Samsung Mobile: ಐಫೋನ್ ಹಾದಿ ತುಳಿದ ಮತ್ತೊಂದು ಮೊಬೈಲ್ ಬ್ರ್ಯಾಂಡ್, ಏನಿದು ಚಾರ್ಜರ್ ಇಲ್ಲದ ಫೋನ್?

ಆ್ಯಪಲ್ ಕಂಪನಿಯ ಕ್ರಮವನ್ನು ಟೀಕಿಸಿದ ಒಂದು ವರ್ಷದ ನಂತರ, ಸ್ಯಾಮ್‌ಸಂಗ್ ಕಂಪನಿ ಸಹ ಅದೇ ದಾರಿ ತುಳಿದಿದ್ದು, ಪವರ್ ಬ್ರಿಕ್ ಇಲ್ಲದೆಯೇ ಗ್ಯಾಲಕ್ಸಿ ಎಸ್ 21 ಸೀರಿಸ್‌ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಆದರೆ ಸ್ಯಾಮ್‌ಸಂಗ್ ತನ್ನ ಕಡಿಮೆ ಬೆಲೆಯ ಫೋನ್‌ಗಳಿಂದ ಚಾರ್ಜರ್‌ಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ ಎಂಬ ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆ್ಯಪಲ್ (Apple) ಕಂಪನಿಯು ತನ್ನ ಐಫೋನ್ (Iphone) ರೀಟೇಲ್ ಬಾಕ್ಸ್‌ಗಳಿಂದ ಚಾರ್ಜರ್ ಅನ್ನು ತೆಗೆದು ಹಾಕಿದಾಗ ಬಹುತೇಕ ಎಲ್ಲಾ ಇತರೆ ಮೊಬೈಲ್ ತಯಾರಕ ಕಂಪನಿಗಳು ಅದನ್ನು ತೀವ್ರವಾಗಿ ಟೀಕಿಸಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಹಾಗೆ ಟೀಕೆ ಮಾಡಿದ ಮೊಬೈಲ್ ತಯಾರಕ ಕಂಪನಿಗಳಲ್ಲಿ ಸ್ಯಾಮ್‌ಸಂಗ್ (Samsung) ಸಹ ಒಂದಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಆ್ಯಪಲ್ ಕಂಪನಿಯ ಕ್ರಮವನ್ನು ಟೀಕಿಸಿದ ಒಂದು ವರ್ಷದ ನಂತರ, ಸ್ಯಾಮ್‌ಸಂಗ್ ಕಂಪನಿ ಸಹ ಅದೇ ದಾರಿ ತುಳಿದಿದ್ದು, ಪವರ್ ಬ್ರಿಕ್ ಇಲ್ಲದೆಯೇ ಗ್ಯಾಲಕ್ಸಿ ಎಸ್ 21 ಸೀರಿಸ್‌ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಇಲ್ಲಿಯವರೆಗೆ, ಕೇವಲ ಫ್ಲ್ಯಾಗ್ ಶಿಪ್ ಮತ್ತು ಪ್ರೀಮಿಯಂ ಫೋನ್‌ಗಳು ಚಾರ್ಜರ್ ಇಲ್ಲದೆ ರವಾನಿಸಿವೆ. ಆದರೆ ಸ್ಯಾಮ್‌ಸಂಗ್ ತನ್ನ ಕಡಿಮೆ ಬೆಲೆಯ ಫೋನ್‌ಗಳಿಂದ ಚಾರ್ಜರ್‌ಗಳನ್ನು ತೆಗೆದುಹಾಕಲು ಯೋಜಿಸುತ್ತಿದೆ ಎಂಬ ವರದಿಯಾಗಿದೆ. ಹೌದು, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಂ ಮತ್ತು ಗ್ಯಾಲಕ್ಸಿ ಎ ಸೀರಿಸ್‌ ಫೋನ್‌ಗಳನ್ನು ಅವುಗಳ ಚಾರ್ಜರ್‌ಗಳಿಲ್ಲದೆ ರವಾನಿಸಲು ನಿರ್ಧರಿಸಿದೆ ಅಂತೆ.

ಫೋನ್‌ಗಳ ಬೆಲೆಯಲ್ಲಿ ಕಡಿಮೆಯಿಲ್ಲ:

ಸ್ಯಾಮ್‌ಸಂಗ್ ಈಗಾಗಲೇ ತನ್ನ ಗ್ಯಾಲಕ್ಸಿ ಎಸ್ ಸಿರೀಸ್ ಫೋನ್‌ಗಳನ್ನು ಪವರ್ ಬ್ರಿಕ್ ಇಲ್ಲದೆ ಮಾರಾಟ ಮಾಡುತ್ತದೆ ಎಂದು ಪರಿಗಣಿಸಿದರೆ ಇದು ಆಶ್ಚರ್ಯಕರವೇನಲ್ಲ. ಸ್ಯಾಮ್‌ಸಂಗ್‌ನ ಅಗ್ಗದ ಫೋನ್‌ಗಳ ರೀಟೇಲ್ ಬಾಕ್ಸ್‌ನಿಂದ ಚಾರ್ಜರ್ ಅನ್ನು ತೆಗೆದುಹಾಕುವುದರಿಂದ ವೆಚ್ಚಗಳು ಕಡಿಮೆಯಾಗುತ್ತವೆಯೇ ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆಯೊಂದು ಮೂಡಬಹುದು. ಆದರೆ ಗ್ಯಾಲಕ್ಸಿ ಎಂ ಮತ್ತು ಗ್ಯಾಲಕ್ಸಿ ಎ ಸಿರೀಸ್ ಅಡಿಯಲ್ಲಿ ಸ್ಯಾಮ್‌ಸಂಗ್ ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.

ಚಾರ್ಜರ್ ನೀಡದ ವಿಶ್ವದ ಮೊದಲ ಪೋನ್ ಐಫೋನ್:

ಆ್ಯಪಲ್ 2020ರಲ್ಲಿ ಐಫೋನ್ 12 ಸೀರಿಸ್‌ ಅನ್ನು ಪ್ರಾರಂಭಿಸಿದಾಗ ತನ್ನ ಐಫೋನ್ ರೀಟೈಲ್‌ ಬಾಕ್ಸ್‌ನಿಂದ ಚಾರ್ಜರ್ ಅನ್ನು ತೆಗೆದು ಹಾಕಿದಂತಹ ವಿಶ್ವದ ಮೊದಲ ಮೊಬೈಲ್ ಬ್ರ್ಯಾಂಡ್ ಆಯಿತು. ಆಗ ಇದೇ ಸ್ಯಾಮ್‌ಸಂಗ್, ಆ್ಯಪಲ್‌ನ ಈ ನಿರ್ಧಾರಕ್ಕೆ ಅಣಕಿಸಿತ್ತು. ಆದರೆ ಒಂದು ವರ್ಷದ ನಂತರ, ಇದು ಸಹ ಆ್ಯಪಲ್ ರೀತಿಯಲ್ಲೇ ಯೋಚನೆ ಮಾಡುತ್ತಿರುವುದು ಅನೇಕರಿಗೆ ತಮ್ಮ ಕಣ್ಣು ಹುಬ್ಬುಗಳನ್ನು ಏರಿಸುವಂತೆ ಮಾಡಿದೆ. ಐಫೋನ್ 12 ಬಿಡುಗಡೆಯ ನಂತರ ಸ್ಯಾಮ್‌ಸಂಗ್, ಆ್ಯಪಲ್ ಬಗ್ಗೆ ಮಾಡಿದ ಠೀಕೆಗಳನ್ನು ಸಹ ಅಳಿಸಿ ಹಾಕಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Galaxy S22 Ultra ಅನ್​ಬಾಕ್ಸಿಂಗ್ ಕಾರ್ಯಕ್ರಮದ ಮೂಲಕ​ ವಿಶ್ವ​​ ದಾಖಲೆ ಬರೆದ ಸ್ಯಾಮ್​ಸಂಗ್​ ಇಂಡಿಯಾ

ಆ್ಯಪಲ್‌ನಂತೆಯೇ, ಗ್ಯಾಲಕ್ಸಿ ಎಸ್ ಸರಣಿಯಿಂದ ಚಾರ್ಜರ್ ಅನ್ನು ಹೊರ ಇಡುವ ಕ್ರಮದ ಹಿಂದಿನ ಪರಿಸರ ಸ್ನೇಹಿ ಕಾರಣಗಳನ್ನು ಸ್ಯಾಮ್‌ಸಂಗ್ ಸಹ ಅನುಸರಿಸುತ್ತಿದ್ದೆಯೇ? ಎಂಬ ಪ್ರಶ್ನೆ ಮೂಡಿದ್ದು, ಗ್ಯಾಲಕ್ಸಿ ಎ ಮತ್ತು ಗ್ಯಾಲಕ್ಸಿ ಎಂ ಸೀರಿಸ್ ಫೋನ್‌ಗಳು ಅದರ ಬಾಕ್ಸ್‌ಗಳಿಂದ ಚಾರ್ಜರ್‌ಗಳನ್ನು ಹೊರ ಇಡುವುದಕ್ಕೆ ಇದೇ ಕಾರಣವಾಗಿರಬಹುದೇ ಎಂದು ಜನರು ಊಹಿಸುತ್ತಿದ್ದಾರೆ.

ಫೋನ್​ಗಳಲ್ಲಿ ಹೊಸ ಬದಲಾವಣೆ:

ಸ್ಯಾಮ್‌ಸಂಗ್ ತನ್ನ ಕಡಿಮೆ ಬೆಲೆಯ ಫೋನ್ ಗಳು ಗ್ರಾಹಕರಿಗೆ ಹೇಗೆ ಸಾಗಿಸಬೇಕು ಎಂಬುದರಲ್ಲಿ ಈ ಬದಲಾವಣೆಯನ್ನು ಮಾಡಲು ಯೋಜಿಸುತ್ತಿದ್ದರೆ, ಅದು ಇತರ ಬ್ರ್ಯಾಂಡ್‌ಗಳಿಗೂ ಸಹ ಒಂದು ಸ್ಫೂರ್ತಿ ನೀಡಬಹುದು. ಆದರೂ ಇದರ ಬಗ್ಗೆ ಯಾವುದೇ ನಡೆ ಇನ್ನೂ ಖಚಿತವಾಗಿಲ್ಲ. ಏಕೆಂದರೆ ಆ್ಯಪಲ್ ಐಫೋನ್ ಬಾಕ್ಸ್‌ನಿಂದ ಚಾರ್ಜರ್ ಅನ್ನು ತೆಗೆದುಹಾಕಿದಾಗ, ಇತರ ಕೆಲವು ಬ್ರ್ಯಾಂಡ್‌ಗಳು ಮಾತ್ರ ಅದನ್ನು ಅನುಸರಿಸಿದ್ದವು. ಆದರೆ ಪ್ರಮುಖ ಬ್ರ್ಯಾಂಡ್‌ಗಳಾದ ಒಪ್ಪೋ, ಒನ್ ಪ್ಲಸ್ ಮತ್ತು ಶಿಯೋಮಿ ತಮ್ಮ ಫ್ಲ್ಯಾಗ್ ಶಿಪ್ ಫೋನ್‌ಗಳ ರೀಟೇಲ್ ಬಾಕ್ಸ್‌ಗಳಲ್ಲಿ ಪವರ್ ಬ್ರಿಕ್ ಅನ್ನು ಒದಗಿಸುವುದನ್ನು ಹಾಗೆಯೇ ಮುಂದುವರಿಸಿದವು.

ಇದನ್ನೂ ಓದಿ: Samsung Galaxy S22 Ultra: ನೀರಿಗೆ ಬಿದ್ರೂ, ಚಲಿಸುವ ಕಾರಿನಿಂದ ಕೆಳಗೆ ಬಿದ್ರೂ ಈ ಫೋನ್‍ಗೆ ಏನೂ ಆಗಲ್ಲ!

ಆದರೆ ಸ್ಯಾಮ್‌ಸಂಗ್ ತನ್ನ ಹೆಚ್ಚಿನ ಫೋನ್‌ಗಳ ಬಾಕ್ಸ್‌ಗಳಿಂದ ಚಾರ್ಜರ್‌ಗಳನ್ನು ತೆಗೆದುಹಾಕುವ ಯೋಜನೆಗಳೊಂದಿಗೆ ಮುಂದುವರಿಯುವ ನಿರ್ಧಾರವು ದುಡುಕಿನಲ್ಲಿ ತೆಗೆದುಕೊಂಡಿದ್ದಲ್ಲ ಎಂದು ಹೇಳಲಾಗುತ್ತಿದೆ. ಇಂದು ಹೆಚ್ಚಿನ ಗ್ರಾಹಕರಿಗೆ ತಮ್ಮ ಹೊಸ ಸ್ಯಾಮ್‌ಸಂಗ್ ಫೋನ್ ಅಥವಾ ಐಫೋನ್ ಜೊತೆಗೆ ಚಾರ್ಜರ್ ಬರುವುದಿಲ್ಲ ಎಂಬ ಅಂಶವನ್ನು ಸದ್ಯಕ್ಕೆ ಒಪ್ಪಿಕೊಂಡಿದ್ದಾರೆ.
Published by:shrikrishna bhat
First published: