ಸ್ಯಾಮ್ಸಂಗ್ ಕಂಪೆನಿಯು (Samsung Company) ಹಿಂದಿನಿಂದಲೂ ಭಾರೀ ಬೇಡಿಕೆಯಲ್ಲಿರುವ ಸ್ಮಾರ್ಟ್ಫೋನ್ ಕಂಪೆನಿಯಾಗಿದೆ. ಪ್ರತಿಯೊಬ್ಬರಿಗೂ ಸ್ಮಾರ್ಟ್ಫೋನ್ಗಳು ಎಂದಾಗ ಸ್ಯಾ,ಮ್ಸಂಗ್ ಅನ್ನು ಒಮ್ಮೆ ನೆನಪಿಸುತ್ತಾರೆ. ಇದಕ್ಕೆ ಕಾರಣ ಇದು ಹೊಂದಿರುವಂತಹ ಫೀಚರ್ಸ್ ಅಂತಾನೇ ಹೇಳ್ಬಹುದು. ಯಾವುದೇ ಒಂದು ಉತ್ಪನ್ನವಾಗಲಿ ಜನರನ್ನು ಆಕರ್ಷಿಸಬೇಕಾದರೆ ಅದರ ಕಲರ್, ಫೀಚರ್ಸ್ಗಳು ಗುಣಮಟ್ಟದ್ದಾಗಿರಬೇಕು. ಇಲ್ಲದಿದ್ದರೆ ಅದನ್ನು ಯಾರೂ ನೋಡಲೂ ಸಹ ಹೋಗುವುದಿಲ್ಲ. ಹಾಗಿರುವಾಗ ಸ್ಯಾಮ್ಸಂಗ್ ಜನರನ್ನು ಆಕರ್ಷಿಸುವಂತಹ ಎಲ್ಲಾ ಗುಣಲಕ್ಷಣಗಳನ್ನು ಇದರ ಪ್ರೊಡಕ್ಟ್ನಲ್ಲಿ ಅಳವಡಿಸಿರುತ್ತದೆ. ಇತ್ತೀಚೆಗೆ ಈ ಕಂಪೆನಿ ಭಾರತದಲ್ಲಿ ತನ್ನ ಬ್ರಾಂಡ್ನ ಅಡಿಯಲ್ಲಿ ಎರಡು ಸ್ಮಾರ್ಟ್ಫೋನ್ಗಳನ್ನು ಲಾಂಚ್ (Smartphone Launch) ಮಾಡಿತ್ತು. ಸದ್ಯ ಇದರ ಫಸ್ಟ್ ಸೇಲ್ (First Sale) ಇದೇ ಜನವರಿ 19, 2023ರಂದು ಆರಂಭಿಸಿದೆ.
ಹೌದು, ಸ್ಯಾಮ್ಸಂಗ್ ತನ್ನ ಕಂಪೆನಿಯಿಂದ ಭಾರತದಲ್ಲಿ ಇತ್ತೀಚೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 ಎಂಬ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿತ್ತು. ಇವೆರಡೂ 5ಜಿ ಸ್ಮಾರ್ಟ್ಫೋನ್ಗಳಾಗಿದ್ದು, ಇದೇ ಜನವರಿ 19, 2023ರಿಂದ ಫಸ್ಟ್ ಸೇಲ್ ಅನ್ನು ಆರಂಭಿಸಿದೆ.
ಬೆಲೆ ಮತ್ತು ಲಭ್ಯತೆ:
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಯ ಈ ಫಸ್ಟ್ಸೇಲ್ನಲ್ವೇಲಿ ಒಂದು ವೇರಿಯಂಟ್ನಲ್ಲಿ ಬಿಡುಗಡೆಯಾಗಿದ್ದು ಇದರ ಬೆಲೆ 16,499 ರೂಪಾಯಿ ಆಗಿದೆ.
ಹಾಗೆಯೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್ಫೋನ್ನ ಬೇಸಿಕ್ ವೇರಿಯಂಟ್ ಬೆಲೆಯು 22,999 ರೂಪಾಯಿ ಆಗಿದೆ.
ಆಫರ್ಸ್ ಹೇಗಿದೆ?
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಮತ್ತು ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್ಫೋನ್ ಜನವರಿ 19ರಿಂದ ತನ್ನ ಫಸ್ಟ್ ಸೇಲ್ ಅನ್ನು ಆರಂಭಿಸಿದೆ. ಈ ಸ್ಮಾರ್ಟ್ಫೋನ್ಗಳನ್ನು ಸ್ಯಾಮ್ಸಂಗ್ನ ಅಧಿಕೃತ ವೆಬ್ಸೈಟ್ ಹಾಗೂ ಪ್ರಮುಖ ರಿಟೇಲ್ ಸ್ಟೋರ್ಗಳಲ್ಲಿ ಗ್ರಾಹಕರು ಖರೀದಿಸಬಹುದಾಗಿದೆ. ಇನ್ನು ಎಸ್ಬಿಐ, ಐಡಿಎಫ್ಸಿ ಬ್ಯಾಂಕ್ ಕಾರ್ಡ್ಗಳ ಮೂಲಕ ಖರೀದಿಸುವುದಾದರೆ ಗ್ರಾಹಕರು 2,000 ರೂಪಾಯಿವರೆಗೆ ಕ್ಯಾಶ್ಬ್ಯಾಕ್ ಅನ್ನು ಸಹ ಪಡೆಯಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್ಫೋನ್ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್ಫೋನ್ 6.6 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇyನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಪಡೆದಿದ್ದು, ವಾಟರ್ಡ್ರಾಪ್ ನಾಚ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ.
ಸ್ಯಾಮ್ಸಂಗ್ನ ಈ ಸ್ಮಾರ್ಟ್ಫೋನ್ ಮುಖ್ಯವಾಗಿ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡೊಂದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸಲ್ ಸೆನ್ಸಾರ್ನಲ್ಲಿದೆ. ಹಾಗೆಯೇ ಈ ಫೋನ್ ಸ್ನ್ಯಾಪ್ಡ್ರಾಗನ್ 695 ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು 5000mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 25W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಸಹ ಒಳಗೊಂಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್ಫೋನ್ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಓಎಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದನ್ನು ಎಸ್ಡಿ ಕಾರ್ಡ್ ಮೂಲಕ ಇಂಟರ್ನಲ್ ಸ್ಟೋರೇಜ್ ಅನ್ನು 1ಟಿಬಿವರೆಗೂ ವಿಸ್ತರಿಸಬಹುದಾದ ಅವಕಾಶವಿದೆ.
ಕ್ಯಾಮೆರಾ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಆ್ಯಪಲ್ ಕಂಪೆನಿಯ ಹೊಸ ಅತ್ಯಾಕರ್ಷಕ ಸ್ಪೀಕರ್ ಅನಾವರಣ! ಬೆಲೆ ಎಷ್ಟು?
ಬ್ಯಾಟರಿ ಫೀಚರ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಎ14 5ಜಿ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ