news18-kannada Updated:March 3, 2021, 2:57 PM IST
Samsung Galaxy A32
ಸ್ಯಾಮ್ಸಂಗ್ ಗ್ಯಾಲಕ್ಸಿ A32 ಸ್ಮಾರ್ಟ್ಫೋನನ್ನು ಇಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆಮಾಡಿದೆ. ನೂತನ ಸ್ಮಾರ್ಟ್ಫೋನ್ 90HZ ಡಿಸ್ಪ್ಲೇ ಮತ್ತು ರಿಯರ್ ಕ್ಯಾಮೆರಾ ಹೊಂದಿದ್ದು, ವಾಟರ್ಡ್ರಾಪ್-ಸೈಲ್ ಡಿಸ್ಪ್ಲೇ ಹೊಂದಿದೆ. ಅಷ್ಟು ಮಾತ್ರವಲ್ಲದೆ ಬೆಲೆಗೆ ತಕ್ಕಂತೆ ಫೀಚರ್ ಅನ್ನು ಈ ಸ್ಮಾರ್ಟ್ಫೋನ್ನಲ್ಲಿ ನೀಡಲಾಗಿದ್ದು. 5 ಸಾವಿರ mAh ಸಾಮರ್ಥ್ಯದ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಹಾಗಿದ್ದರೆ ನೂತನ ಗ್ಯಾಲಕ್ಸಿ A32 ಹೊಂದಿರುವ ಕ್ಯಾಮೆರಾ? ಸ್ಮಾರ್ಟ್ಫೋನ್ ಬೆಲೆ? ಬಗ್ಗೆ ಮಾಹಿತಿ ತಿಳಿಯೋಣ..
ಸ್ಯಾಮ್ಸಂಗ್ ಗ್ಯಾಲಕ್ಸಿ A32 ಸ್ಮಾರ್ಟ್ಫೋನ್ 6.4 ಇಂಚಿನ ಸೂಪರ್ ಅಮೋಲ್ಡ್ ಡಿಸ್ಪ್ಲೇ ಹೊಂದಿದ್ದು, ಒಕ್ಟಾ ಕೋರ್ ಮೀಡಿಯಾಟೆಕ್ ಹೆಲಿಯೋ ಜಿ80 ಎಸ್ಒಸಿ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್ 11 ಜತೆಗೆ ಒನ್ ಯುಐ 3.1 ಬೆಂಬಲವನ್ನು ಪಡೆದಿದೆ. ಇನ್ನು ಸ್ಮಾರ್ಟ್ಫೋನ್ 6GB RAM ಆಯ್ಕೆಯಲ್ಲಿ 128GB ಸ್ಟೊರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ.
ಇನ್ನು ಗ್ಯಾಲಕ್ಸಿ A32 ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 64 ಮೆಗಾಫಿಕ್ಸೆಲ್ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಜೊತೆಗೆ 5 ಮೆಗಾಫಿಕ್ಸೆಲ್ ಮ್ಯಾಕ್ರೋ ಶೂಟರ್ ಹಾಗೂ 5 ಮೆಗಾಫಿಕ್ಸೆಲ್ ಡೆಪ್ತ್ ಸೆನ್ಸಾರ್ ನೀಡಿದೆ. ಸೆಲ್ಫಿಗಾಗಿ 20 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ 4G ಲೈಟ್, Wi-Fi 802.11c ಮತ್ತು ಬ್ಲೂಟೂತ್ v5, GPS/A GPS, USB ಟೈಪ್ -c ಅಳವಡಿಸಲಾಗಿದೆ. 3.5mm ಹೆಡ್ಫೋನ್ ಜಾಕ್ ಆಯ್ಕೆ ನೀಡಲಾಗಿದೆ.
ಇನ್ನು ಧೀರ್ಘ ಕಾಲದ ಬಾಳಿಕೆಗಾಗಿ 5 ಸಾವಿರ mAh ಬ್ಯಾಟರಿ ನೀಡಲಾಗಿದೆ. ವೇಗವಾಗಿ ಚಾರ್ಜ್ ಮಾಡಲು ಫಾಸ್ಟ್ ಚಾಜಿಂಗ್ ನೀಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ A32 ಸ್ಮಾರ್ಟ್ಫೋನ್ 6GB RAM + 128GB ಸ್ಟೊರೇಜ್ ವೇರಿಯಂಟ್ ಸ್ಮಾರ್ಟ್ಫೋನ್ ಬೆಲೆ 21,999 ರೂ ಆಗಿದೆ. ಕಪ್ಪು, ಬಿಳಿ, ನೀಲಿ ಮತ್ತು ವಯೆಲೆಟ್ ಬಣ್ಣದಲ್ಲಿ ಸಿಗಲಿದೆ. ಗ್ರಾಹಕರಿಗಾಗಿ ರಿಟೈಲ್ ಸ್ಟೋರ್ ಮತ್ತು ಸ್ಯಾಮ್ಸಂಗ್.ಕಾಮ್ ವೆಬ್ಸೈಟ್ನಲ್ಲಿ ಮಾರಾಟ ಮಾಡುತ್ತಿದೆ.
Published by:
Harshith AS
First published:
March 3, 2021, 2:57 PM IST