ಟೆಕ್ನಾಲಜಿ ಕಂಪನಿಗಳಲ್ಲಿ (Technology Company) ಬಹಳಷ್ಟು ಜನಪ್ರಿಯತೆಯಲ್ಲಿರುವ ಕಂಪನಿಯೆಂದರೆ ಅದು ಸ್ಯಾಮ್ಸಂಗ್ (Samsung). ಇದೀಗ ಈ ಕಂಪನಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿತ್ತು. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸದೇ ಇರದವರೇ ಇಲ್ಲ. ಅದೇ ರೀತಿ ಸ್ಮಾರ್ಟ್ ಟಿವಿ (Smart TV) ಮಾರುಕಟ್ಟೆಯಲ್ಲಿ ಕೂಡ ಸ್ಯಾಮ್ಸಂಗ್ವ ಕಂಪನಿ ತನ್ನ ಸ್ಥಾನವನ್ನು ವಿಸ್ತರಿಸಿಕೊಂಡಿದೆ. ಟೆಕ್ ವಲಯದಲ್ಲಿ ವಿಶ್ವದ ಅತ್ಯಂತ ಟೆಕ್ ಶೋ ಎಂದು ಕರೆಸಿಕೊಂಡ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ 2023 (CES 2023) ಇದೀಗ ಪ್ರಾರಂಭವಾಗಿದೆ. ಈ ಶೋ ಮುಖ್ಯವಾಗಿ ಹೊಸ ಡಿವೈಸ್ಗಳನ್ನು ಪರಿಚಯಿಸುವ ವೇದಿಕೆಯಾಗಿದೆ. ಇದೀಗ ಈ ಶೋನಲ್ಲಿ ಸ್ಯಾಮ್ಸಂಗ್ನ ಸ್ಮಾರ್ಟ್ ಟಿವಿ ಸೀರಿಸ್ ಅನ್ನು ಪರಿಚಯಿಸಿದೆ.
ಹೌದು, ಇದೀಗ ಜನಪ್ರಿಯ ಟೆಕ್ ಶೋನಲ್ಲಿ ಸ್ಯಾಮ್ಸಂಗ್ ಕಂಪನಿ ತನ್ನ ಸ್ಮಾರ್ಟ್ಟಿವಿಗಳ ಸೀರಿಸ್ ಅನ್ನು ಪರಿಚಯಿಸಿದೆ. ಹಾಗಿದ್ರೆ ಸ್ಮಾರ್ಟ್ ಟಿವಿಗಳು ಯಾವುದೆಲ್ಲಾ?, ಫೀಚರ್ಸ್ ಹೇಗಿದೆ ಎಂಬುದನ್ನು ಇಲ್ಲಿ ನೋಡಿ.
ಯಾವೆಲ್ಲಾ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ?
ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ (CES) 2023 ರಲ್ಲಿ, ಸ್ಯಾಮ್ಸಂಗ್ ಕಂಪನಿ ಹೊಸ QD-OLED, AI-ಚಾಲಿತ ನಿಯೋ QLED, ಮೈಕ್ರೋ ಎಲ್ಇಡಿ, ಮತ್ತು OLED ಟಿವಿಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೇವಲ 999 ರೂಪಾಯಿಗೆ ಖರೀದಿಸಿ ಗೇಮಿಂಗ್ ಇಯರ್ಬಡ್ಸ್! ಫೀಚರ್ಸ್ ಬಗ್ಗೆ ನೀವೇ ನೋಡಿ
ಸ್ಯಾಮ್ಸಂಗ್ ಕ್ಯೂಡಿ ಎಲ್ಇಡಿ
ಸ್ಯಾಮ್ಸಂಗ್ ಪರಿಚಯಿಸಿರುವ ಹೊಸ ಸ್ಮಾರ್ಟ್ಟಿವಿ ಸೀರಿಸ್ನಲ್ಲಿ ಸ್ಯಾಮ್ಸಂಗ್ QD-OLED ಟಿವಿಗಳು ಕೂಡ ಸೇರಿದೆ. ಈ ಸೀರಿಸ್ನ ಸ್ಮಾರ್ಟ್ಟಿವಿಗಳು 2,000 ನಿಟ್ಸ್ ಬ್ರೈಟ್ನೆಸ್ ಅನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಈ ಸ್ಮಾರ್ಟ್ಟಿವಿಗಳನ್ನು ಯಾವುದೇ ಆ್ಯಂಗಲ್ನಿಂದ ನೋಡಿದರೂ ನೀವು ಅತ್ಯುತ್ತಮ ಪಿಕ್ಚರ್ ವಿಶುವಲ್ಸ್ ಅನ್ನು ನೋಡಲು ಸಾಧ್ಯವಾಗಲಿದೆ. ಇನ್ನು ಸ್ಯಾಮ್ಸಂಗ್ ಪರಿಚಯಿಸಿರುವ ಹೊಸ QD-OLED ಸೀರಿಸ್ನ ಸ್ಮಾರ್ಟ್ ಟಿವಿಗಳು 4ಕೆ ರೆಸಲ್ಯೂಶನ್ನಿಂದ ಕೂಡಿದೆ. ಜೊತೆಗೆ ಇದು 49-ಇಂಚಿನ, 55-ಇಂಚಿನ, 65-ಇಂಚಿನ ಮತ್ತು 77-ಇಂಚಿನ ಡಿಸ್ಪ್ಲೇನ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಇತರ ಫೀಚರ್ಸ್
ಸ್ಯಾಮ್ಸಂಗ್ ಕಂಪನಿಯ QD OLED ಸೀರಿಸ್ನ ಸ್ಮಾರ್ಟ್ಟಿವಿಗಳಲ್ಲಿ ಅಪ್ಗ್ರೇಡ್ ಮಾಡಿದ ಓಎಲ್ಇಡಿ ಹೈಪರ್ ಎಫಿಶಿಯೆಂಟ್ EL ಮೆಟೀರಿಯಲ್ ಅನ್ನು ಬಳಸಲಾಗಿದೆ. ಜೊತೆಗೆ ಇಂಟೆಲಿಸೆನ್ಸ್ AI ಅನ್ನು ಒಳಗೊಂಡಿರುವುದರಿಂದ ಈ ಟಿವಿಗಳ ಬ್ರೈಟ್ನೆಸ್ 2,000 ನಿಟ್ಸ್ಗಳವರೆಗೆ ಒಳಗೊಂಡಿರುತ್ತದೆ. ಇದು ಹೊಸ ಮಾದರಿಯ ತಂತ್ರಜ್ಞಾನ ಹೊಂದಿರುವ ಈ ಟಿವಿಗಳು ಎಲ್ಜಿ ಕಂಪನಿಯ ಮಿನಿ ಎಲ್ಇಡಿಇ ಮತ್ತು OLED ಟಿವಿಗಳಿಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ.
ನಿಯೋ ಕ್ಯೂಎಲ್ಇಡಿ ಸ್ಮಾರ್ಟ್ ಟಿವಿ
ಸ್ಯಾಮ್ಸಂಗ್ ನ್ಯೂ ನಿಯೋ ಕ್ಯೂಎಲ್ಇಡಿ ಟಿವಿಗಳು ಸ್ಯಾಮ್ಸಂಗ್ ಕಂಪನಿ ಮಾರಕಟ್ಟೆಗೆ ಲಾಂಚ್ ಮಾಡಿರುವ ಮತ್ತೊಂದು ಸ್ಮಾರ್ಟ್ಟಿವಿ ಸೀರಿಸ್ ಆಗಿದೆ. ಈ ಸೀರಿಸ್ನ ಸ್ಮಾರ್ಟ್ಟಿವಿಗಳು ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮೊದಲಿಗಿಂತ ಹೆಚ್ಚು ಕಾಂಟ್ರಾಸ್ಟ್, ಬ್ರೈಟ್ನೆಸ್ ಮತ್ತು ಕಲರ್ನೊಂದಿಗೆ ರಿಯಲ್ ಇಮೇಜ್ ತೋರಿಸುವ ಸಾಮರ್ಥ್ಯ ಇದು ಹೊಂದಿದೆ. ಇದಕ್ಕಾಗಿ ರಿಯಲ್ ಟೈಂ ಹೈ ಡೈನಾಮಿಕ್ ರೇಂಜ್ ಎಫೆಕ್ಟ್ಗಳನ್ನುಅನ್ವಯಿಸಲು ಅಲ್ಗಾರಿದಮ್ನೊಂದಿಗೆ ಜೋಡಿಸಲಾಗಿದೆ ಎಂದು ಕಂಪನಿ ಹೇಳಿದೆ.
ಮೈಕ್ರೋ ಎಲ್ಇಡಿ
ಸ್ಯಾಮ್ಸಂಗ್ ಪರಿಚಯಿಸಿರುವ ಮತ್ತೊಂದು ಹೊಸ ಸ್ಮಾರ್ಟ್ಟಿವಿ ಎಂದರೆ ಅದು ಮೈಕ್ರೋ ಎಲ್ಇಡಿ ಸ್ಮಾರ್ಟ್ಟಿವಿ. ಈ ಸೀರಿಸ್ನ ಅಡಿಯಲ್ಲಿ ಇನ್ನೂ ಹಲವಾರು ಸ್ಮಾರ್ಟ್ ಟವಿಗಳು ಬಿಡುಗಡಯಾಗುತ್ತದೆ. ಈ ಸ್ಯಾಮ್ಸಂಗ್ ಮೈಕ್ರೋ ಎಲ್ಇಡಿ ಟಿವಿ ಸೀರಿಸ್ 50 ಇಂಚುಗಳಿಂದ 140 ಇಂಚುಗಳವರಿಗಿನ ಸ್ಮಾರ್ಟ್ಟಿವಿಗಳನ್ನು ಹೊಂದಿರುತ್ತದೆ.
ಸ್ಯಾಮ್ಸಂಗ್ ಓಎಲ್ಇಡಿ
ಸ್ಯಾಮ್ಸಂಗ್ನ ಸ್ಮಾರ್ಟ್ಟಿವಿಗಳ ಸಾಲಿಗೆ ಇದೀಗ ಸ್ಯಾಮ್ಸಂಗ್ ಓಎಲ್ಇಡಿ ಸ್ಮಾರ್ಟ್ಟಿವಿಗಳು ಸೇರಿವೆ. ಈ ಸ್ಯಾಮ್ಸಂಗ್ ಕಂಪನಿಯ OLED ಸ್ಮಾರ್ಟ್ಟಿವಿ ಸೀರಿಸ್ನಲ್ಲಿ ಹೊಸದಾಗಿ 77 ಇಂಚಿನ OLED ಮಾದರಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯ ಟಿವಿಗಳನ್ನು ಕಳೆದ ವರ್ಷ ಕೂಡ ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಟಿವಿಯನ್ನು ಬಿಡುಗಡೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ