Samsung ಗ್ಯಾಲಕ್ಸಿ ನೋಟ್ ಸಿರೀಸ್ ಅನ್ನು ಸ್ಥಗಿತ ಮಾಡುತ್ತಾ? ಹಾಗಿದ್ರೆ ಮುಂದೇನು?

Samsung Galaxy Note Series: Samsung Galaxy Note 20 ಸರಣಿಯ ಉತ್ಪಾದನೆಯನ್ನು ಈ ವರ್ಷದ ಅಂತ್ಯದ ವೇಳೆಗೆ ನಿಲ್ಲಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. Galaxy Note 20 ಸರಣಿಯ ಕೊನೆಯ ಫೋನ್ ಆಗಿರಬಹುದು. 2021 ರಲ್ಲಿ Note 20 ಸರಣಿಯ ಸುಮಾರು 32 ಲಕ್ಷ ಸಾಧನಗಳನ್ನು Samsung ಮಾರಾಟ ಮಾಡಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

Samsung Galaxy Note20

Samsung Galaxy Note20

  • Share this:
    ಸ್ಯಾಮ್‌ಸಂಗ್ (Samsung) ಜನಪ್ರಿಯ ಸ್ಮಾರ್ಟ್​ಫೋನ್​ಗಳನ್ನು (Smartphones) ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸುವ ಕಂಪನಿಗಳಲ್ಲಿ ಒಂದು. ಇದೀಗ ಕಂಪನಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್ ಸರಣಿಯ (Samsung Galaxy Note Series) ಸ್ಮಾರ್ಟ್‌ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಯಿಂದ ತೆಗೆಯಲು ಮುಂದಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಗಮನಿಸುವುದಾದರೆ, ಸ್ಯಾಮ್‌ಸಂಗ್ ಈ ವರ್ಷ ಯಾವುದೇ ಹೊಸ Galaxy Note ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿಲ್ಲ ಮತ್ತು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಮತ್ತು ಅಧಿಕೃತವಾಗಿ ದೃಢಪಡಿಸಿಲ್ಲ. ಹೀಗಾಗಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್ ಸರಣಿಯಯನ್ನು ಸ್ಥಗಿತಗೊಳಿಸಲಿದೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಳೆಯ ಮಾದರಿಯ ಉತ್ಪಾದನೆಯನ್ನು ಸಹ ನಿಲ್ಲಿಸುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. 

    ಮಾಹಿತಿ ಪ್ರಕಾರ, Samsung Galaxy Note 20 ಸರಣಿಯ ಉತ್ಪಾದನೆಯನ್ನು ಈ ವರ್ಷದ ಅಂತ್ಯದ ವೇಳೆಗೆ ನಿಲ್ಲಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. Galaxy Note 20 ಸರಣಿಯ ಕೊನೆಯ ಫೋನ್ ಆಗಿರಬಹುದು. 2021 ರಲ್ಲಿ Note 20 ಸರಣಿಯ ಸುಮಾರು 32 ಲಕ್ಷ ಸಾಧನಗಳನ್ನು Samsung ಮಾರಾಟ ಮಾಡಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. 2020ರ ವೇಳೆಗೆ ಆ ಸಂಖ್ಯೆ 10 ಮಿಲಿಯನ್‌ಗಿಂತಲೂ ಕಡಿಮೆ ಇತ್ತು.

    ಸ್ಯಾಮ್​ಸಂಗ್​ ಗ್ಯಾಲಕ್ಸಿ ನೋಟ್​ ಸರಣಿ

    ನೋಟ್ ಸರಣಿಯು ಯಾವಾಗಲೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿಯ ಫ್ಲ್ಯಾಗ್‌ಶಿಪ್‌ಗಿಂತ ವಿಭಿನ್ನವಾಗಿದೆ. ಆದರೆ ಇದರಲ್ಲಿರುವ ವೈಶಿಷ್ಟ್ಯಗಳು ಒಂದೇ ಸಾಮ್ಯತೆ ಹೊಂದಿದೆ. ಅಂದಹಾಗೆಯೇ ವೈಶಿಷ್ಟ್ಯದಲ್ಲಿ ಸ್ಟೈಲಸ್-ಎಸ್ ಪೆನ್ ವಿಶೇಷವಾಗಿತ್ತು. ಈ ವೈಶಿಷ್ಟ್ಯದಿಂದಾಗಿ ಈ ಸರಣಿಯು ಬಹಳ ಜನಪ್ರಿಯತೆ ಗಳಿಸಿತು. ಈಗ S22 ಸರಣಿಯಲ್ಲಿ ಸ್ಟೈಲಸ್ ಪೆನ್ ಕೂಡ ಸೇರ್ಪಡೆಗೊಳ್ಳಲಿದೆ ಎಂದು ಊಹಿಸಲಾಗಿದೆ. S22 ಫೆಬ್ರವರಿ 2022 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ಇದನ್ನು ಓದಿ: ಆಫೀಸ್ ಒಳಗೆ Phone ಚಾರ್ಜ್ ಮಾಡಿದ್ರೆ ಉದ್ಯೋಗಿಗಳ ಮೇಲೆ ವಿದ್ಯುತ್ ಕಳವು ಆರೋಪ! ಸಂಬಳ ಕಟ್​!; ಇದೆಂಥಾ ರೂಲ್ಸ್

    ಸ್ಯಾಮ್​ಸಂಗ್​ ಮಡಚುವ ಫೋನ್‌ಗಳು

    Samsung ಈಗ ಮಡಚಬಹುದಾದ ಫೋನ್‌ಗಳ ತಯಾರಿಯಲ್ಲಿ ಮಗ್ನವಾಗಿದೆ. ಈ ಫೋನ್‌ಗಳಲ್ಲಿ Galaxy Fold ಮತ್ತು Galaxy Flip ಸೇರಿವೆ. 2021 ರಲ್ಲಿ, ಗ್ಯಾಲಕ್ಸಿ ಫೋಲ್ಡ್ ಸರಣಿಯಲ್ಲಿ ಮೊದಲ ಬಾರಿಗೆ, ಎಸ್ ಪೆನ್ ಬೆಂಬಲವನ್ನು ನೀಡಲಾಯಿತು.

    ಇದನ್ನು ಓದಿ: Apple Iphone: ಐಫೋನ್ ಮೇಲೂ ಕಣ್ಣಿಟ್ಟಿದ್ದಾರೆ ಸೈಬರ್ ದಾಳಿಕೋರರು! ನಿಮ್ಮ ಸಾಧನ ಹ್ಯಾಕ್ ಆಗಿದೆಯಾ ಎಂದು ಹೀಗೆ ಪರಿಶೀಲಿಸಿ

    ಫ್ಲ್ಯಾಗ್‌ಶಿಪ್ ಫೋಲ್ಡಬಲ್ ಮತ್ತು S ಸರಣಿಯೊಂದಿಗೆ 3 ಸರಣಿಯ ಪ್ರೀಮಿಯಂ ಫೋನ್‌ಗಳು ಸ್ಯಾಮ್‌ಸಂಗ್‌ಗೆ ಬಹಳ ಮುಖ್ಯವಾದವು. ಆದಾಗ್ಯೂ, ಇಲ್ಲಿಯವರೆಗೆ, ನೋಟ್ ಸರಣಿಯ ಮುಚ್ಚುವಿಕೆಯನ್ನು ದಕ್ಷಿಣ ಕೊರಿಯಾದ ದೈತ್ಯ ಸ್ಯಾಮ್‌ಸಂಗ್ ಖಚಿತಪಡಿಸಿಲ್ಲ. ಈ ಫೋನ್ ಅನ್ನು ಸ್ಥಗಿತಗೊಳಿಸುವ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದೆ.
    Published by:Harshith AS
    First published: