Samsung jeans: ಬಂದಿದೆ ಸ್ಯಾಮ್​ಸಂಗ್​ ಜೀನ್ಸ್​ ಪ್ಯಾಂಟ್​! ಉಚಿತವಾಗಿ ಖರೀದಿಸಲು ಹೀಗೆ ಮಾಡಿ..

Samsung Galaxy Z Flip 3: ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಖಂಡಿತವಾಗಿಯೂ ಭಾರತದಲ್ಲಿ ಲಭ್ಯವಿದೆ. ಫೋನ್ ಪ್ರಾರಂಭಿಕ INR 84,999 ಬೆಲೆಯಲ್ಲಿ ಸಿಗುತ್ತದೆ. ಈ ಫೋನ್​ ಸ್ನಾಪ್‌ಡ್ರಾಗನ್ 888 ಚಿಪ್, 12MP ಡ್ಯುಯಲ್ ಕ್ಯಾಮೆರಾ ಸೆಟಪ್, 1.9-ಇಂಚಿನ ಕವರ್ ಡಿಸ್‌ಪ್ಲೇ ಮತ್ತು 3300mAh ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೊಂದಿದೆ

ಝೆಡ್​ ಫ್ಲಿಪ್​ ಡೆನಿಮ್​ ಪ್ಯಾಂಟ್/  Z Flip Denim

ಝೆಡ್​ ಫ್ಲಿಪ್​ ಡೆನಿಮ್​ ಪ್ಯಾಂಟ್/ Z Flip Denim

  • Share this:
    ಜನಪ್ರಿಯ ಕಂಪನಿ ಸ್ಯಾಮ್​ಸಂಗ್ ​(Samsung)  ಸ್ಮಾರ್ಟ್​ಫೋನ್​ (Smartphone), ಟಿವಿ (Tv) ಅಷ್ಟೇ ಏಕೆ ಹಲವು ಗ್ಯಾಜೆಟ್​ ವಸ್ತುಗಳನ್ನ ಉತ್ಪಾದಿಸುತ್ತಾ ಮತ್ತು ಪರಿಚಯಿಸುತ್ತಾ ಬಂದಿದೆ. ಆದರೀಗ ಕೊಂಚ ವಿಭಿನ್ನವಾಗಿರಲೆಂದು ಸ್ಯಾಮ್​ಸಂಗ್​ ಜೀನ್ಸ್ ಪ್ಯಾಂಟ್​ (Samsung jeans) ಅನ್ನು ಸಿದ್ಧಪಡಿಸುವ ಮೂಲಕ ಗ್ರಾಹಕರ ಅಚ್ಚರಿಗೆ ಕಾರಣವಾಗಿದೆ. ಅಂದಹಾಗೆಯೇ ಸ್ಯಾಮ್​ಸಂಗ್​ ಗ್ಯಾಲಕ್ಸಿ ಝೆಡ್​ ಫ್ಲಿಪ್​ 3ಗಾಗಿ (Samsung Galaxy Z Flip 3) ನೂತನ ಪ್ಯಾಂಟ್​ ಅನ್ನು ತಯಾರಿಸಿದೆ. ಜೊತೆಗೆ ಪ್ಯಾಂಟ್​ನಲ್ಲಿರುವ ವಿಶೇಷತೆಯನ್ನು ಬಹಿರಂಗಪಡಿಸಿದೆ.

    ಸ್ಯಾಮ್​ಸಂಗ್​ ಡೆನಿಮ್​ ಜೊತೆಗೆ ಕೈಜೋಡಿಸಿಕೊಂಡು ಪ್ಯಾಂಟ್​ ತಯಾರಿಸಿದೆ. ಸ್ಯಾಮ್​ಸಂಗ್​ ಆಸ್ಟ್ರೇಲಿಯಾದ ಡಾಕ್ಟರ್​ ಡೆನಿಮ್​ ಜೊತೆಗೂಡಿ ಝೆಡ್​ ಫ್ಲಿಪ್​​ ಪಾಕೆಟ್​ ಡೆನಿಮ್​​ ಲಿಮಿಟೆಡ್​ ಎಡಿಷನ್​ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗ್ಯಾಲಕ್ಸಿ ಝೆಡ್​ ಫ್ಲಿಪ್​​ 3 ಅನ್ನು ಮಾತ್ರ ಸಾಗಿಸಲು ಸಾಧ್ಯವಾಗುತ್ತದೆ.

    ಡಾಕ್ಟರ್​ ಡೆನಿಮ್​ ಸ್ಯಾಮ್​ಸಂಗ್​ ಜೀನ್ಸ್​ ಅನ್ನು 1499 ಡಾಲರ್​ಗೆ ಅಂದರೆ 1,11,687.94 ರೂ.ಗೆ ಮಾರಾಟ ಮಾಡುತ್ತಿದೆ. ಇದರರ್ಥ Samsung Galaxy Z Flip 3 ಸ್ಮಾರ್ಟ್​ಫೋನ್ ಖರೀದಿಸಿದರೆ ಈ ಪ್ಯಾಂಟ್​ ಉಚಿತವಾಗಿ ಸಿಗಲಿದೆ.

    ಇದನ್ನು ಓದಿ: Whatsapp Web; ಹೊಸ ಫೀಚರ್ಸ್​ ಪರಿಚಯಿಸಿದ ವಾಟ್ಸ್​ಆ್ಯಪ್ ವೆಬ್​, ಇನ್ಮುಂದೆ ಫೋಟೋ ಎಡಿಟ್​ ಮಾಡಿ ಕಳುಹಿಸಬಹುದು!

    Galaxy Z Flip 3ಗಾಗಿ ಸಿದ್ಧಗೊಂಡ ಸ್ಯಾಮ್​​ಸಂಗ್​ ಜೀನ್ಸ್​!

    ಸ್ಯಾಮ್​ಸಂಗ್​ ಗ್ಯಾಲಕ್ಸಿ Z Flip 3 ಎರಡು ಪಾಕೆಟ್​ ಹೊಂದಿದೆ. ಆದರೆ ಯಾವುದೇ ದೊಡ್ಡ ಪಾಕೆಟ್​ ಹೊಂದಿಲ್ಲ. ಹಿಂಭಾಗದಲ್ಲಿ ಒಂದು ಪಾಕೆಟ್​ ಇದ್ದರೆ ಮುಂಭಾಗದಲ್ಲಿ ಒಂದು ಪಾಕೆಟ್​​ ನೀಡಲಾಗಿದೆ. ಗ್ಯಾಲಕ್ಸಿ ಝೆಡ್​ ಫ್ಲಿಪ್​ 3 ಫೋನನ್ನ ಮಾತ್ರ ಇದರಲ್ಲಿರಿಸಲು ಸಾಧ್ಯವಾಗುತ್ತದೆ. ಆದರೆ ಇತರೆ ಯಾವುದೇ ಫೋನ್​ ಹಿಡಿಯುವುದಿಲ್ಲ.

    "ಸ್ಮಾರ್ಟ್‌ಫೋನ್‌ಗಳು ಸಾಮಾನ್ಯವಾಗಿ ಪಾಕೆಟ್ ಸ್ನೇಹಿಯಾಗಿರುವುದಿಲ್ಲ, ಆದ್ದರಿಂದ ನಾವು ಪಾಕೆಟ್ ರೂಢಿಗಾಗಿ ಕಾಂಪ್ಯಾಕ್ಟ್ Galaxy Z Flip3 ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಜೀನ್ಸ್ ಅನ್ನು ವಿನ್ಯಾಸಗೊಳಿಸಲು ಡಾ ಡೆನಿಮ್ ಶೈಲಿಯ ರುಜುವಾತುಗಳನ್ನು ಬಳಸಿದ್ದೇವೆ ಎಂದು ಸ್ಯಾಮ್‌ಸಂಗ್ ಮೊಬೈಲ್‌ ಬ್ರ್ಯಾಂಡ್ ಮಾರ್ಕೆಟಿಂಗ್ ಮುಖ್ಯಸ್ಥ ಹೇಲಿ ವಾಲ್ಟನ್ ಹೇಳಿದ್ದಾರೆ.



    ಇದನ್ನು ಓದಿ: Facebook ಫೇಸ್ ಐಡಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಮುಂದಾದ ಮೆಟಾ!

    Z ಫ್ಲಿಪ್ ಡೆನಿಮ್ ಭಾರತದಲ್ಲಿ ಲಭ್ಯವಿಲ್ಲದಿದ್ದರೂ, Galaxy Z Flip 3 ಖಂಡಿತವಾಗಿ ಲಭ್ಯವಿದೆ. ಫೋನ್ ಪ್ರಾರಂಭಿಕ INR 84,999 ಬೆಲೆಯಲ್ಲಿ ಸಿಗುತ್ತದೆ. ಈ ಫೋನ್​ ಸ್ನಾಪ್‌ಡ್ರಾಗನ್ 888 ಚಿಪ್, 12MP ಡ್ಯುಯಲ್ ಕ್ಯಾಮೆರಾ ಸೆಟಪ್, 1.9-ಇಂಚಿನ ಕವರ್ ಡಿಸ್‌ಪ್ಲೇ ಮತ್ತು 3300mAh ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೊಂದಿದೆ. ಸದ್ಯದಲ್ಲೆ ಝೆಡ್​ ಫ್ಲಿಪ್​ ಡೆನಿಮ್​ ಪ್ಯಾಂಟ್​ ಭಾರತಕ್ಕೂ ಬರಲಿದೆ.
    Published by:Harshith AS
    First published: