HOME » NEWS » Tech » SAMSUNG IS WORKING ON A 600 MEGAPIXEL SMARTPHONE CAMERA SENSOR HG

ಅಬ್ಬಾ! 600 ಮೆಗಾಫಿಕ್ಸೆಲ್ ಮೊಬೈಲ್ ಕ್ಯಾಮೆರಾ ಪರಿಚಯಿಸಲಿರುವ ಸ್ಯಾಮ್​ಸಂಗ್​!

Samsung: ಸ್ಯಾಮ್​ಸಂಗ್​ ಕಂಪನಿ ಮಡಚುವ ಸ್ಮಾರ್ಟ್​ಫೋನನನ್ನು ಪರಿಚಯಿಸಿ ಯಶಸ್ವಿಯಾಗಿದೆ. ಇದೀಗ ಸ್ಮಾರ್ಟ್​ಫೋನ್​ನಲ್ಲಿ 600 ಮೆಗಾಫಿಕ್ಸೆಲ್​ ಕ್ಯಾಮೆರಾ ಪರಿಚಯಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

news18-kannada
Updated:December 6, 2020, 8:47 PM IST
ಅಬ್ಬಾ! 600 ಮೆಗಾಫಿಕ್ಸೆಲ್ ಮೊಬೈಲ್ ಕ್ಯಾಮೆರಾ ಪರಿಚಯಿಸಲಿರುವ ಸ್ಯಾಮ್​ಸಂಗ್​!
Photo: Google
  • Share this:
ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ಕಂಪನಿ​ ಹೊಸ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದೆ. ಹೊಸ ಫೀಚರ್​ಗಳನ್ನ ಒಳಗೊಂಡ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಾ ಬಂದಿದ್ದ ಸ್ಯಾಮ್​ಸಂಗ್​ ಇದೀಗ ಅಧಿಕ ಮೆಗಾಫಿಕ್ಸೆಲ್​ ಕ್ಯಾಮೆರಾ ಪರಿಚಯಿಸಲು ಸಿದ್ಧತೆ ಮಾಡುತ್ತಿದೆ.

ಹೌದು. ಸ್ಯಾಮ್​ಸಂಗ್​ ಕಂಪನಿ ಮಡಚುವ ಸ್ಮಾರ್ಟ್​ಫೋನನನ್ನು ಪರಿಚಯಿಸಿ ಯಶಸ್ವಿಯಾಗಿದೆ. ಇದೀಗ ಸ್ಮಾರ್ಟ್​ಫೋನ್​ನಲ್ಲಿ 600 ಮೆಗಾಫಿಕ್ಸೆಲ್​ ಕ್ಯಾಮೆರಾ ಪರಿಚಯಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ತ್ರಿಪ್​​ಸ್ಟರ್​​ ಐಸ್​​ ಯುನಿವರ್ಸ್​​ ಈ ಬಗ್ಗೆ ಮಾಹಿತಿ ಹೊರಹಾಕಿದ್ದು, ಸ್ಯಾಮ್​ಸಂಗ್​​​ 600 ಮೆಗಾಫಿಕ್ಸೆಲ್​ ಸೆನ್ಸಾರ್​​ ಕ್ಯಾಮೆರಾವಿರುವ ಸ್ಮಾರ್ಟ್​ಫೋನ್​ ಅಭಿವೃದ್ಧಿ ಪಡಿಸುತ್ತಿದೆ ಎಂದು ತಿಳಿಸಿದೆ.

ಸ್ಯಾಮ್​ಸಂಗ್​ ಅಧಿಕ ರೆಸಲ್ಯೂಶನ್​ ಕ್ಯಾಮೆರಾ ಸೆನ್ಸಾರ್​​ ಅನ್ನು ಪರಿಚಯಿಸುವ ಬಗ್ಗೆ ಯೋಜನೆ ಹಾಕಿದೆ. 4ಕೆ ಮತ್ತು 8ಕೆ ವಿಡಿಯೋವನ್ನು ಚಿತ್ರಿಸುವಂತೆ ಅಭಿವೃದ್ಧಿ ಪಡಿಸುತ್ತಿದೆ ಎಂದು ಸುದ್ದು ಹೊರಬಿದ್ದಿದೆ.

ಜಿಎಸ್​​​ಎಮ್​ಎರೀನಾ ವರದಿ ಪ್ರಕಾರ ಸ್ಯಾಮ್​ಸಂಗ್​ ಕಳೆದ ಹಲವು ವರ್ಷಗಳೀಂದ ಬೆಸ್ಟ್​​ ಕ್ಯಾಮೆರಾವನ್ನು ಸ್ಮಾರ್ಟ್​ಫೋನ್ನಿನಲ್ಲಿ ಪರಿಚಯಿಸಿದೆ. ಈಗಾಗಲೇ 48 ಮೆಗಾಫಿಕ್ಸೆಲ್​, 64 ಮೆಗಾಫಿಕ್ಸೆಲ್​ ಮತ್ತು 108 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಪರಿಚಯಿಸಿದೆ

ಸೋನಿ ತನ್ನ ಸ್ಮಾರ್ಟ್​ಫೋನಿನಲ್ಲಿ ಐಎಮ್​ಎಕ್ಸ್​ ಲೈನ್​ ಸೆನ್ಸಾರ್​ ಅಳವಡಿಸುತ್ತಿದೆ. ಅದರಂತೆ ಸ್ಯಾಮ್​ಸಂಗ್​ ಕೂಡ ISOCELL ಸಿರೀಸ್​ ಸೆನ್ಸಾರ್​ ಬಳಸಲು ಮುಂದಾಗಿದೆ





ಸ್ಯಾಮ್​ಸಂಗ್​ ಸಂಸ್ಥೆಯ ಬಿಸಿನೆಸ್​​ ತಣಡದ ಮುಖ್ಯಸ್ಥ ಯೋಂಗಿನ್​ ಪಾರ್ಕ್​  ಈ ಬಗ್ಗೆ ಮಾತನಾಡಿದ್ದು, ಇದೇ ಏಪ್ರಿಲ್​ ತಿಂಗಳಿನಲ್ಲಿ ಕಂಪನಿ 600 ಮೆಗಾಫಿಕ್ಸೆಲ್​​ ಸೆನ್ಸಾರ್​​  ಪರಿಚಯಿಸುವ ಯೋಜನೆ ಬಗ್ಗೆ ಬಹಿರಂಗಪಡಿಸಿದೆ. ಮಾನವನ ಕಣ್ಣಿಗೆ ಕಾಣುವ ಹೆಚ್ಚಿನ ವಿವರವನ್ನು ಸೆರೆ ಹಿಡಿಯಬಲ್ಲದು ಎಂದು ಹೇಳಿದ್ದರು.
Published by: Harshith AS
First published: December 6, 2020, 8:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories