• Home
  • »
  • News
  • »
  • tech
  • »
  • Samsung Galaxy Buds2 Pro:13 ಗಂಟೆಗಳ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿದ ಸ್ಯಾಮ್‌ಸಂಗ್‌ನ ಇಯರ್‌ಬಡ್ಸ್‌ ಮಾರುಕಟ್ಟೆಗೆ ಲಗ್ಗೆ!

Samsung Galaxy Buds2 Pro:13 ಗಂಟೆಗಳ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿದ ಸ್ಯಾಮ್‌ಸಂಗ್‌ನ ಇಯರ್‌ಬಡ್ಸ್‌ ಮಾರುಕಟ್ಟೆಗೆ ಲಗ್ಗೆ!

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ

ಇದು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದ ವಿಶೇಷ ಇಯರ್‌ಬಡ್ಸ್‌ ಆಗಿದೆ. ಇದರ ಫೀಚರ್ಸ್‌ ಬಗ್ಗೆ ಮಾಹಿತಿ ನೀಡಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದ ಇಯರ್‌ಬಡ್ಸ್‌ ಇದಾಗಿದೆ. 

  • Share this:

    ಸ್ಯಾಮ್‌ಸಂಗ್‌ ಒಂದು ದೊಡ್ಡ ಬ್ರಾಂಡ್ (Brand) ಅಂತ ಹೇಳಬಹುದು ಮತ್ತು ಇದು ವಿವಿಧ ರೀತಿಯ ಮಾರುಕಟ್ಟೆಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಸ್ಯಾಮ್‌ಸಂಗ್‌ ಕಂಪನಿಯು ದಿನ ಹೋದಂತೆ ಏನಾದರು ಫೀಚರ್ಸ್‌ ಹೋಮದಿದ ಬ್ರ್ಯಾಂಡ್‌ ಗಳನ್ನು ಮಾರುಕಟ್ಟೆಗೆ (Market) ಪರಿಚಯಿಸುತ್ತಾ ಇರುತ್ತದೆ. ಕಂಪನಿಯು  ಮೊಬೈಲ್ ಸಾಧನಗಳು, ಟ್ಯಾಬ್ಲೆಟ್‌ಗಳು, ಇಯರ್‌ ಬಡ್ಸ್‌ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಬಹಳಷ್ಟು ಯಶಸ್ವಿಯನ್ನು ಗಳಿಸಿದೆ. ಇದೀಗ ಸ್ಯಾಮ್‌ಸಂಗ್‌ನಿಂದ (Samsung) ಮತ್ತೊಂದು ಪ್ರೊಡಕ್ಟ್‌ ಲಾಂಚ್‌ ಆಗ್ತಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಎಂಬ ಇಯರ್‌ ಬಡ್ಸ್‌ ಅನ್ನು ಕಂಪನಿ ಬಿಡುಗಡೆ ಮಾಡುತ್ತಿರುವ ಪ್ರೊಡಕ್ಟ್‌ ಆಗಿದೆ.


    ಹೊಸ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಈ ಸೀರಿಸ್‌ನ ಉತ್ಪನ ಇದೀಗ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಇದು ಕಳೆದ ವರ್ಷ ಸ್ವಲ್ಪಮಟ್ಟಿಗೆ ತನ್ನ ಮಾರುಕಟ್ಟೆಯಲ್ಲಿ ಮಾರಾಟದ ಸಮಯವನ್ನು ಕಳೆದುಕೊಂಡಿತು.


    ಪ್ರೀಮಿಯಂ ಟ್ರೂ ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳ ವಿಭಾಗವು ಬಹಳಷ್ಟು ಆಯ್ಕೆಗಳೊಂದಿಗೆ ತುಂಬಿದೆ ಮತ್ತು ಹೊಸ ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಅನ್ನು ಉತ್ತಮ ಬ್ರಾಂಡ್‌ ಎಂದು ಎನಿಸಿಕೊಳ್ಳಲು ಈ ಬ್ರಾಂಡ್‌ ಕಾರಣವಾಗುತ್ತದೆ.


    ಇದನ್ನೂ ಓದಿ; ಎಲ್‌ಜಿ ಕಂಪನಿಯಿಂದ ಹೊಸ ಫೋಲ್ಡೇಬಲ್‌ ಡಿಸ್‌ಪ್ಲೇ ಬಿಡುಗಡೆ! ನೋಡೋಕೆ ಸಖತ್​ ಡಿಫ್ರೆಂಟ್ ಗುರೂ!


    ಗ್ಯಾಲಕ್ಸಿ ಬಡ್ಸ್‌ 2 ಪ್ರೊನ ವಿನ್ಯಾಸ:


    • ಗ್ರಾಹಕರಿಗೆ ಒಗ್ಗುವಂತೆ ಈ ಇಯರ್‌ ಬಡ್ಸ್‌ ಫಿಟ್‌ ಆಗಿರುತ್ತದೆ.

    • ಇಯರ್‌ಬಡ್‌ಗಳು ತಮ್ಮ ಹಿಂದಿನ ವರ್ಷನ್‌ನ ಬ್ರಾಂಡ್‌ಗಳಿಗಿಂತ 15 ಪ್ರತಿಶತ ಚಿಕ್ಕದಾಗಿದೆ ಎಂದು Samsung ಹೇಳಿಕೊಂಡಿದೆ.‌


    Samsung s earbuds with 13 hour charging capacity hit the market
    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ


    • ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಬಹಳ ಫೀವಟ್‌ ಆಗಿದೆ ಮತ್ತು ಯಾವುದೇ ಸಂದರ್ಭದಲ್ಲಿ ನಿಮ್ಮ ಕಿವಿಯಿಂದ ಬೀಳುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಎಂದು ಕಂಪನಿ ತಿಳಿಸಿದೆ.

    • ಇದು ಒಳ್ಳೆಯ ಗುಣಮಟ್ಟದ ಸೌಂಡ್‌ ಅನ್ನು ಕೂಡ ಒಳಗೊಂಡಿದೆ.

    • ಇವುಗಳನ್ನು ಧರಿಸಿದ ಬಳಿಕ ಸುತ್ತಲಿರುವ ಶಬ್ದಗಳಿಂದ ಯಾವುದೇ ತೊಂದರೆಗಳಾಗುವುದಿಲ್ಲ.

    • ಸ್ಯಾಮ್‌ಸಂಗ್ 24-ಬಿಟ್ ಹೈ-ಫೈ ಆಡಿಯೊ ಗುಣಮಟ್ಟವನ್ನು ನೀಡುತ್ತದೆ.


    ಈ ಇಯರ್‌ಬಡ್ಸ್‌ನ ಬ್ಯಾಟರಿ ಸಾಮರ್ಥ್ಯ:


    ಕಂಪನಿಯ ಗ್ಯಾಲಕ್ಸಿ ಇಯರ್‌ ಬಡ್ಸ್‌ 2 ಪ್ರೊ ಆನ್ ಆಗಿರುವಾಗ 5 ಗಂಟೆಗಳವರೆಗೆ ಯೂಸ್‌ ಮಾಡಬಹುದದಾಗಿದೆ. ಚಾರ್ಜಿಂಗ್ ಕೇಸ್‌ನೊಂದಿಗೆ 13 ಗಂಟೆಗಳವರೆಗೆ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿದೆ.


    ಬೆಲೆ ಮತ್ತು ಲಭ್ಯತೆ:


    ಈ ಗ್ಯಾಲಕ್ಸಿ ಬಡ್ಸ್‌ 2 ಪ್ರೊನ ಬೆಲೆ 19,999 ರೂಪಾಯಿಯಾಗಿದೆ. ಅಲ್ಲದೇ ಇದು ಇ ಕಾಮರ್ಸ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೀವು ಇದನ್ನು ಗ್ರ್ಯಾಫೈಟ್, ವೈಟ್ ಮತ್ತು ಬೋರಾ ಪರ್ಪಲ್ ಎಂಬ ಮೂರು ಬಣ್ಣಗಳಲ್ಲಿ ಈ ಸಾಧನವನ್ನು ಆಯ್ಕೆ ಮಾಡಬಹುದು.


    Samsung s earbuds with 13 hour charging capacity hit the market
    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ಪ್ರೊ


    ಇದು ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದ ವಿಶೇಷ ಇಯರ್‌ಬಡ್ಸ್‌ ಆಗಿದೆ. ಇದರ ಫೀಚರ್ಸ್‌ ಬಗ್ಗೆ ಮೇಲೆ ನೀಡಿದ್ದು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದ ಇಯರ್‌ಬಡ್ಸ್‌ ಇದಾಗಿದೆ.


    ಇದನ್ನೂ ಓದಿ: ಟ್ವಿಟರ್‌ಗೆ ಟಕ್ಕರ್‌ ನೀಡಲು ಸಜ್ಜಾಗಿದೆ ಮಾಸ್ಟೋಡಾನ್ ಅಪ್ಲಿಕೇಶನ್! ಏನಿದು ಹೊಸ ಆ್ಯಪ್‌ ಇಲ್ಲಿದೆ ಮಾಹಿತಿ


    ಈರೀತಿಯ ಇಯರ್‌ಬಡ್ಸ್‌ಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಬಂದಿದೆ. ಇದೀಗ ಈ ಸಾಲಿಗೆ ಸ್ಯಾಮ್‌ಸಂಗ್‌ ಕಂಪನಿಯ ಇಯರ್‌ಬಡ್ಸ್‌ ಕೂಡ ಸೇರಿವೆ.


    ಇದರ ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಅನ್ನು ಬಿಡುಗಡೆ ಮಾಡಿದೆ.


    ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4 ಕ್ಲಾಸಿಕ್ ಒನ್ UI ವಾಚ್ 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಹೊಸ ವೇರ್ OS ಅನ್ನು ಆಧರಿಸಿದೆ.


    ಸ್ಯಾಮ್‌ಸಂಗ್ ತನ್ನ ಧರಿಸಬಹುದಾದ ಫೋಕಸ್ಡ್ ಎಕ್ಸಿನೋಸ್ W920 SoC ಅನ್ನು ಸ್ಮಾರ್ಟ್ ವಾಚ್‌ಗಳಿಗಾಗಿ ಬಳಸಿದೆ. ಇದನ್ನು 1.5GB RAM ನೊಂದಿಗೆ ಜೋಡಿಸಲಾಗಿದೆ. ಸಾಧನಗಳು 16GB ಆನ್‌ಬೋರ್ಡ್ ಸಂಗ್ರಹಣೆಯನ್ನು ಸಹ ಹೊಂದಿವೆ.

    Published by:Prajwal B
    First published: