• Home
  • »
  • News
  • »
  • tech
  • »
  • Smartphones: ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಬಿಡುಗಡೆ!

Smartphones: ಐಫೋನ್ 13ಗೆ ಹೋಲುವ ಸ್ಯಾಮ್​ಸಂಗ್ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಬಿಡುಗಡೆ!

ಐಫೋನ್ 13 ಮತ್ತು ಸ್ಯಾಮ್ಸಂಗ್ ಎಸ್22

ಐಫೋನ್ 13 ಮತ್ತು ಸ್ಯಾಮ್ಸಂಗ್ ಎಸ್22

ಐಫೋನ್​ 13 ಸ್ಮಾರ್ಟ್​ಫೋನ್​ ಮತ್ತು ಸ್ಯಾಮ್​ಸಂಗ್ ಎಸ್​22 ಸ್ಮಾರ್ಟ್​​ಫೋನ್​ ಇವೆರಡೂ ಸ್ಮಾರ್ಟ್​ಫೋನ್​ನ ಫೀಚರ್ಸ್​ಗಳು ಎರಡೂ ಬಹಳಷ್ಟು ಒಂದೇ ರೀತಿಯಲ್ಲಿದೆ. ಇವೆರಡರ ಮೊಬೈಲ್​​  ಫೀಚರ್ಸ್ ಅನ್ನು ಈ ಕೆಳಗೆ ಒಂದಕ್ಕೊಂದು ಹೋಲಿಕೆ ಮಾಡಲಾಗಿದೆ.

  • Share this:

    ಆ್ಯಪಲ್ (Apple) ಮತ್ತು ಸ್ಯಾಮ್​ಸಂಗ್ (Samsung) ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಜನಪ್ರಯತೆಯನ್ನು ಹೊಂದಿದ ಸ್ಮಾರ್ಟ್​ಫೋನ್ (Smartphone) ಕಂಪನಿಗಳಾಗಿವೆ. ಇದೀಗ ಸ್ಯಾಮ್​ಸಂಗ್ ತನ್ನ ಬ್ರಾಂಡ್​​ನಲ್ಲಿ ಸ್ಯಾಮ್​ಸಂಗ್ ಎಸ್22 (Samsung S22) ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರ  ಫೀಚರ್ಸ್ ಸೇಮ್ ಐಫೋನ್ 13​ಗೆ (IPhone 13) ಸರಿಸಮಾನವಾಗಿ ತಯಾರಿಸಿದ್ದಾರೆ.  ಸ್ಯಾಮ್​ಸಂಗ್ ತನ್ನ ಪ್ರೊಡಕ್ಟ್​ನ ಉತ್ಪಾದನೆಯಲ್ಲೇ ಗ್ರಾಹಕರನ್ನು ಆಕರ್ಷಿಸುತ್ತದೆ. ಇದೀಗ ಸ್ಯಾಮ್​ಸಂಗ ಗುಣಮಟ್ಟದ ಫೀಚರ್ಸ್​ನೊಂದಿಗೆ (Features) ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈಗಿನ ಮೊಬೈಲ್ (Mobile) ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದ್ದರಿಂದ ಈ ರೀತಿಯ ಸ್ಮಾರ್ಟ್​ಫೋನ್​ಗಳು ಬಂದಾಗ ಗ್ರಾಹಕರು ಪ್ರಿಬುಕಿಂಗ ಮಾಡಲು ರೆಡಿಯಾಗುತ್ತಾರೆ.  ಹಾಗಿದ್ರೆ ಈ ಸ್ಯಾಮ್​ಸಂಗ್ ಎಸ್ 22 ಸ್ಮಾರ್ಟ್​ಫೋನ್​ನ ಸ್ಪೆಷಲ್​ ಫೀಚರ್ಸ್ ಏನೆಂಬುದು ಇಲ್ಲಿದೆ ಮಾಹಿತಿ.


    ಐಫೋನ್​ 13 ಸ್ಮಾರ್ಟ್​ಫೋನ್​ ಮತ್ತು ಸ್ಯಾಮ್​ಸಂಗ್ ಎಸ್​22 ಸ್ಮಾರ್ಟ್​​ಫೋನ್​ ಇವೆರಡೂ ಸ್ಮಾರ್ಟ್​ಫೋನ್​ನ ಫೀಚರ್ಸ್​ಗಳು ಎರಡೂ ಬಹಳಷ್ಟು ಒಂದೇ ರೀತಿಯಲ್ಲಿದೆ. ಇವೆರಡರ ಮೊಬೈಲ್​​  ಫೀಚರ್ಸ್ ಅನ್ನು ಈ ಕೆಳಗೆ ಒಂದಕ್ಕೊಂದು ಹೋಲಿಕೆ ಮಾಡಲಾಗಿದೆ.


    ಪ್ರೊಸೆಸರ್


    ಆ್ಯಪಲ್ ಐಫೋನ್​ 13 ಕಂಪನಿಯ ಸ್ವಂತ ಆ್ಯಪಲ್ ಎ15 ಬಯೋನಿಕ್ (5 nm) ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ.


    ಇದನ್ನೂ ಓದಿ: ಭಾರತದಲ್ಲಿ VLC ಪ್ಲೇಯರ್ ಬ್ಯಾನ್ ನಿಯಮವನ್ನು ವಾಪಸ್ ಪಡೆದ ಸರ್ಕಾರ!


    ಸ್ಯಾಮ್​ಸಂಗ್ ಎಸ್ 22 ಅಲ್ಟ್ರಾ ಯುರೋಪ್‌ನಲ್ಲಿ Exynos 2200 (4 nm) ಚಿಪ್‌ಸೆಟ್ ಮತ್ತು ಇತರ ದೇಶಗಳಲ್ಲಿ Qualcomm SM8450 Snapdragon 8 Gen 1 (4 nm) ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ.


    Samsung S22 ultra smart phone release similar to iPhone
    ಸ್ಯಾಮ್​ಸಂಗ್ ಎಸ್22 ಅಲ್ಟ್ರಾ


    ಆ್ಯಪಲ್ ಐಫೋನ್​ 13 IOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ ಅದನ್ನು IOS 16.1 ಗೆ ಅಪ್‌ಗ್ರೇಡ್ ಮಾಡಬಹುದು.


    ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಬಳಕೆದಾರ ಇಂಟರ್ಫೇಸ್ ಆಗಿ One UI 5 ಅನ್ನು ಹೊಂದಿದೆ.


    ವಿನ್ಯಾಸ:


    ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ 6.8 ಇಂಚುಗಳ ಸ್ಕ್ರೀನ್ ಗಾತ್ರದೊಂದಿಗೆ ಡೈನಾಮಿಕ್ AMOLED 2X ಡಿಸ್ಪ್ಲೇಯನ್ನು ಹೊಂದಿದೆ. ಆ್ಯಪಲ್ ಐಫೋನ್​ 13 ಸೂಪರ್ ರೆಟಿನಾ XDR OLED ಅನ್ನು 6.1 ಇಂಚುಗಳಷ್ಟು ಸ್ಕ್ರೀನ್ ಗಾತ್ರವನ್ನು ಹೊಂದಿದೆ.


    ಆ್ಯಪಲ್ ಐಫೋನ್​ 13, 1170 x 2532 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಅನ್ನು ಹೊಂದಿದೆ ಮತ್ತು ಸ್ಯಾಮ್‌ಸಂಗ್ ಎಸ್ 22, 1440 x 3088 ಪಿಕ್ಸೆಲ್‌ಗಳ ಉತ್ತಮ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ.


    Samsung S22 ultra smart phone release similar to iPhone
    ಐಫೋನ್ 13 ಮತ್ತು ಸ್ಯಾಮ್ಸಂಗ್ ಎಸ್22


    ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾವನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಚಿಸಲಾಗಿದೆ. ಮತ್ತು ಯಾವಾಗಲೂ ಆನ್ ಡಿಸ್‌ಪ್ಲೇ ಹೊಂದಿದೆ. ಐಫೋನ್ 13 ಅನ್ನು ಸೆರಾಮಿಕ್ ಶೀಲ್ಡ್ ಗ್ಲಾಸ್‌ನಿಂದ ರಚಿಸಲಾಗಿದೆ.


    ಕ್ಯಾಮೆರಾ


    • ಆ್ಯಪಲ್ ಐಫೋನ್ 13 ಹಿಂಭಾಗದಲ್ಲಿ 12 MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದಲ್ಲಿ 12 MP ಸಿಂಗಲ್ ಕ್ಯಾಮೆರಾವನ್ನು ಹೊಂದಿದೆ.

    • ಮತ್ತೊಂದೆಡೆ ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ 108MP + 10MP + 10MP + 12MP ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇನ್ನು 40MP ಮುಂಭಾಗದ ಕ್ಯಾಮೆರಾ ಹೊಂದಿದೆ.


    ಬ್ಯಾಟರಿ

    • ಐಫೋನ್​ 13, 3240 mAh ಬ್ಯಾಟರಿಯನ್ನು ಹೊಂದಿದ್ದು, ಇದು 23W ವೈರ್ಡ್ ಫಾಸ್ಟ್ ಚಾರ್ಜಿಂಗ್, 15W MagSafe ವೈರ್‌ಲೆಸ್ ಚಾರ್ಜಿಂಗ್ ಮತ್ತು 7.5W Qi ವೈರ್‌ಲೆಸ್ ಚಾರ್ಜಿಂಗ್ ಅನ್ನು ಹೊಂದಿದೆ.

    • ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ 45W ವೇಗದ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000 mAh ನ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದು 15W Qi ಅಥವಾ PMA ವೈರ್‌ಲೆಸ್ ಚಾರ್ಜಿಂಗ್ ಮತ್ತು 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರುತ್ತದೆ.


    ಬೆಲೆ


    ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ ಬೆಲೆ 96,750 ರೂಪಾಯಿ ಮತ್ತು ಆ್ಯಪಲ್ ಐಫೋನ್​ 13 ಆರಂಭಿಕ ಬೆಲೆ 62,999 ರೂಪಾಯಿಯಾಗಿದೆ.


    ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ. ಆ್ಯಪಲ್ ಐಫೋನ್​ 13 ಸ್ಯಾಮ್‌ಸಂಗ್ S22 ಅಲ್ಟ್ರಾಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ.


    ಆದರೆ ಆಫರ್‌ನಲ್ಲಿರುವ ಸ್ಪೆಕ್ಸ್ ಅನ್ನು ತೆಗೆದುಕೊಂಡರೆ, ಸ್ಯಾಮ್‌ಸಂಗ್ ಎಸ್ 22 ಅಲ್ಟ್ರಾ ಖಂಡಿತವಾಗಿಯೂ ಆ್ಯಪಲ್ ಐಫೋನ್​ 13 ಗಿಂತ ಉತ್ತಮ ಫೋನ್ ಆಗಿದೆ.

    First published: