ಸ್ಯಾಮ್​​ಸಂಗ್​​​​​​ ಈ ಸ್ಮಾರ್ಟ್​ಫೋನ್​ ಮೇಲೆ ಸಿಗ್ತಿದೆ 14 ಸಾವಿರ ರೂ. ಕ್ಯಾಶ್​​ಬ್ಯಾಕ್​!

Samsung: ಸ್ಯಾಮ್​ಸಂಗ್​ ಎಸ್​10 ಮತ್ತು ಎಸ್​10 ಪ್ಲಸ್​ ಸ್ಮಾರ್ಟ್​ಫೋನ್​ಗಳಿಗೆ 5 ಸಾವರದಷ್ಟು ಕ್ಯಾ​ಶ್​​ಬ್ಯಾಕ್​ ನೀಡುತ್ತಿದೆ. ಇನ್ನು ಎಚ್​ಡಿಎಫ್​ಸಿ ಕ್ರೆಡಿಟ್​ ಕಾಡ್​  ಅಥವಾ ಡೆಬಿಟ್​ ಕಾರ್ಡ್​ ಮೂಲಕ ಫೋನ್​ ಖರೀದಿಸಿದರೆ 6 ಸಾವಿರ ರೂ. ಕ್ಯಾಶ್​​​​ಬ್ಯಾಕ್​ ಸಿಗಲಿದೆ.

news18-kannada
Updated:November 23, 2019, 4:59 PM IST
ಸ್ಯಾಮ್​​ಸಂಗ್​​​​​​ ಈ ಸ್ಮಾರ್ಟ್​ಫೋನ್​ ಮೇಲೆ ಸಿಗ್ತಿದೆ 14 ಸಾವಿರ ರೂ. ಕ್ಯಾಶ್​​ಬ್ಯಾಕ್​!
ಸ್ಯಾಮ್​ಸಂಗ್​
  • Share this:
ಸ್ಯಾಮ್​ಸಂಗ್ ಸಂಸ್ಥೆ ಹೊಸ​ ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಸಿಹಿ ಸುದ್ದಿಯೊಂದನ್ನು ಹೊರಡಿಸಿದೆ. ಕಂಪೆನಿ ಗ್ರಾಹಕರಿಗಾಗಿ ಸ್ಯಾಮ್​ಸಂಗ್​ ಸೇಲ್​ ನಡೆಸುತ್ತಿದ್ದು, ಇದರಲ್ಲಿ ಗ್ಯಾಲಕ್ಸಿ ಫೋನ್​ಗಳ ಮೇಲೆ ರಿಯಾಯಿತಿ ಜೊತೆಗೆ ಕ್ಯಾಶ್​​ಬ್ಯಾಕ್​​ ಆಫರ್​ ನೀಡುತ್ತಿದೆ. ಖರೀದಿದಾರರಿಗೆಂದು ಈ ಆಫರ್​ ಅನ್ನು ನವೆಂಬರ್​ 23 ರಿಂದ ಡಿಸೆಂಬರ್​ 31ರ ವರೆಗೆ ನಡೆಸುತ್ತಿದೆ.

ಈ ಸೇಲ್​​ನಲ್ಲಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಸ್​10ಇ ಸ್ಮಾರ್ಟ್​ಫೋನ್​ ಮೇಲೆ 14 ಸಾವಿರದಷ್ಟು ಕ್ಯಾಶ್​ಬ್ಯಾಕ್​ ಆಫರ್​ ನೀಡುತ್ತಿದೆ. ಆದರೆ ಈ ಕ್ಯಾಶ್​​​ಬ್ಯಾಕ್​ ಪಡೆದುಕೊಳ್ಳಲು ಎಚ್​ಡಿಎಫ್​ಸಿ ಕ್ರೆಡಿಟ್​ ಕಾರ್ಡ್​​ ಅಥವಾ ಡೆಬಿಟ್​ ಕಾರ್ಡ್​ ಬಳಸಬೇಕು. ಈ ಫೋನಿನ ನೈಜ್ಯ ಬೆಲೆ 55,900 ರೂ. ಇದ್ದು, ಸ್ಯಾಮ್​ಸಂಗ್​ ಸೇಲ್​ನಲ್ಲಿ ದರ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ.

ಸ್ಯಾಮ್​ಸಂಗ್​ ಎಸ್​10 ಮತ್ತು ಎಸ್​10 ಪ್ಲಸ್​ ಸ್ಮಾರ್ಟ್​ಫೋನ್​ಗಳಿಗೆ 5 ಸಾವರದಷ್ಟು ಕ್ಯಾ​ಶ್​​ಬ್ಯಾಕ್​ ನೀಡುತ್ತಿದೆ. ಇನ್ನು ಎಚ್​ಡಿಎಫ್​ಸಿ ಕ್ರೆಡಿಟ್​ ಕಾಡ್​  ಅಥವಾ ಡೆಬಿಟ್​ ಕಾರ್ಡ್​ ಮೂಲಕ ಫೋನ್​ ಖರೀದಿಸಿದರೆ 6 ಸಾವಿರ ರೂ. ಕ್ಯಾಶ್​​​​ಬ್ಯಾಕ್​ ಸಿಗಲಿದೆ. ಅಂತೆಯೇ, ಗ್ಯಾಲಕ್ಸಿ 10 ಮತ್ತು ನೋಟ್​ 10 ಪ್ಲಸ್​ ಸ್ಮಾರ್ಟ್​ಫೋನಿನ ಮೇಲೆ 6 ಸಾವಿರ ಕ್ಯಾಶ್​ಬ್ಯಾಕ್​ ನೀಡುತ್ತಿದೆ.

ಇನ್ನು ಗ್ಯಾಲಕ್ಸಿ ಎ30 ಎಸ್​ ಫೋನಿನ ದರ ಕಡಿತಗೊಳಿಸಿ 15,999 ರೂ. ಗೆ ಮಾರಾಟ ಮಾಡುತ್ತಿದೆ. ಗ್ಯಾಲಕ್ಸಿ ಎ70 ಖರೀದಿ ಮಾಡಿದರೆ 1,999 ರೂ. ವಿನ ಇಯರ್​ಫೋನ್​ ಉಚಿತವಾಗಿ ನೀಡುತ್ತಿದೆ.

ಇದನ್ನೂ ಓದಿ: ಎಚ್ಚರ! ಟೈಟ್​​ ಪ್ಯಾಂಟ್ ಧರಿಸಿ ಕಾರು ಚಲಾಯಿಸುತ್ತೀರಾ?

ಇದನ್ನೂ ಓದಿ: Indian Navy Recruitment 2019: 144 ಎಸ್​​ಎಸ್​ಸಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

First published: November 23, 2019, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading