HOME » NEWS » Tech » SAMSUNG LAUNCHES INDIAS FIRST AI POWERED WASHING MACHINES BEST AUTOMATIC WASHING MACHINES STG SCT

Samsung: ಸ್ಯಾಮ್​ಸಂಗ್‌ನಿಂದ ಎಐ ಸಾಮರ್ಥ್ಯದ ಭಾರತದ ಮೊಟ್ಟ ಮೊದಲ ವಾಷಿಂಗ್ ಮಷಿನ್‌ ಬಿಡುಗಡೆ

Samsung Washing Machine: ಸಂಪೂರ್ಣ ಆಟೋಮ್ಯಾಟಿಕ್ ಆಗಿರುವ ಸ್ಯಾಮ್​ಸಂಗ್ ವಾಷಿಂಗ್ ಮಷಿನ್​ ಭಾರತಕ್ಕಾಗಿಯೇ ಮಾಡಲಾಗಿದೆ. ಇಕೋ ಬಬ್ಬಲ್ ಮತ್ತು ಕ್ವಿಕ್ ಡ್ರೈವ್ ಟೆಕ್ನಾಲಜಿಯನ್ನು ಒಳಗೊಂಡಿರುವ ವಾಷಿಂಗ್ ಮಷಿನ್‌ ಇದಾಗಿದೆ. ಜೊತೆಗೆ ಶೇ.45ರಷ್ಟು ಸಮಯ ಮತ್ತು ಶಕ್ತಿ ಉಳಿತಾಯವಾಗುತ್ತದೆ.

news18-kannada
Updated:April 9, 2021, 7:57 AM IST
Samsung: ಸ್ಯಾಮ್​ಸಂಗ್‌ನಿಂದ ಎಐ ಸಾಮರ್ಥ್ಯದ ಭಾರತದ ಮೊಟ್ಟ ಮೊದಲ ವಾಷಿಂಗ್ ಮಷಿನ್‌ ಬಿಡುಗಡೆ
ಸ್ಯಾಮ್​ಸಂಗ್ ವಾಷಿಂಗ್ ಮಷಿನ್
  • Share this:
ಸ್ಯಾಮ್​ಸಂಗ್​​ ​ಭಾರತದ ಮೊಟ್ಟ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಾಮರ್ಥ್ಯದ ವಾಷಿಂಗ್ ಮಷಿನ್‌ ಬಿಡುಗಡೆ ಮಾಡಿದೆ. ಇದು ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯ ಬಳಕೆಯನ್ನು ಹೊಂದಿದೆ. ಸಂಪೂರ್ಣ ಆಟೋಮ್ಯಾಟಿಕ್ ಆಗಿರುವ ಈ ವಾಷಿಂಗ್ ಮಷಿನ್​ ಭಾರತಕ್ಕಾಗಿಯೇ ಮಾಡಲಾಗಿದೆ ಎಂದು ಹೇಳಲಾಗಿದೆ. ಇಕೋ ಬಬ್ಬಲ್ ಮತ್ತು ಕ್ವಿಕ್ ಡ್ರೈವ್ ಟೆಕ್ನಾಲಜಿಯನ್ನು ಒಳಗೊಂಡಿರುವ ವಾಷಿಂಗ್ ಮಷಿನ್‌ ಇದಾಗಿದೆ. ಜೊತೆಗೆ 45 ರಷ್ಟು ಸಮಯ ಮತ್ತು ಶಕ್ತಿ ಉಳಿತಾಯವಾಗುತ್ತದೆ ಎಂದು ಸಾಮ್​ಸಂಗ್ ಕಂಪನಿ ತಿಳಿಸಿದೆ.

ಈ ಹೊಸ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI)ನ ಈ ವಾಷಿಂಗ್ ಮಷಿನ್ ಭಾರತದಾದ್ಯಂತ ಎಲ್ಲಾ ಎಲೆಕ್ಟ್ರಾನಿಕ್ಸ್‌ ರೀಟೇಲ್ ಅಂಗಡಿಗಳಲ್ಲೂ ಏಪ್ರಿಲ್ 6 ರಿಂದ ಮಾರಾಟವಾಗುತ್ತಿದೆ. ಈ ವಾಷಿಂಗ್​ ಮಷಿನ್​ ನ ಆರಂಭಿಕ ಬೆಲೆ 35,400 ರೂ ಆಗಿದ್ದು, ಅಮೆಜಾನ್, ಫ್ಲಿಪ್​ಕಾರ್ಟ್, ಸ್ಯಾಮ್​ಸಂಗ್​ನ ಅಧಿಕೃತ ಆನ್​ಲೈನ್​ ವೇದಿಕೆ ಮತ್ತು ಸ್ಯಾಮ್​ಸಂಗ್​ ಶಾಪ್​ಗಳಲ್ಲಿ ಆಯ್ದ ಮಾಡೆಲ್‌ಗಳು ಲಭ್ಯವಿದೆ.

ಈ ವಾಷಿಂಗ್ ಮಷಿನ್​ಗೆ ಶೇಕಡಾ 20ರಷ್ಟು ಕ್ಯಾಶ್​ಬ್ಯಾಕ್​ ಆಫರ್ ಇದ್ದು, ನೋ ಕಾಸ್ಟ್ ಇಎಮ್ಐ ಮತ್ತು 990 ರೂಪಾಯಿಗಳ ಲೋ ಇಎಮ್ಐ ಯಂತಹ ಆರ್ಥಿಕ ಸೌಲಭ್ಯವನ್ನು ಒದಗಿಸಿದೆ. ಈ ವಾಷಿಂಗ್​ ಮಷಿನ್​ನಲ್ಲಿ 21 ಮಾಡೆಲ್​ಗಳಿದ್ದು, ಎಲ್ಲವೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ನ ಫೀಚರ್ ಹೊಂದಿವೆ. ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಬಟ್ಟೆ ಒಗೆಯುವ ಶೈಲಿ, ಇತ್ತೀಚೆಗೆ ಒಗೆದ ಬಟ್ಟೆಗಳ ಬಗ್ಗೆ ನೆನಪಿಟ್ಟುಕೊಂಡಿರುತ್ತದೆ. ಈ ವಾಶಿಂಗ್ ಮಷಿನ್​ ಅನ್ನು ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋನ್​ನೊಂದಿಗೆ ಕನೆಕ್ಟ್ ಮಾಡಬಹುದು. ಅಲ್ಲದೇ ಸ್ಯಾಮ್​ಸಂಗ್ ಸ್ಮಾರ್ಟ್​ಟಿವಿ ಮತ್ತು ಫ್ಯಾಮಿಲಿ ಹಬ್​ಗಳಾದ ರೆಫ್ರಿಜರೇಟರ್ ಜೊತೆಗೆ ವಾಯ್ಸ್ ಡಿವೈಸ್​ಗಳಾದ ಅಲೆಕ್ಸಾ ಮತ್ತು ಗೂಗಲ್ ಹೋಂ ಜೊತೆಗೂ ಕನೆಕ್ಟ್​ ಮಾಡಬಹುದು.

ಇದನ್ನೂ ಓದಿ: ಭಾರತದ ಟಾಪ್ 5 ಅತ್ಯಂತ ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್‌ಗಳ ವಿವರ ಇಲ್ಲಿದೆ

ಮಷಿನ್​ ಪ್ಲಾನರ್ ಇದ್ದು, ಲಾಂಡ್ರಿ ರೆಸಿಪಿ ನಿಮಗೆ ಬಟ್ಟೆಯ ಬಣ್ಣ, ಬಟ್ಟೆಯ ಕ್ವಾಲಿಟಿ ಮತ್ತು ಕೊಳೆಯನ್ನು ಗಮನಿಸಿ ಮಾರ್ಗದರ್ಶನವನ್ನು ನೀಡುತ್ತದೆ. ಅಲ್ಲದೇ, ಲಾಂಡ್ರಿ ಪ್ಲ್ಯಾನರ್, ಹೋಮ್​ ಕೇರ್ ವಿಜಾರ್ಡ್ ಮತ್ತು ಲೊಕೇಷನ್ ಆಧಾರಿತ ಸೌಲಭ್ಯಗಳು ಪರಿಣಾಮಕಾರಿಯಾಗಿ ವಾಷಿಂಗ್​ ಮಷಿನ್ ಕೆಲಸ ನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ಆಟೋ ಡ್ರೈಯರ್ ಫೆಸಿಲಿಟಿಯಲ್ಲೂ ನಿಮಗೆ ಸಾಕಷ್ಟು ಆಯ್ಕೆಗಳಿವೆ. ಇದಿಷ್ಟೇ ಅಲ್ಲದೇ ಆಡ್​ ವಾಶ್​ ಸೌಲಭ್ಯದ ಮೂಲಕ ನೀವು ವಾಶಿಂಗ್ ಮಷಿನ್​ಗೆ ಲಿಕ್ವಿಡ್ ಅಥವಾ ಏನಾದರೂ ಹಾಕುವುದನ್ನು ಮರೆತಿದ್ದರೂ, ವಾಶಿಂಗ್ ಸೈಕಲ್ ಸಮಯದಲ್ಲಿ ಅದನ್ನು ಸೇರಿಸುವ ಆಯ್ಕೆಗಳಿವೆ.

ಇದರಲ್ಲಿರುವ ಇಕೋ ಬಬ್ಬಲ್ ಟೆಕ್ನಾಲಜಿ ಸೋಪಿನ ಪುಡಿ ಮತ್ತು ನೀರನ್ನು ಸರಿಯಾಗಿ ವಿಭಜಿಸಿ 40 ಬಾರಿ ಅಧಿಕ ವೇಗವನ್ನು ನೀಡುತ್ತದೆ. ಇದು ಶೇಕಡಾ 45 ರಷ್ಟು ಹೆಚ್ಚು ಬಟ್ಟೆಗಳ ಸುರಕ್ಷತೆ ಕಾಪಾಡುತ್ತದೆ. ಔಟ್​ ಡೋರ್ ವೇರ್ ಜೊತೆಗೆ ನೀರಿನ ಜೊತೆಗೆ ಹೊಂದಿಕೊಳ್ಳದ ವಸ್ತ್ರಗಳನ್ನು ಸೌಮ್ಯವಾಗಿ ನಿಭಾಯಿಸುತ್ತದೆ. 15 ಡಿಗ್ರಿ ಸೆಲ್ಷಿಯಸ್​ನಲ್ಲಿ ಕಾರ್ಯನಿರ್ವಹಿಸಿ, 40 ಡಿಗ್ರಿ ಸೆಲ್ಷಿಯಸ್​ನಷ್ಟು ಫಲಿತಾಂಶ ನೀಡುತ್ತದೆ ಅದು ಕೂಡ 30 ರಷ್ಟು ಎನರ್ಜಿ ಮಾತ್ರ ಬಳಕೆಯಾಗುತ್ತದೆ.

ಸಾಂಕ್ರಾಮಿಕದ ಸಮಯದಲ್ಲಿ ಗ್ರಾಹಕರ ಅಗತ್ಯಕ್ಕೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ಸ್ಮಾರ್ಟ್ ಹೋಂ ಅಪ್ಲೈಯನ್ಸಸ್​ನಿಂದ ಮನೆಯ ಕೆಲಸಗಳು ಸರಾಗವಾಗಿ ನಡೆಯುತ್ತದೆ. ನಮ್ಮ ಹೊಸ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಿಂದಿ ಮತ್ತು ಇಂಗ್ಲೀಷ್​ ಭಾಷೆಯ ಸೌಲಭ್ಯ ಹೊಂದಿದ್ದು, ಸರಳವಾದ ಅರಿವನ್ನು ಮೂಡಿಸುವುದರ ಜೊತೆಗೆ ಗ್ರಾಹಕರಿಗೆ ನೆರವಾಗುತ್ತದೆ.ಭಾರತಕ್ಕಾಗಿ 2,000 ವಾಶ್​ ಕಾಂಬಿನೇಷನ್​ ಅನ್ನು ಕಸ್ಟಮೈಸ್ ಮಾಡಲಾಗಿದೆ. ಜೊತೆಗೆ 2.8 ಮಿಲಿಯನ್ ನಷ್ಟು ಬಟ್ಟೆಗಳ ಬಗ್ಗೆ ಡೇಟಾವನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಈ ಮಷಿನ್​ ಅನ್ನು ಸ್ಮಾರ್ಟ್​ಫೋನ್ ಅಥವಾ ಸ್ಯಾಮ್​ಸಂಗ್ ಡಿವೈಸ್ ಮೂಲಕ ನಿಯಂತ್ರಿಸಬಹುದು.

'ಕಳೆದ ವರ್ಷ ಸಂಪೂರ್ಣ ಆಟೋಮ್ಯಾಟಿಕ್ ಫ್ರಂಟ್​ಲೋಡ್​ ವಾಷಿಂಗ್​ ಮೆಷಿನ್ ಎಲ್ಲರ ಮನಗೆದ್ದಿತ್ತು. ಈ ಬಾರಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್​​ನ ಈ ವಾಷಿಂಗ್ ಮೆಷಿನ್ ನಂ 1 ಆಗುವುದು ಎನ್ನುವ ನಂಬಿಕೆ ಇದೆ' ಎಂದು ಸ್ಯಾಮ್​ಸಂಗ್​ನ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್​ ಮತ್ತು ಪ್ಲೇಯರ್​ನ ಉಪಾಧ್ಯಕ್ಷರಾದ ರಾಜು ಪುಲ್ಲನ್ ಅವರು ಅಭಿಪ್ರಾಯ ಪಡುತ್ತಾರೆ.
Published by: Sushma Chakre
First published: April 9, 2021, 7:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories