• Home
 • »
 • News
 • »
 • tech
 • »
 • Samsung Smartphones: ಸ್ಯಾಮ್​ಸಂಗ್​ನ ಈ ಸ್ಮಾರ್ಟ್​​​ಫೋನ್​ ಮೇಲೆ ಊಹೆಯೂ ಮಾಡಿರದ ಆಫರ್ಸ್​ ಬಿಡುಗಡೆ! ಫೀಚರ್ಸ್​ ಹೇಗಿದೆ?

Samsung Smartphones: ಸ್ಯಾಮ್​ಸಂಗ್​ನ ಈ ಸ್ಮಾರ್ಟ್​​​ಫೋನ್​ ಮೇಲೆ ಊಹೆಯೂ ಮಾಡಿರದ ಆಫರ್ಸ್​ ಬಿಡುಗಡೆ! ಫೀಚರ್ಸ್​ ಹೇಗಿದೆ?

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​22 ಅಲ್ಟ್ರಾ ಸ್ಮಾರ್ಟ್​​ಫೋನ್

ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​22 ಅಲ್ಟ್ರಾ ಸ್ಮಾರ್ಟ್​​ಫೋನ್

ಜನಪ್ರಿಯ ಇಕಾಮರ್ಸ್​ ಕಂಪೆನಿಗಳಲ್ಲಿ ಒಂದಾದ ಅಮೆಜಾನ್​ ಇದೀಗ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಇನ್ನು ಈ ಸ್ಮಾರ್ಟ್​ಫೋನ್​ ಅನ್ನು ಎಕ್ಸ್​​ಚೇಂಜ್ ಆಫರ್ ಮೂಲಕ ಇನ್ನಷ್ಟು ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ.

ಮುಂದೆ ಓದಿ ...
 • Share this:

  ಸ್ಮಾರ್ಟ್​​​ಫೋನ್ (Smartphone)​ ಎಂದಾಗ ಮೊದಲು ನೆನಪಾಗೋದೇ ಸ್ಯಾಮ್​ಸಂಗ್ ಕಂಪೆನಿ (Samsung Company). ಇದಕ್ಕೆ ಮುಖ್ಯ ಕಾರಣ ಈ ಕಂಪೆನಿ ಬಿಡುಗಡೆ ಮಾಡಿರುವಂತಹ ಸ್ಮಾರ್ಟ್​​ಫೋನ್​ಗಳ ಫೀಚರ್ಸ್​ಗಳಾಗಿರಬಹುದು. ಸ್ಯಾಮ್​ಸಂಗ್​ ಕಂಪೆನಿ ಮಾರುಕಟ್ಟೆಗೆ ಬಹಳ ಹಿಂದಿನಿಂದ ಹಲವಾರು ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಲೇ ಇದೆ. ಸ್ಯಾಮ್​ಸಂಗ್ ಇದೀಗ ಮಾರುಕಟ್ಟೆಗೆ ಅತ್ಯಾಕರ್ಷಕ ಫೀಚರ್ಸ್​ ಹೊಂದಿದ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಸದ್ಯ ಈ ಹಿಂದೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್ (Samsung Galaxy S22 Ultra)​ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.


  ಜನಪ್ರಿಯ ಇಕಾಮರ್ಸ್​ ಕಂಪೆನಿಗಳಲ್ಲಿ ಒಂದಾದ ಅಮೆಜಾನ್​ ಇದೀಗ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್​ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಇನ್ನು ಈ ಸ್ಮಾರ್ಟ್​ಫೋನ್​ ಅನ್ನು ಎಕ್ಸ್​​ಚೇಂಜ್ ಆಫರ್ ಮೂಲಕ ಇನ್ನಷ್ಟು ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ.


  ಏನೆಲ್ಲಾ ಆಫರ್ಸ್​ ಲಭ್ಯವಿದೆ?


  ಸ್ಯಾಮ್‌ಸಂಗ್ ಕಂಪನಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಭರ್ಜರಿ ಆಫರ್‌ನಲ್ಲಿ ಖರೀದಿ ಮಾಡಬಹುದಾಗಿದೆ. 12 ಜಿಬಿ ರ್‍ಯಾಮ್ ಮತ್ತು 256ಜಿಬಿ ವೇರಿಯಂಟ್‌ ಫೋನ್‌ನ 1,31,999 ರೂ. ಗಳ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ನಿಗದಿ ಮಾಡಲಾಗಿದೆ. ಆದರೆ ರಿಯಾಯಿತಿ ಬೆಲೆಯಲ್ಲಿ 52,999 ರೂ.ಗಳಲ್ಲಿ ಭರ್ಜರಿ ಆಫರ್ಸ್​ನೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಹೆಚ್ಚುವರಿಯಾಗಿ 23,300 ರೂ. ಗಳ ವರೆಗೂ ಎಕ್ಸ್‌ಚೇಂಜ್ ಆಫರ್​ ಸಹ ಈ ಸ್ಮಾರ್ಟ್​​ಫೋನ್​ನ ಮೇಲೆ ಲಭ್ಯವಾಗಲಿದೆ.
  ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್​​ಫೋನ್


  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್​22 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಎಡ್ಜ್‌ ಕ್ಯೂಹೆಚ್​ಡಿ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಈ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಅನ್ನು ಆ್ಯಡ್ ಮಾಡಲಾಗಿದೆ. ಇದರೊಂದಿಗೆ ಐ ಕಂಫರ್ಟ್ ಶೀಲ್ಡ್‌ ಸೌಲಭ್ಯ ಇದೆ. ಇನ್ನು ಈ ಫೋನ್ ಆಕ್ಟಾ ಕೋರ್ 4 ಎನ್​ಎಮ್ ಎಸ್​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದ್ದು, 12 ಜಿಬಿ ರ್‍ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಸಹ ಪಡೆದಿದೆ.


  ಲಭ್ಯತೆ


  ಇನ್ನು ಈ ಫ್ಲ್ಯಾಗ್‌ಶಿಫ್‌ ಸ್ಮಾರ್ಟ್​​​ಫೋನ್‌ 8ಜಿಬಿ ರ್‍ಯಾಮ್ ಮತ್ತು 256ಜಿಬಿ ಮತ್ತು 8 ಜಿಬಿ ರ್‍ಯಾಮ್ ಮತ್ತು 512 ಜಿಬಿ ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಈ ಫೋನ್‌ ಫ್ಯಾಂಟಮ್ ಬ್ಲ್ಯಾಕ್‌, ವೈಟ್‌ ಮತ್ತು ಗ್ರೀನ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.


  ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​22 ಅಲ್ಟ್ರಾ ಸ್ಮಾರ್ಟ್​​ಫೋನ್


  ಕ್ಯಾಮೆರಾ ಹಾಗೂ ಇತರೆ ಫೀಚರ್ಸ್​


  ಇನ್ನು ಸ್ಯಾಮ್​ಸಂಗ್ ಕಂಪೆನಿಯ ಈ ಎಸ್​22 ಅಲ್ಟ್ರಾ ಸ್ಮಾರ್ಟ್​​ಫೋನ್ ಕ್ವಾಡ್‌ ಕ್ಯಾಮೆರಾ ಸೆಟಪ್​ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸೆಲ್​ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ 5,000 mAh ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ.


  ಇದನ್ನೂ ಓದಿ: ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಲಗ್ಗೆಯಿಡಲಿದೆ ಐಟೆಲ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​!


  ಈ ಬ್ಯಾಟರಿಯು 45W ವೇಗದ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ಹಾಗೆಯೇ 5ಜಿ, 4ಜಿ ಎಲ್​​ಟಿಇ, ವೈ ಫೈ 6ಇ, ಬ್ಲೂಟೂತ್ ವಿ5.2, ಜಿಪಿಎಸ್‌, ಯುಎಸ್​ಬಿ ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದೆ.

  Published by:Prajwal B
  First published: