ಸ್ಯಾಮ್ಸಂಗ್ ಕಂಪನಿಯೆಂದರೆ (Samsung Company) ಮೊದಲು ನೆನಪಾಗೊದು ಸ್ಮಾರ್ಟ್ಫೋನ್ಗಳು. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಕಂಪನಿಯಾಗಿರುವ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಸ್, ಸ್ಮಾರ್ಟ್ಟಿವಿ, ಟ್ಯಾಬ್ಲೆಟ್ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿತ್ತು. ಆದರೆ ಇದೀಗ ಸ್ಯಾಮ್ಸಂಗ್ ಕಂಪನಿ ಹೊಸ ಪ್ರಯತ್ನಕ್ಕೆ ಕಾಲಿಟ್ಟಿದೆ. ಸ್ಯಾಮ್ಸಂಗ್ ಕಂಪನಿ ಹೊಸ ಲ್ಯಾಪ್ಟಾಪ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಸ್ಯಾಮ್ಸಂಗ್ ಕಂಪನಿ ಟೆಕ್ನಾಲಜಿ (Technology) ಮಾರುಕಟ್ಟೆಯಲ್ಲಿ ತನ್ನದೇ ಶೈಲಿಯಲ್ಲಿ ಉತ್ಮನ್ನಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಮುಂದಿನ ವರ್ಷದಲ್ಲಿ ಸ್ಯಾಮ್ಸಂಗ್ ಕಂಪನಿಯಿಂದ ಹಲವಾರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿದೆ ಎಂಬ ವರದಿಯಾಗಿತ್ತು. ಇದೀಗ ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಅದುವೇ ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಲ್ಯಾಪ್ಟಾಪ್ (Samsung Galaxy Book 2 Pro 360) ಎಂಬುದಾಗಿದೆ.
ಇದೀಗ ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಎಂಬ ಲ್ಯಾಪ್ಟಾಪ್ ಅನ್ನುನ ಕಂಪನಿ ಪರಿಚಯಿಸಿದೆ. ಈ ಲ್ಯಾಪ್ಟಾಪ್ ಭಾರತದ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು ಭಾರೀ ಅಗ್ಗದಲ್ಲಿ ಖರೀದಿಸಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಲ್ಯಾಪ್ಟಾಪ್
ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಲ್ಯಾಪ್ಟಾಪ್ ಈ ಬಾರಿಯ ಹೊಸ ವಿನ್ಯಾಸವನ್ನು ಹೊಂದಿದ ಲ್ಯಾಪ್ಟಾಪ್ ಆಗಲಿದೆ. ಇದು 2 ಇನ್ 1 ಲ್ಯಾಪ್ಟಾಪ್ ಆಗಿದ್ದು, 13.3 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ ಅಮೋಲ್ಡ್ ಡಿಸ್ಪ್ಲೇ ಆಗಿದ್ದು, 500 ನಿಟ್ಸ್ನಷ್ಟು ಬ್ರೈಟ್ನೆಸ್ ಅನ್ನು ಹೊಂದಿದೆ. ಈ ಡಿಸ್ಪ್ಲೇಯನ್ನು 360 ಡಿಗ್ರಿಯಷ್ಟು ಫ್ಲಿಪ್ ಮಾಡಬಹುದು. ಅಲ್ಲದೆ ಈ ಲ್ಯಾಪ್ಟಾಪ್ ಅನ್ನು ನೀವು ಟ್ಯಾಬ್ಲೆಟ್ ಆಗಿಯೂ ಬಳಸಬಹುದಾಗಿದೆ. ಜೊತೆಗೆ ಇದು ಸ್ಯಾಮ್ಸಂಗ್ನ ಎಸ್ ಪೆನ್ ಅನ್ನು ಸಹ ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಐಕ್ಯೂನ ಹೊಸ ಸ್ಮಾರ್ಟ್ಫೋನ್ಸ್! ಬೆಲೆ, ಫೀಚರ್ಸ್ ಬಗ್ಗೆ ಮಾಹಿತಿ ಇಲ್ಲಿದೆ
ಪ್ರೊಸೆಸರ್ ಸಾಮರ್ಥ್ಯ ಹೇಗಿದೆ?
ಇನ್ನು ಈ ಲ್ಯಾಪ್ಟಾಪ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ಚಾಲಿತ ರೂಪಾಂತರವು 35 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ. ಯಾಕೆಂದರೆ ಇಂಟೆಲ್ ರೂಪಾಂತರವು ಸಿಂಗಲ್ ಚಾರ್ಜ್ನಲ್ಲಿ 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಲ್ಯಾಪ್ಟಾಪ್ ಯುಎಸ್ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಒಳಗೊಂಡಂತೆ ಅನೇಕ ಪೋರ್ಟ್ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಬೆಲೆ ಹೇಗಿದೆ?
ಇದಲ್ಲದೆ ಗ್ಯಾಲಕ್ಸಿ ಬುಕ್2 ಪ್ರೋ 360 ಲ್ಯಾಪ್ಟಾಪ್ 1,23,800 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದರ ಇಂಟೆಲ್ ರೂಪಾಂತರವನ್ನು ಭಾರತದಲ್ಲಿ 1,15,990 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ಹೆಚ್ಚುವರಿ ಬೆಲೆಗೆ, ಬಳಕೆದಾರರು ಅಂತರ್ನಿರ್ಮಿತ 5G ಮತ್ತು Wi-Fi 6E ಬೆಂಬಲದೊಂದಿಗೆ ಉತ್ತಮ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ಸ್ನಾಪ್ಡ್ರಾಗನ್-ಚಾಲಿತ ಗ್ಯಾಲಕ್ಸಿ ಬುಕ್ 2 ಪ್ರೋ ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್04 ಸ್ಮಾರ್ಟ್ಫೋನ್
ಇನ್ನು ಸ್ಯಾಮ್ಸಂಗ್ ಕಂಪನಿ ಇತ್ತೀಚಿಗೆ ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್04 ಸ್ಮಾರ್ಟ್ಫೊನ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ಫೋನ್ 6.5 ಇಂಚಿನ ಹೆಚ್ಡಿ + ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿಕೊಂಡಿದೆ. ಇದು ಮೀಡಿಯಾಟೆಕ್ ಹಿಲಿಯೋ ಪಿ35 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ.
ವಿಶೇಷವಾಗಿ ಈ ಸ್ಮಾರ್ಟ್ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ