5ಜಿ ಸ್ಮಾರ್ಟ್‌ಫೋನ್ ಬೆಲೆ ಭಾರತದಲ್ಲಿ ಸುಮಾರು 25,000 ರೂಪಾಯಿಗಳಾಗಿದ್ದು, ಗ್ಯಾಲಕ್ಸಿ ಎ73 ಸ್ಮಾರ್ಟ್‌ಫೋನ್ ನ ಬೆಲೆ ಕಳೆದ ವರ್ಷದ ಬೆಲೆಯನ್ನು ಗಮನಿಸಿದರೆ 40,000 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗಬಹುದು.

  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ72 ಫೋನ್ 34,999 ರೂಪಾಯಿಗೆ ಲಭ್ಯವಿದ್ದರೆ, ಗ್ಯಾಲಕ್ಸಿ ಎ52 ಫೋನ್ 26,499 ರೂಪಾಯಿಗೆ ಮಾರಾಟವಾಗಲಿದೆ. ಮೇಲೆ ತಿಳಿಸಿದ ಬೆಲೆಗಳು ಕೇವಲ ಊಹಾಪೋಹವಾಗಿದೆ. ಹೊಸ ಗ್ಯಾಲಕ್ಸಿ ಎ73 ಮತ್ತು ಗ್ಯಾಲಕ್ಸಿ ಎ33 5ಜಿಗಳ ಅಧಿಕೃತ ಬೆಲೆಯನ್ನು ಈವೆಂಟ್‌ನಲ್ಲಿ ನಾವು ತಿಳಿದು ಕೊಳ್ಳುತ್ತೇವೆ. ಈ ಎರಡೂ ಸಾಧನಗಳನ್ನು ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಘೋಷಿಸಿದ್ದರಿಂದ, ಸ್ಯಾಮ್‌ಸಂಗ್‌ ನಿರ್ದಿಷ್ಟತೆಗಳನ್ನು ಊಹೆ ಮಾಡಬಹುದು.

  ಸ್ಯಾಮ್‌ಸಂಗ್‌ ಗ್ಯಾಲಕ್ಸಿ A73 ನ ವಿಶೇಷತೆಗಳು

  ಮೊದಲಿಗೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 ಫೋನ್ 6.7-ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 120 ಹರ್ಟ್ಸ್ ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬರುತ್ತದೆ. ಫಲಕವು ಫುಲ್ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ ಮತ್ತು ಇದು ಸ್ಯಾಮ್‌ಸಂಗ್‌ನ ಸ್ವಂತ ಎಕ್ಸಿನೋಸ್ ಎಸ್ಒಸಿಯನ್ನು ಹೊಂದಿರುವ ಗ್ಯಾಲಕ್ಸಿ ಎ53 ಸ್ಮಾರ್ಟ್‌ಫೋನ್‌ಗಿಂತಲೂ ಇದು ಭಿನ್ನವಾಗಿ ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ 778 ಚಿಪ್ ಸೆಟ್ ಅನ್ನು ಹೊಂದಿರುತ್ತದೆ.

  ಇದನ್ನೂ ಓದಿ: Google Chrome Security Issue: ತಕ್ಷಣವೇ ಗೂಗಲ್ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿ.. ಹ್ಯಾಕರ್​ಗಳು ಹ್ಯಾಕ್ ಮಾಡ್ತಾರೆ!

  ಛಾಯಾಗ್ರಹಣಕ್ಕಾಗಿ, 108 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್‌ ಸೆನ್ಸರ್ ಮತ್ತು ಡೆಪ್ತ್ ಹಾಗೂ ಮ್ಯಾಕ್ರೋ ಶಾಟ್‌ಗಳಿಗಾಗಿ ಎರಡು 5 ಮೆಗಾ ಪಿಕ್ಸೆಲ್ ಸಂವೇದಕಗಳನ್ನು ಒಳಗೊಂಡಂತೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಕಾಣಬಹುದು. ಎರಡೂ ಗ್ಯಾಲಕ್ಸಿ ಎ-ಸೀರೀಸ್ ಸ್ಮಾರ್ಟ್‌ಫೋನ್‌ಗಳು ಆ್ಯಂಡ್ರಾಯ್ಡ್ 12 ಅನ್ನು ಹೊಂದಿರುತ್ತದೆ.

  ಇದನ್ನೂ ಓದಿ:WhatsApp: ಮಾರ್ಚ್​ 31ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸಲ್ಲ!

  ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 ನ ವಿಶೇಷತೆಗಳು

  ಮತ್ತೊಂದೆಡೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ53, ಸಣ್ಣ 6.4-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಫುಲ್ ಎಚ್‌ಡಿ ಪ್ಲಸ್ ರೆಸಲ್ಯೂಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ಯಾನೆಲ್ ಕೇವಲ 90 ಹರ್ಟ್ಜ್ ರಿಫ್ರೆಶ್ ರೇಟ್‌ಗೆ ಬೆಂಬಲವನ್ನು ಹೊಂದಿದೆ. ಇದು ಸಿಂಗಲ್ ಪಂಚ್-ಹೋಲ್ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇದು ಕಂಪನಿಯ ಎಕ್ಸಿನೋಸ್ 1280 ಚಿಪ್ ಸೆಟ್‌ನಿಂದ ಚಾಲಿತವಾಗಿದೆ. ಇದು 5ಜಿ ಅನ್ನು ಬೆಂಬಲಿಸುತ್ತದೆ. ಇದು 8 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್‌ನಿಂದ ಬೆಂಬಲಿತವಾಗಿದೆ.

  ಇದು 5,000 ಎಂಎಎಚ್ ಬ್ಯಾಟರಿಯನ್ನು 25 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಆದರೂ, ಗ್ರಾಹಕರು ಬಾಕ್ಸ್‌ನಲ್ಲಿ ಗೆಟ್ 25 ವ್ಯಾಟ್ ಚಾರ್ಜರ್ ಅನ್ನು ಹೊಂದಿಲ್ಲ ಮತ್ತು ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. 48 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಸೆನ್ಸರ್, 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಸೇರಿದಂತೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
  Published by:Harshith AS
  First published: