ಸ್ಪೋಟಗೊಂಡ 2 ಸ್ಯಾಮ್ಸಂಗ್​ ಮೊಬೈಲ್​ಗಳು, ಕಾರು ಭಸ್ಮ!


Updated:June 11, 2018, 5:24 PM IST
ಸ್ಪೋಟಗೊಂಡ 2 ಸ್ಯಾಮ್ಸಂಗ್​ ಮೊಬೈಲ್​ಗಳು, ಕಾರು ಭಸ್ಮ!

Updated: June 11, 2018, 5:24 PM IST
ನ್ಯೂಯಾರ್ಕ್​: ಎರಡು ವರ್ಷಗಳ ಹಿಂದೆ ಸ್ಯಾಮ್ಸಂಗ್​ ಬಿಡುಗಡೆಗೊಳಿಸಿದ ಗೆಲಾಕ್ಸಿ ನೋಟ್​ 7 ಬ್ಲಾಸ್ಟ್​ ಆಗುತ್ತಿದ್ದ ಪ್ರಕರಣದ ನೆನಪುಗಳು ಮಾಸುವ ಮುನ್ನವೇ ಗೆಲಾಕ್ಸಿ ಎಸ್​8 ಮೊಬೈಲ್​ ಮತ್ತು ಗೆಲಾಕ್ಸಿ ಎಸ್​4 ಮೊಬೈಲ್​ ಕಾರನ್ನೇ ಭಸ್ಮಗೊಳಿಸಿದ ಘಟನೆ ವರದಿಯಾಗಿದೆ.

ಎಬಿಸಿ ನ್ಯೂಸ್​ನ WXYZ ವೆಬ್​ಸೈಟ್​ ವರದಿ ಪ್ರಕಾರ, ಅಮೆರಿಕದ ಮಹಿಳೆಯೊಬ್ಬರು 2017ರಲ್ಲಿ ಬಿಡುಗಡೆಯಾಗಿದ್ದ ಗೆಲಾಕ್ಸಿ ಎಸ್​8 ಮತ್ತು 2013ರಲ್ಲಿ ಬಿಡುಗಡೆಯಾಗಿದ್ದ ಗೆಲಾಕ್ಸಿ ಎಸ್​ 3 ಮೊಬೈಲ್​ ಹಿಡಿದುಕೊಂಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಎರಡೂ ಮೊಬೈಲ್​ಗಳು ಹೊಗೆಕಾರ ತೊಡಗಿದೆ. ಇದರಿಂದ ಭಯಗೊಂಡ ಮಹಿಳೆ ಕೂಡಲೇ ಕಾರನ್ನು ನಡುರಸ್ತೆಯಲ್ಲೇ ಬಿಟ್ಟು ಹೊರ ನಡೆದಿದ್ದಾರೆ.


ಎರಡೂ ಮೊಬೈಲ್​ಗಳಲ್ಲಿ ಒಂದೇ ವೇಳೆ ಬೆಂಕಿ ಹತ್ತಿಕೊಂಡ ಪರಿಣಾಮ ಕಾರು ಸಂಪೂರ್ಣ ಭಸ್ಮವಾಗಿದೆ. ಈ ಕುರಿತು ವೆಬ್​ಸೈಟ್​ನೊಂದಿಗೆ ಮಾತನಾಡಿದ್ದ ಮಹಿಳೆ ಸ್ಯಾಮ್ಸಂಗ್​ ಸಂಸ್ಥೆಗೆ ದೂರು ನೀಡಿರುವುದಾಗಿ ಹೇಳಿದ್ದಾರೆ.
Loading...

ಟೈಮ್ಸ್​ ಆಫ್​ ಇಂಡಿಯಾ ವರದಿ ಪ್ರಕಾರ, ಸ್ಯಾಮ್ಸಂಗ್​ನ ಒಂದು ತಂಡ ಈ ಘಟನೆ ಕುರಿತು ತನಿಖೆ ಆರಂಭಿಸಿದೆ, ಘಟನೆ ಕುರಿತು ಸೂಕ್ತವಾದ ದಾಖಲೆಯನ್ನು ಕಲೆಹಾಕುತ್ತಿದ್ದು, ಶೀಘ್ರದಲ್ಲೇ ಪೂರ್ಣ ವಿವರಣೆ ನೀಡುವುದಾಗಿ ಸ್ಯಾಮ್ಸಂಗ್​ ಹೇಳಿದೆ.
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ