Samsungs Diwali offers: ಕೇವಲ 10 ಸಾವಿರಕ್ಕೆ ಸಿಗುತ್ತಿದೆ ಅತ್ಯುತ್ತಮ ಗ್ಯಾಲಕ್ಸಿ ಟ್ಯಾಬ್ಲೆಟ್​

Samsung Galaxy Tablets: ಈಗಾಗಲೇ ಸ್ಯಾಮ್​ಸಂಗ್​ ಹಬ್ಬದ ಕೊಡುಗೆ ಆರಂಭವಾಗಿದ್ದು,  ಗ್ರಾಹಕರು ಗ್ಯಾಲಕ್ಸಿ ಟ್ಯಾಬ್ ಎಸ್ 7+, ಗ್ಯಾಲಕ್ಸಿ ಟ್ಯಾಬ್ ಎಸ್ 7 ಎಫ್ಇ, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್, ಗ್ಯಾಲಕ್ಸಿ ಟ್ಯಾಬ್ ಎ 7 ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಸೇರಿದಂತೆ ಇನ್ನಿತರ ಸಾಧನಗಳ ಮೇಲೆ ಆಫರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

Photo: Google

Photo: Google

 • Share this:
  Samsungs Diwali offers: ದಸರಾ ಹಬ್ಬದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಅನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಹೆಚ್ಚಿನ ಕೊಡುಗೆ ನೀಡುವ ಸಲುವಾಗಿ ಆಫರ್​ಗಳ ನೀಡಲು ಮುಂದಾಗಿದೆ ಆ್ಯಪಲ್​ ಸ್ಟೋರ್​ ಕೂಡ ಕಡಿಮೆ ಬೆಲೆಗೆ ಮತ್ತು ರಿಯಾಯಿತಿ ಉಡುಗೊರೆ ನೀಡುವುದಾಗಿ ಘೋಷಿಸಿದೆ. ಅದರಂತೆ ಇದೀಗ  ಸ್ಯಾಮ್‌ಸಂಗ್ ಕೂಡ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಗ್ಯಾಲಕ್ಸಿ ಟ್ಯಾಬ್ಲೆಟ್‌ಗಳ ಮೇಲೆ ವಿಶೇಷ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ.  ಬಳಕೆದಾರರು ಈ ರಿಯಾಯಿತಿಗಳನ್ನು Samsung.com, Amazon.in, Flipkart.com ಮತ್ತು ಆಯ್ದ ಸ್ಯಾಮ್‌ಸಂಗ್ ಚಿಲ್ಲರೆ ಅಂಗಡಿಗಳ ಮೂಲಕ ಪಡೆಯಬಹುದಾಗಿ ತಿಳಿಸಿದೆ.

  ಈಗಾಗಲೇ ಸ್ಯಾಮ್​ಸಂಗ್​ ಹಬ್ಬದ ಕೊಡುಗೆ ಆರಂಭವಾಗಿದ್ದು,  ಗ್ರಾಹಕರು ಗ್ಯಾಲಕ್ಸಿ ಟ್ಯಾಬ್ ಎಸ್ 7+, ಗ್ಯಾಲಕ್ಸಿ ಟ್ಯಾಬ್ ಎಸ್ 7 ಎಫ್ಇ, ಗ್ಯಾಲಕ್ಸಿ ಟ್ಯಾಬ್ ಎಸ್ 6 ಲೈಟ್, ಗ್ಯಾಲಕ್ಸಿ ಟ್ಯಾಬ್ ಎ 7 ಮತ್ತು ಗ್ಯಾಲಕ್ಸಿ ಟ್ಯಾಬ್ ಎ 7 ಲೈಟ್ ಸೇರಿದಂತೆ ಇನ್ನಿತರ ಸಾಧನಗಳ ಮೇಲೆ ಆಫರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ.

  ಸ್ಯಾಮ್‌ಸಂಗ್ ಗ್ರಾಹಕರಿಗೆಂದೇ ಬ್ಯಾಂಕ್​ ಆಫರ್​​​ ಅನ್ನು ನೀಡುತ್ತಿದೆ. ಸ್ಯಾಮ್​ಸಂಗ್​. ಕಾಮ್, ಫ್ಲಿಪ್​ಕಾರ್ಟ್​, ಅಮೆಜಾನ್​, ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಸಾಧನವನ್ನು ಖರೀದಿಸಿದರೆ ಕ್ರೆಡಿಟ್ ಕಾರ್ಡ್ ಫುಲ್ ಸ್ವೈಪ್ ಮತ್ತು ಡೆಬಿಟ್​ ಕಾರ್ಡ್​​ ಮೂಲಕ ಇಎಮ್​ಐ ಪಾವತಿಸಿದರೆ 10 ಸಾವಿರದ ವರೆಗೆ ಆಫರ್​ ನೀಡುತ್ತಿದೆ.

  ಗ್ರಾಹಕರು ಬಂಡಲ್ ಆಫರ್‌ಗಳನ್ನು ಸಹ ಪಡೆಯಲು ಸಾಧ್ಯವಾಗುತ್ತದೆ, ಇದು ಟ್ಯಾಬ್ಲೆಟ್‌ಗಳಿಗಾಗಿ ಕೀಬೋರ್ಡ್ ಕವರ್‌ಗಳಲ್ಲಿ 10,000 ರೂ.ಗಳವರೆಗೆ ರಿಯಾಯಿತಿ ಪಡೆಯಲು ಅರ್ಹರನ್ನಾಗಿಸುತ್ತದೆ. ಗ್ರಾಹಕರು ಗ್ಯಾಲಕ್ಸಿ ಬಡ್ಸ್ ಲೈವ್ ಅನ್ನು ರೂ .1999 ಮತ್ತು ಬುಕ್ ಕವರ್ ಅನ್ನು ರೂ 999 ಕ್ಕೆ ಬಂಡಲ್ ಆಫರ್ ಬಳಸಿ ಪಡೆಯಬಹುದು.

  ಸ್ಯಾಮ್‌ಸಂಗ್ ಟ್ಯಾಬ್ S7+ LTE ನೈಜ್ಯ ಬೆಲೆ 79,999ರೂ ಆಗಿದ್ದು, 66,999ರೂ.ಗೆ ಲಭ್ಯವಿರುತ್ತದೆ. ಟ್ಯಾಬ್ ಎಸ್ 7+ ವೈ-ಫೈ ರೂ. 50,999 ಕ್ಕೆ ಲಭ್ಯವಿದ್ದರೆ, ಟ್ಯಾಬ್ ಎಸ್ 7 ಎಫ್‌ಇ ಎಲ್‌ಟಿಇ (128 ಜಿಬಿ) ರೂ. 44,999 ಕ್ಕೆ ಮಾರಾಟ ಮಾಡುತ್ತಿದೆ.

  ಗ್ರಾಹಕರು Tab S7 FE ವೈ-ಫೈ ಅನ್ನು ರೂ .34,999 ರಂತೆ ಖರೀದಿಸಬಹುದು. ಟ್ಯಾಬ್ ಎಸ್ 6 ಲೈಟ್ (ವೈ-ಫೈ) ಖರೀದಿಸಲು ಬಯಸಿದರೆ, ಅದನ್ನು 22,999 ರೂ ಪರಿಣಾಮಕಾರಿ ಬೆಲೆಗೆ ಖರೀದಿಸಬಹುದು. ಟ್ಯಾಬ್ ಎ 7 ವೈ-ಫೈ 14,999 ರೂ.ಗೆ ಲಭ್ಯವಿದ್ದು, ಟ್ಯಾಬ್ ಎ 7 ಲೈಟ್ ವೈ-ಫೈ-ಮಾತ್ರ 10,799 ರೂ.ಗೆ ಸಿಗುತ್ತದೆ.

  ಇದನ್ನು ಓದಿ: Airtel Prepaid Plan: 119 ರೂ ರೀಚಾರ್ಜ್​ ಮಾಡಿದರೆ 15GB ಡೇಟಾ ಉಚಿತ, ಜೊತೆಗೆ ಇನ್ನೂ ಇದೆ ಬೆನಿಫಿಟ್ಸ್​!

  ಆ್ಯಪಲ್​ ಫೆಸ್ಟೀವ್​ ಆಫರ್​
  ಐಫೋನ್ ಖರೀದಿದಾರರಿಗೆ ಆ್ಯಪಲ್​ ಕಂಪನಿ ಕೂಡ ಹಬ್ಬದ ಕೊಡುಗೆಯನ್ನು ಘೋಷಿಸಿದೆ. ಆ್ಯಪಲ್ ಸ್ಟೋರ್ ನಿಂದ IPhone  12 ಅಥವಾ Iphone 12 mini ಖರೀದಿಸಿದರೆ, ಉಚಿತವಾಗಿ ಏರ್‌ಪಾಡ್‌ಗಳನ್ನು (Airpod) ಖರೀದಿಸುವ ಅವಕಾಶ ನೀಡಲಿದೆ.
  ಒಂದು ವಾರಗಳ ಕಾಲ ಸೇಲ್​ ನಡೆಯಲಿದ್ದು, ಅಕ್ಟೋಬರ್ 7 ರಿಂದ ಆ್ಯಪಲ್​ ಫೆಸ್ಟಿವಲ್(Apple Festive Offer)  ಆಫರ್​ ಆರಂಭವಾಗಲಿದೆ. ಗ್ರಾಹಕರಿಗಾಗಿ ಆಕರ್ಷಕ ಕೊಡುಗೆ ನೀಡಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಮ್ಮ ವಾರ್ಷಿಕ ಹಬ್ಬದ ಆ್ಯಪಲ್​ ಐಫೋನ್​ಗಳ​ ಮೇಲಿನ ದರ ಕಡಿತ ಮಾರಾಟ ಮಾಡಿ ಮಾರಲಿದೆ.

  ಆ್ಯಪಲ್ ತನ್ನ ಆನ್‌ಲೈನ್ ಸ್ಟೋರ್‌ನಲ್ಲಿ ಆಫರ್ ಕುರಿತಾಗಿ ಪಟ್ಟಿ ತಯಾರಿಸಿದೆ. ಆದರೆ ಸೇಲ್​ ಅಕ್ಟೋಬರ್ 7 ಆಗಿರುವುದರಿಂದ, ಉತ್ಪನ್ನಗಳನ್ನು ಇಂದೇ ಖರೀದಿಸಲು ಸಾಧ್ಯವಿಲ್ಲ. ಆ್ಯಪಲ್​ ಫೆಸ್ಟಿವಲ್​ ಸೇಲ್​ನಲ್ಲಿ ಐಫೋನ್ 12 ಅಥವಾ ಐಫೋನ್ 12 ಮಿನಿ ತಮ್ಮ ಎಮ್‌ಆರ್‌ಪಿಗಳಲ್ಲಿ ಲಭ್ಯವಿರುತ್ತದೆ,

  ಐಫೋನ್ 12 ಮೂಲ ಬೆಲೆ 65,900 ರೂ ಇರಲಿದ್ದು, ಗ್ರಾಹಕರಿಗಗಿ ಐಫೋನ್​ 12 ಮಿನಿ 59,900 ರೂಗಳಲ್ಲಿ ಸಿಗಲಿದೆ, ಇದರ ಖರೀದಿ ಮೇಲೆ  ಉಚಿತ ಏರ್‌ಪಾಡ್‌ಗಳನ್ನು ನೀಡುತ್ತಿದೆ. ವೈರ್‌ಲೆಸ್ ಚಾರ್ಜಿಂಗ್ ಕೇಸ್ ಇಲ್ಲದ ಏರ್‌ಪಾಡ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಏರ್‌ಪಾಡ್‌ಗಳು ಮತ್ತು ಏರ್‌ಪಾಡ್ಸ್ ಪ್ರೊ ಸೇರಿದಂತೆ ಯಾವುದೇ ಏರ್‌ಪಾಡ್ಸ್ ಮಾದರಿಗಳನ್ನು ನೀವು ಆಯ್ಕೆ ಮಾಡಬಹುದು ಎಂದು ಆ್ಯಪಲ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

  ಕಂಪನಿಯ ವೆಬ್‌ಸೈಟ್‌ನ ಪ್ರಕಾರ, ವೈರ್‌ಲೆಸ್ ಚಾರ್ಜಿಂಗ್ ಕೇಸ್ ಇಲ್ಲದ ಏರ್‌ಪಾಡ್‌ಗಳ ಬೆಲೆ ರೂ 14,900, ವೈರ್‌ಲೆಸ್ ಚಾರ್ಜಿಂಗ್ ಕೇಸ್ ಹೊಂದಿರುವ ಏರ್‌ಪಾಡ್‌ಗಳ ಬೆಲೆ ರೂ 18,900, ಮತ್ತು ಏರ್‌ಪಾಡ್ಸ್ ಪ್ರೊ 24,900 ರೂ.ಗೆ ಸಿಗಲಿದೆ.

  ವೈರ್‌ಲೆಸ್ ಚಾರ್ಜಿಂಗ್ ಇಲ್ಲದೆ ಬರುವ ಮೊದಲ ತಲೆಮಾರಿನ ಏರ್‌ಪಾಡ್‌ಗಳನ್ನು ರಿಯಾಯಿತಿ ಧರದಲ್ಲಿ ಖರೀದಿಸುವ ಅವಕಾಶವನ್ನು ಆ್ಯಪಲ್ ಒದಗಿಸುತ್ತಿದೆ. ಮಾತ್ರವಲ್ಲದೆ ಕನಿಷ್ಟ 14,900 ರೂಪಾಯಿಗಳಿಗೆ ಸಿಗಲಿದೆ.

  ಇನ್ನು ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲೂ ಕಡಿಮೆ ಬೆಲೆಗೆ ಆ್ಯಪಲ್​ ಐಫೋನ್​ಗಳು ಸಿಗಲಿದೆ. ಜೊತೆಗೆ ಉತ್ತಮವಾದ ಕೊಡುಗೆಯನ್ನು ನೀಡುತ್ತಿದೆ.

  ಐಫೋನ್ 12, ಐಫೋನ್ 12 ಮಿನಿ, ಮತ್ತು ಯಾವುದೇ ಏರ್‌ಪಾಡ್ಸ್ ಮಾದರಿ ಸೇರಿದಂತೆ ಯಾವುದೇ ವಸ್ತುಗಳ ಸ್ಟಾಕ್ ಪೂರೈಕೆಯ ಕೊರತೆಯ ಸಮಯದಲ್ಲಿ, ಸಾಗಣೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಆಪಲ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.

  Published by:Harshith AS
  First published: