Samsung ಪರಿಚಯಿಸಲಿದೆ ಹೊಸ ಗ್ಯಾಲಕ್ಸಿ ಎ ಸೀರೀಸ್‌ ಸ್ಮಾರ್ಟ್‌ಫೋನ್; ಬಿಡುಗಡೆಗೆ 3 ದಿನ ಬಾಕಿ!

Samsung Galaxy A-Series smartphone: ಇದು ಸ್ಯಾಮ್‌ಸಂಗ್ ಕಂಪನಿಯು ಮುಂದಿನ ವಾರ ಎಂದರೆ ಮಾರ್ಚ್ 17 ರಂದು ಗ್ಯಾಲಕ್ಸಿ ಎ ಈವೆಂಟ್ ಅನ್ನು ನಡೆಸಲಿದೆ ಎಂದು ಬಹಿರಂಗಪಡಿಸುತ್ತದೆ ಮತ್ತು ಇದರಲ್ಲಿ ಹೊಸ ಗ್ಯಾಲಕ್ಸಿ ಎ ಸೀರೀಸ್‌ ನ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.

 ಗ್ಯಾಲಕ್ಸಿ ಎ ಸಿರೀಸ್‌ ಸ್ಮಾರ್ಟ್‌ಫೋನ್ / Samsung Galaxy A Series

ಗ್ಯಾಲಕ್ಸಿ ಎ ಸಿರೀಸ್‌ ಸ್ಮಾರ್ಟ್‌ಫೋನ್ / Samsung Galaxy A Series

 • Share this:
  ಕಳೆದ ವಾರವಷ್ಟೇ ಆ್ಯಪಲ್ ಕಂಪನಿಯು (Apple Company) ಹೇಗೆ ಹಿಂದೊಮ್ಮೆ ತನ್ನ ಐಫೋನ್ ರೀಟೇಲ್ ಬಾಕ್ಸ್‌ಗಳಿಂದ ಚಾರ್ಜರ್ ಅನ್ನು ತೆಗೆದು ಹಾಕಿತ್ತೋ, ಅದೇ ರೀತಿಯಲ್ಲಿ ಸ್ಯಾಮ್‌ಸಂಗ್ (Samsung) ಮೊಬೈಲ್ ತಯಾರಕ ಕಂಪನಿಯು ಸಹ ಪವರ್ ಬ್ರಿಕ್ ಇಲ್ಲದೆಯೇ ಗ್ಯಾಲಕ್ಸಿ ಎಸ್ 21 ಸೀರೀಸ್‌ (Galaxy S21 Series)‌ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಚಾರವಾಗಿ ಸುದ್ದಿಯಲ್ಲಿದ್ದಿದ್ದು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವಂತದ್ದೇ ಆಗಿದೆ. ಈಗ ಅದೇ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಮತ್ತೊಮ್ಮೆ ಸುದ್ದಿಯಲ್ಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ತನ್ನ ಸ್ಮಾರ್ಟ್‌ಫೋನ್ (Smartphone) ಗ್ರಾಹಕರಿಗಾಗಿ ಇದೇ ಮಾರ್ಚ್ 17 ರಂದು ಹೊಸ ಗ್ಯಾಲಕ್ಸಿ ಎ ಸೀರೀಸ್‌ ನ ಸ್ಮಾರ್ಟ್‌ಫೋನ್‌ಗಳನ್ನು ಹೊರ ತರಲಿದೆ ಎಂದು ಹೇಳಲಾಗುತ್ತಿದೆ. ಜಿಎಸ್ಎಂ ಅರೆನಾ ಪ್ರಕಾರ, ವಿಶ್ವಾಸಾರ್ಹ ಮೂಲವೊಂದು ಅಧಿಕೃತವಾಗಿ ಕಾಣುವ ಟೀಸರ್‌ನ ಫೋಟೋವನ್ನು ಹಂಚಿಕೊಂಡಿದೆ.

  ಇದು ಸ್ಯಾಮ್‌ಸಂಗ್ ಕಂಪನಿಯು ಮುಂದಿನ ವಾರ ಎಂದರೆ ಮಾರ್ಚ್ 17 ರಂದು ಗ್ಯಾಲಕ್ಸಿ ಎ ಈವೆಂಟ್ ಅನ್ನು ನಡೆಸಲಿದೆ ಎಂದು ಬಹಿರಂಗಪಡಿಸುತ್ತದೆ ಮತ್ತು ಇದರಲ್ಲಿ ಹೊಸ ಗ್ಯಾಲಕ್ಸಿ ಎ ಸೀರೀಸ್‌ ‌ನ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸುತ್ತದೆ ಎಂದು ಹೇಳಲಾಗುತ್ತಿದೆ.

  ಈ ಟೀಸರ್ ಮುಂಬರುವ ಸ್ಮಾರ್ಟ್‌ಫೋನ್‌ಗಳ ಹೆಸರನ್ನು ಉಲ್ಲೇಖಿಸುವುದಿಲ್ಲ. ಆದರೆ ಇದು ವಿವಿಧ ಶೈಲಿಗಳಲ್ಲಿ 'ಎ' ಅಕ್ಷರ ಮಾಲೆಯನ್ನು ತೋರಿಸುತ್ತದೆ, ಅವುಗಳಲ್ಲಿ ಒಂದು ಈ ಸ್ಮಾರ್ಟ್‌ಫೋನ್ ನೀರಿನ ಪ್ರತಿರೋಧಕವಾಗಿದೆ ಎಂದು ಸುಳಿವು ನೀಡುತ್ತದೆ.

  ಕಳೆದ ವರ್ಷ ಸಹ, ಅದೇ ದಿನಾಂಕದಂದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52, ಗ್ಯಾಲಕ್ಸಿ ಎ52 5ಜಿ ಮತ್ತು ಗ್ಯಾಲಕ್ಸಿ ಎ72 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು, ಆದ್ದರಿಂದ ಬಳಕೆದಾರರು ದಕ್ಷಿಣ ಕೊರಿಯಾದ ಮೊಬೈಲ್ ತಯಾರಕ ಕಂಪನಿಯು ಗ್ಯಾಲಕ್ಸಿ ಎ53 ಮತ್ತು ಗ್ಯಾಲಕ್ಸಿ ಎ73 ಅನ್ನು ಅನಾವರಣಗೊಳಿಸುತ್ತದೆ ಎಂದು ನಿರೀಕ್ಷಿಸಬಹುದು. ಆದರೂ, ಈ ಗ್ಯಾಲಕ್ಸಿ ಎ ಈವೆಂಟ್ ಬಗ್ಗೆ ಸ್ಯಾಮ್‌ಸಂಗ್‌ನಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ ಎಂದು ವರದಿ ಹೇಳಿದೆ. ಈ ತಿಂಗಳು, ಕಂಪನಿಯು ತನ್ನ ಇತ್ತೀಚಿನ ಬಜೆಟ್ ಸ್ನೇಹಿಯಾಗಿರುವ 5ಜಿ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಫ್23 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ.

  ಇದು ಸ್ನ್ಯಾಪ್‌ಡ್ರ್ಯಾಗನ್ 750ಜಿ, 5ಜಿ ಮೊಬೈಲ್ ಪ್ಲಾಟ್‌ಫಾರ್ಮ್ ಮತ್ತು 120 ಹರ್ಟ್ಜ್‌ಗಳಿಂದ ಚಾಲನೆಗೊಂಡ ಮೊದಲ ಗ್ಯಾಲಕ್ಸಿ ಎಫ್ ಸೀರೀಸ್‌ ನ ಸ್ಮಾರ್ಟ್‌ಫೋನ್ ಇದಾಗಿತ್ತು ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Maruti 800: ಎಂಟು ಸೀಟಿನ ಮಾರುತಿ ಸುಜುಕಿ 800 ಕಾರು ನೋಡಿದ್ದೀರಾ? ಇಲ್ಲಿದೆ ನೋಡಿ

  ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಸ್ಯಾಮ್‌ಸಂಗ್, ಕಳೆದ ವರ್ಷ ಮಾರ್ಚ್‌ನಲ್ಲಿ ತನ್ನ ಗ್ಯಾಲಕ್ಸಿ ಅದ್ಭುತ ಅನ್‌ಪ್ಯಾಕ್ಡ್ ಆನ್‌ಲೈನ್ ಈವೆಂಟ್‌ನಲ್ಲಿ ಗ್ಯಾಲಕ್ಸಿ ಎ72 ಮತ್ತು ಎ52 ಮಾದರಿಗಳನ್ನು ಪರಿಚಯಿಸಿತ್ತು.

  ಗ್ಯಾಲಕ್ಸಿ ಎ ಸೀರೀಸ್‌ ಸ್ಮಾರ್ಟ್‌ಫೋನ್‌ಗಳಿಗಾಗಿ ಕಳೆದ ವರ್ಷ ನಡೆಸಿದ ಈವೆಂಟ್ ಸ್ಯಾಮ್‌ಸಂಗ್‌ನ ದೊಡ್ಡ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕಾರ್ಯಕ್ರಮವಾಗಿದ್ದು, ಮೊದಲ ಬಾರಿಗೆ ನಡೆದಿತ್ತು.

  ಇದನ್ನೂ ಓದಿ: Motorola ಸ್ಮಾರ್ಟ್‌ಫೋನ್ ಮೇಲೆ 5 ಸಾವಿರ ರೂಪಾಯಿ ಭಾರಿ ರಿಯಾಯಿತಿ..! ಇಲ್ಲಿದೆ ಪೂರ್ಣ ಮಾಹಿತಿ

  ಇಂಡಸ್ಟ್ರಿ ಟ್ರ್ಯಾಕರ್ ಒಮ್ಡಿಯಾ ಪ್ರಕಾರ, ಡಿಸೆಂಬರ್ 2020ರಲ್ಲಿ ಬಿಡುಗಡೆಯಾದ ಎ12 ಸ್ಮಾರ್ಟ್‌ಫೋನ್ ಕಳೆದ ವರ್ಷ ವಿಶ್ವದ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿತ್ತು. ಇದು ಜಾಗತಿಕವಾಗಿ ಒಟ್ಟು 51.8 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ನಂಬರ್ 1 ಸ್ಥಾನವನ್ನು ಹಾಗೆಯೇ ಕಾಯ್ದುಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಲಾಗುತ್ತಿದೆ. ಒಮ್ಡಿಯಾ ಪ್ರಕಾರ, ಈ ಫೋನ್ ಒಂದು ವರ್ಷದಲ್ಲಿ 50 ಮಿಲಿಯನ್ ಮೀರಿ ಮಾರಾಟವಾದ ಟೆಕ್ ದೈತ್ಯನ ಮೊದಲ ಫೋನ್ ಆಗಿತ್ತು ಎಂದು ಸಹ ಹೇಳಲಾಗುತ್ತಿದೆ.
  Published by:Harshith AS
  First published: