Samsung: ಸ್ಯಾಮ್​ಸಂಗ್​ ಸ್ಮಾರ್ಟ್​ಫೋನ್​, ಟಿವಿ ಮೇಲೆ ಭರ್ಜರಿ ಆಫರ್​!

Amazon Great Indian Festival 2020: ಅಮೆಜಾನ್​ ನಾಳೆಯಿಂದ  ‘ಗ್ರೇಟ್​ ಇಂಡಿಯನ್​​ ಫೆಸ್ಟಿವಲ್’ ಪ್ರಾರಂಭಿಸುತ್ತಿದೆ. ಪ್ರೈಮ್​ ಗ್ರಾಹಕರು ಇಂದಿನಿಂದ ವಸ್ತುಗಳನ್ನು ಖರೀದಿಸುವ ಅವಕಾಶ ನೀಡಿದೆ.

ಸ್ಯಾಮ್​ಸಂಗ್​

ಸ್ಯಾಮ್​ಸಂಗ್​

 • Share this:
  ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್​ ಸಂಸ್ಥೆ ಭಾರತದಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ಆಫರ್​ ನೀಡುತ್ತಿದೆ. ಫ್ಲಿಪ್​ಕಾರ್ಟ್​ ಮತ್ತು ಅಮೆಜಾನ್​ ಮೂಲಕ ತನ್ನ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸ್ಮಾರ್ಟ್​ಫೋನ್​, ಸ್ಮಾರ್ಟ್​ಟಿವಿ ಹಾಗೂ ಗ್ಯಾಜೆಟ್​ ವಸ್ತುಗಳನ್ನುಆಕರ್ಷಕ ಬೆಲೆಗೆ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ.

  ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​  ಇಂದಿನಿಂದ ‘ಬಿಗ್​ ಬಿಲಿಯನ್​ ಡೇಸ್’​ ಪ್ರಾರಂಭಿಸಿದೆ. ಇದಕ್ಕೂ ಮೊದಲು ಗ್ರಾಹಕರಿಗೆ 1 ರೂ.ಗೆ ಫ್ರೀ ಬುಕ್ಕಿಂಗ್​ ಮಾಡುವ ಅವಕಾಶ ಮಾಡಿಕೊಟ್ಟಿತ್ತು. ಅ.11 ರಿಂದ 14ರವರೆಗೆ ಫ್ರೀ ಬುಕ್ಕಿಂಗ್ ಮಾಡುವ ಮೂಲಕ ವಸ್ತುಗಳನ್ನು ಖರೀದಿಸಬಹುದಾಗಿತ್ತು.

  ಇನ್ನು ಅಮೆಜಾನ್​ ನಾಳೆಯಿಂದ  ‘ಗ್ರೇಟ್​ ಇಂಡಿಯನ್​​ ಫೆಸ್ಟಿವಲ್’ ಪ್ರಾರಂಭಿಸುತ್ತಿದೆ. ಪ್ರೈಮ್​ ಗ್ರಾಹಕರು ಇಂದಿನಿಂದ ವಸ್ತುಗಳನ್ನು ಖರೀದಿಸುವ ಅವಕಾಶ ನೀಡಿದೆ.

  ಹಾಗಾಗಿ ಹಬ್ಬದ ಋತುವಿನಲ್ಲಿರುವ ಗ್ರಾಹಕರಿಗಾಗಿ ಆನ್​ಲೈನ್​ ಮಾರಾಟ ಮಳಿಗೆಗಳು ಭರ್ಜರಿ ಆಫರ್​ ನೀಡಿದೆ. ಇವೆರಡು ವೇದಿಕೆಯಲ್ಲಿ ಸ್ಯಾಮ್​ಸಂಗ್​ ತನ್ನ ಉತ್ಪನ್ನಗಳನ್ನು ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡುತ್ತಿದೆ. ಗ್ಯಾಲಕ್ಸಿ ನೋಟ್​10 ಲೈಟ್​​ ಅನ್ನು ಬೆಲೆ ಕಡಿತ ಮಾಡಿ ಮಾರಾಟ ಮಾಡುತ್ತಿದೆ.  ಜೊತೆಗೆ ಎಕ್ಸ್​ಚೇಂಜ್​ ಆಫರ್​, 805 ರೂ.ವಿನ ಇಎಮ್​ಐ ಆಯ್ಕೆ ಸೌಲಭ್ಯ, ರೂ 2 ಸಾವಿರದವರೆಗೆ ಕ್ಯಾಶ್​ಬ್ಯಾಕ್​ ಆಫರ್​ ನೀಡಿದೆ.

  ಅಮೆಜಾನ್, ಫ್ಲಿಪ್​ಕಾರ್ಟ್​​ ಸ್ಯಾಮ್​ಸಂಗ್ ಟಿವಿಗಳ ಮೇಲೆ ಆಫರ್​ ನೀಡಿದೆ. 50 ಇಂಚಿನ ಟಿವಿಗಳ ಬೆಲೆ 72,990, 55 ಇಂಚಿನ ಟಿವಿ ಬೆಲೆ: 81,990, 65 ಇಂಚಿನ ಟಿವಿ ಬೆಲೆ: 1,29,990 ಇದೆ.

  ಇನ್ನು ರೆಫ್ರಿಜರೇಟರ್​, ವಾಷರ್​ ಡ್ರೇಯರ್, ಏಸಿ​ ಕೂಡ ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದೆ. 27 ಸಾವಿರದಿಂದ 31 ಸಾವಿರ ಬೆಲೆಯಲ್ಲಿ ಎಸಿ ಸಿಗಲಿದೆ.
  Published by:Harshith AS
  First published: