• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Samsung Galaxy S23: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಸ್ಯಾಮ್​ಸಂಗ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​! ಫೀಚರ್ಸ್ ಹೇಗಿದೆ ಗೊತ್ತಾ?

Samsung Galaxy S23: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಸ್ಯಾಮ್​ಸಂಗ್​ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​! ಫೀಚರ್ಸ್ ಹೇಗಿದೆ ಗೊತ್ತಾ?

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್​

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್​

ಸ್ಯಾಮ್​ಸಂಗ್​ ಕಂಪೆನಿಯಿಂದ ಗ್ಯಾಲಕ್ಸಿ ಸೀರಿಸ್​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​ಫೋನ್​ ಇದೇ 2023ರ ಫೆಬ್ರವರಿ 1ರಿಂದ ಮಾರುಕಟ್ಟೆಗೆ ಕಾಲಿಡುತ್ತದೆ. ಇದೀಗ ಈ ಸ್ಮಾರ್ಟ್​ಫೋನ್​ ಫೀಚರ್ಸ್​ ಸೋರಿಕೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

 • Share this:

  ಟೆಕ್ನಾಲಜಿ ಮಾರುಕಟ್ಟೆಯಲ್ಲಿ (Technology Market) ಅತೀ ಹೆಚ್ಚು ಬೇಡಿಕೆಯಲ್ಲಿರುವ ಸಾಧನವೆಂದರೆ ಅದು ಸ್ಮಾರ್ಟ್​​​ಫೋನ್​ಗಳು (Smartphones). ಸ್ಮಾರ್ಟ್​ಫೋನ್​ಗಳು ಎಂದಾಗ ಮೊದಲು ನೆನಪಾಗೋದೇಸ್ಯಾಮ್​ಸಂಗ್ ಕಂಪೆನಿ. ಈ​ ಕಂಪೆನಿ ಬಹಳ ಹಿಂದಿನಿಂದ ಹಲವಾರು ರೀತಿಯಲ್ಲಿ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯನ್ನು ಪಡೆದುಕೊಂಡಿದೆ. ಸ್ಯಾಮ್​​ಸಂಗ್​ ಕಂಪೆನಿ ಗ್ಯಾಲಕ್ಸಿ ಸೀರಿಸ್​ನಲ್ಲಿ (Samsung Galaxy Series) ಹಲವಾರು ಸ್ಮಾರ್ಟ್​ಫೋನ್​ಗಳನ್ನು ಮೊಬೈಲ್​​ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಸ್ಯಾಮ್​ಸಂಗ್​ ಕಂಪೆನಿಯಿಂದ ಹೊಸ ಸ್ಮಾರ್ಟ್​​ಫೋನ್​ ಬಿಡುಗಡೆಯಾಗಲಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗಯಿಡಲಿದೆ ಎಂದು ವರದಿಯಾಗಿದೆ.


  ಸ್ಯಾಮ್​ಸಂಗ್​ ಕಂಪೆನಿಯಿಂದ ಗ್ಯಾಲಕ್ಸಿ ಸೀರಿಸ್​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​​23 ಸ್ಮಾರ್ಟ್​ಫೋನ್​ ಇದೇ 2023ರ ಫೆಬ್ರವರಿ 1ರಿಂದ ಮಾರುಕಟ್ಟೆಗೆ ಕಾಲಿಡುತ್ತದೆ. ಇದೀಗ ಈ ಸ್ಮಾರ್ಟ್​ಫೋನ್​ ಫೀಚರ್ಸ್​ ಸೋರಿಕೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.


  ಸ್ಯಾಮ್​ಸಂಗ್​ ಗ್ಯಾಲಕಸ್ಇ ಎಸ್​​23 ಸ್ಮಾರ್ಟ್​​ಫೋನ್ ಫೀಚರ್ಸ್


  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ 6.1-ಇಂಚಿನ ಅಮೋಲ್ಡ್​ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 1080 x 2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 19.5:9 ರಚನೆಯ ಅನುಪಾತದೊಂದಿಗೆ ಬರಲಿದೆ ಎನ್ನಲಾಗಿದೆ. ಇನ್ನು ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಹೊಂದಿರುವುದು ಪಕ್ಕಾ ಆಗಿದೆ. ಜೊತೆಗೆ ಈ ಡಿಸ್‌ಪ್ಲೇ HDR10+ ಮತ್ತು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಬಿಡುಗಡೆಯಾಗುತ್ತದೆ.
  ಕ್ಯಾಮೆರಾ ಫೀಚರ್ಸ್​ ಹೇಗಿದೆ?


  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ನೊಂದಿಗೆ ಬರಲಿದೆ ಎಂದು ಹೇಳಲಾಗಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾದೊಂದಿಗೆ ಬರುವ ನಿರೀಕ್ಷೆ ಕೂಡ ಇದೆ.


  ಪ್ರೊಸೆಸರ್​ ಸಾಮರ್ಥ್ಯ


  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 ಜೆನ್​ 2 ಎಸ್​ಓಸಿ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್​​ಫೋನ್​ ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ನೀವು ಈ ಸ್ಮಾರ್ಟ್‌ಫೋನ್‌ನಲ್ಲಿ ನಾಲ್ಕು ವರ್ಷಗಳ ಆಂಡ್ರಾಯ್ಡ್‌ ಅಪ್ಡೇಟ್ಸ್‌ ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 8 ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿರಲಿದೆ.


  ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್​


  ಬ್ಯಾಟರಿ ಸಾಮರ್ಥ್ಯ


  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ ಮುಖ್ಯವಾಗಿ 3,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಬ್ಯಾಟರಿಯು ಎಷ್ಟು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಕಂಪೆನಿ ಇದುವರೆಗೆ ಬಹಿರಂಗ ಪಡಿಸಿಲ್ಲ.


  ಇತರೆ ಫೀಚರ್ಸ್


  ಇನ್ನು ಈ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌ ಅನ್ನು ಬೆಂಬಲಿಸಲಿದೆ.


  ಇದನ್ನೂ ಓದಿ: ಈ ಆ್ಯಪ್ ಮೂಲಕ 2023ರ ಕೇಂದ್ರದ ಬಜೆಟ್​ನ ಸಂಪೂರ್ಣ​ ವಿವರಗಳನ್ನು ಪಡೆಯಬಹುದು!


  ಇನ್ನು ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​​ಫೋನ್​ ಸ್ಯಾಮ್​ಸಂಗ್ ಗ್ಯಾಲಕ್ಸಿ ಅನ್​​ಪ್ಯಾಕ್ಡ್​ ಈವೆಂಟ್​ನಲ್ಲಿ ಬಿಡುಗಡೆಯಾಗಲಿವೆ. ಈ ಈವೆಂಟ್​ ಮೂಲಕ ಇನ್ನೂ ಹಲವಾರು ಸ್ಮಾರ್ಟ್​ಫೋನ್​ಗಳನ್ನು ಕಂಪೆನಿ ಪರಿಚಯಿಸಲಿದೆ ಎಂದು ಕಂಪೆನಿ ಹೇಳಿದೆ. ಅವುಗಳಲ್ಲಿ ಗ್ಯಾಲಕ್ಸಿ ಎಸ್​23 ಪ್ಲಸ್‌, ಮತ್ತು ಗ್ಯಾಲಕ್ಸಿ ಎಸ್​23 ಅಲ್ಟ್ರಾ ಫೋನ್‌ಗಳನ್ನು ಕೂಡ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್​ಫೋನ್​ಗಳ ಕೆಲವೊಂದು ಫೀಚರ್ಸ್​​ಗಳ, ವಿನ್ಯಾಸದ ಬಗ್ಗೆ ಬಹಿರಂಗವಾಗಿದ್ದು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ಸ್ಮಾರ್ಟ್​ಫೋನ್​ಗಳು ಇವುಗಳು ಆಗಲಿವೆ.

  Published by:Prajwal B
  First published: