Samsung: ಅಂತು ಇಂತು ಮಾರುಕಟ್ಟೆಗೆ ಬಂತು ಗ್ಯಾಲಕ್ಸಿ ಜೆಡ್ ಫ್ಲಿಪ್ 4 ಹಾಗೂ ಗ್ಯಾಲಕ್ಸಿ ಜೆಡ್ ಫೋಲ್ಡ್ 4; ಬೆಲೆ ಎಷ್ಟು?

ಸ್ಯಾಮ್‌ಸಂಗ್ ತನ್ನ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಜೆಡ್ ಫ್ಲಿಪ್ 4 (Galaxy Z Flip 4) ಹಾಗೂ ಗ್ಯಾಲಕ್ಸಿ ಜೆಡ್ ಫೋಲ್ಡ್ 4 (Galaxy Z Fold 4) ಭಾರತದಲ್ಲಿ ಆರಂಭ ಬೆಲೆ ರೂ 89,999 ಕ್ಕೆ ಪರಿಚಯಿಸಿದೆ. ಎಲ್ಲಾ ಪ್ರಮುಖ ಆನ್‌ಲೈನ್ ಹಾಗೂ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿದಾರರು ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳನ್ನು ಮುಂಗಡ ಕಾಯ್ದಿರಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ 4

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ 4

  • Share this:
ಸ್ಯಾಮ್‌ಸಂಗ್ (Samsung) ತನ್ನ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳಾದ (Smartphone) ಗ್ಯಾಲಕ್ಸಿ ಜೆಡ್ ಫ್ಲಿಪ್ 4 (Galaxy Z Flip 4) ಹಾಗೂ ಗ್ಯಾಲಕ್ಸಿ ಜೆಡ್ ಫೋಲ್ಡ್ 4 (Galaxy Z Fold 4) ಭಾರತದಲ್ಲಿ ಆರಂಭ ಬೆಲೆ ರೂ 89,999 ಕ್ಕೆ ಪರಿಚಯಿಸಿದೆ. ಎಲ್ಲಾ ಪ್ರಮುಖ ಆನ್‌ಲೈನ್ ಹಾಗೂ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿದಾರರು ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳನ್ನು (Foldable Smartphone) ಮುಂಗಡ ಕಾಯ್ದಿರಿಸಬಹುದಾಗಿದೆ. ಬೋರಾ ಪರ್ಪಲ್, ಗ್ರಾಫೈಟ್ ಹಾಗೂ ಪಿಂಕ್ ಗೋಲ್ಡ್ ಬಣ್ಣಗಳಲ್ಲಿ ಗ್ಯಾಲಕ್ಸಿ ಜೆಡ್ ಫ್ಲಿಪ್ 4 (Galaxy Z Flip 4) ಲಭ್ಯವಿದೆ. ಸ್ಮಾರ್ಟ್‌ಫೋನ್‌ನ 8ಜಿಬಿ+128ಜಿಬಿ ಅವೃತ್ತಿಯು ರೂ 89,999 ಕ್ಕೆ ಲಭ್ಯವಿದ್ದು, 8ಜಿಬಿ+256ಜಿಬಿ ಆವೃತ್ತಿಯ ಬೆಲೆ ರೂ 94,999 ಆಗಿದೆ.

ಅಂತೆಯೇ ಗ್ಲಾಸ್ ಕಲರ್‌ಗಳು ಮತ್ತು ಫ್ರೇಮ್ ಆಯ್ಕೆಗಳಿರುವ ಬೆಸ್ಪೋಕ್ ಆವೃತ್ತಿಯು ಸ್ಯಾಮ್‌ಸಂಗ್ ಲೈವ್ ಮತ್ತು ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ ರೂ 97,999 ಕ್ಕೆ ಲಭ್ಯವಿರುತ್ತದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 (Galaxy Z Fold 4) ಬೆಲೆ:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 (Galaxy Z Fold 4) ಗ್ರೇ ಗ್ರೀನ್, ಬೀಜ್ ಹಾಗೂ ಫ್ಯಾಂಟಮ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 (Galaxy Z Fold 4)ನ 12ಜಿಬಿ+256ಜಿಬಿ ಆವೃತ್ತಿಯು ರೂ 1, 54,999 ಕ್ಕೆ ದೊರೆಯಲಿದ್ದು 12ಜಿಬಿ+256ಜಿಬಿ ಆವೃತ್ತಿಯು ರೂ 1,64,999 ಕ್ಕೆ ಲಭ್ಯವಿದೆ. ಖರೀದಿದಾರರು 12ಜಿಬಿ+1ಟಿಬಿ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್ ಲೈವ್ ಹಾಗೂ ಸ್ಯಾಮ್‌ಸಂಗ್ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳಲ್ಲಿ 1,84,999 ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ 4 (Galaxy Z Flip 4) ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 (Galaxy Z Fold 4) ಲಾಂಚ್ ಆಫರ್‌ಗಳು:
ಗ್ಯಾಲಕ್ಸಿ ಜೆಡ್ ಫೋಲ್ಡ್ 4 ಅನ್ನು ಮುಂಗಡವಾಗಿ ಬುಕ್ ಮಾಡುವ ಖರೀದಿದಾರರು ರೂ 34,999 ರ ಬೆಲೆಯ ಗ್ಯಾಲಕ್ಸಿ ವಾಚ್4 ಕ್ಲಾಸಿಕ್ 46mm BT ಅನ್ನು ಕೇವಲ ರೂ 2999 ಗಳಲ್ಲಿ ಪಡೆಯುತ್ತಾರೆ. ಹೆಚ್ಚುವರಿಯಾಗಿ, ಗ್ರಾಹಕರು ಎಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ರೂ 8000 ಕ್ಯಾಶ್‌ಬ್ಯಾಕ್ ಪಡೆಯಬಹುದು ಅಥವಾ 8000 ರೂಗಳ ಅಪ್‌ಗ್ರೇಡ್ ಬೋನಸ್ ಅನ್ನು ಪಡೆಯಬಹುದು.

ಇದನ್ನೂ ಓದಿ: Vivo V25 Pro ಸ್ಮಾರ್ಟ್​ಫೋನ್​ ಬಿಡುಗಡೆ; ನೂತನ ಫೋನಿನ ಬೆಲೆ, ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ

ಗ್ಯಾಲಕ್ಸಿ ಜೆಡ್ ಫ್ಲಿಪ್ 4 ಪೂರ್ವ ಮುಂಗಡವಾಗಿ ಕಾಯ್ದಿರಿಸುವವರಿಗೆ ರೂ 31999 ಮೌಲ್ಯದ ಗ್ಯಾಲಕ್ಸಿ ವಾಚ್4 ಕ್ಲಾಸಿಕ್ 42mm BT ಅನ್ನು ಕೇವಲ 2999 ರೂಗಳಲ್ಲಿ ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ, ಗ್ರಾಹಕರು ಎಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ರೂ 7000 ಕ್ಯಾಶ್‌ಬ್ಯಾಕ್ ಪಡೆಯಬಹುದು ಅಥವಾ ರೂ 7000 ನ ಅಪ್‌ಗ್ರೇಡ್ ಬೋನಸ್ ಅನ್ನು ಪಡೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫ್ಲಿಪ್ 4 ವಿಶೇಷತೆಗಳು:
6.7 ಇಂಚಿನ ಮಡಚಬಹುದಾದ ಡೈನಾಮಿಕ್ ಅಮೋಲೆಡ್ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್ ಹೊಂದಿದ್ದು 2640 x 1080p ರೆಸಲ್ಯೂಶನ್ ಒಳಗೊಂಡಿದೆ. ಫ್ಲಿಪ್‌ನಲ್ಲಿ ಸೆಕೆಂಡರಿ ಡಿಸ್‌ಪ್ಲೇಯನ್ನು ಫೋನ್ ಹೊಂದಿದ್ದು 1.9 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಇದಾಗಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 8+ ಜನ್ 1 ಚಿಪ್‌ಸೆಟ್ ಇದರಲ್ಲಿದ್ದು 8 ಜಿಬಿ RAM ಹಾಗೂ 512 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದೆ. 3,700mAh ಬ್ಯಾಟರಿಯನ್ನು ಹೊಂದಿದ್ದು 25 ವ್ಯಾಟ್ ಚಾರ್ಜಿಂಗ್ ಅನ್ನು ಸ್ಮಾರ್ಟ್‌ಫೋನ್ ಪಡೆದುಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 ವಿಶೇಷತೆಗಳು:
6.2 ಇಂಚಿನ ಹೊರಾಂಗಣ ಡಿಸ್‌ಪ್ಲೇಯು HD+ 2316 x 904 ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಮುಖ್ಯ ಮಡಚಬಹುದಾದ ಡಿಸ್‌ಪ್ಲೇಯು 7.6 ಇಂಚಿನ QXGA+ಡೈನಾಮಿಕ್ ಅಮೋಲೆಡ್ 2X ಡಿಸ್‌ಪ್ಲೇ ಹಾಗೂ 2176 x 1812 ರೆಸಲ್ಯೂಶನ್ ಅನ್ನು ಹೊಂದಿದೆ. ಸ್ನ್ಯಾಪ್‌ಡ್ರ್ಯಾಗನ್ 8+ಜನ್ 1 ಚಿಪ್‌ಸೆಟ್ ಇದರಲ್ಲಿದ್ದು ಹೆಚ್ಚಿನ RAM ಅನ್ನು ಪಡೆದುಕೊಂಡಿದೆ. ಇನ್ನು 12 ಜಿಬಿ RAM ನೊಂದಿಗೆ 1TB ಸಂಗ್ರಹಣೆ ಇದರ ವಿಶೇಷತೆಯಾಗಿದೆ. 4,400mAh ಬ್ಯಾಟರಿ ಇದರಲ್ಲಿದ್ದು 25 ವ್ಯಾಟ್ ವೇಗದ ಚಾರ್ಜಿಂಗ್, ವೈರ್‌ಲೆಸ್ ಚಾರ್ಜಿಂಗ್ ವಿಶೇಷತೆ ಇದರಲ್ಲಿದೆ.

ಇದನ್ನೂ ಓದಿ: NOKIA 8210 Phone: ಇದು 4G ಫೀಚರ್ ಫೋನ್, 1 ಬಾರಿ ಚಾರ್ಜ್ ಮಾಡಿದ್ರೆ 1 ತಿಂಗಳು ಬರುತ್ತೆ!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 50-ಮೆಗಾಪಿಕ್ಸೆಲ್ ಪ್ರೈಮರಿ ವೈಡ್ ಆ್ಯಂಗಲ್ ಶೂಟರ್ ಇದರಲ್ಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 4 ಎರಡು ಕ್ಯಾಮೆರಾಗಳನ್ನು ಹೊಂದಿದೆ. ಒಂದು 4 ಮೆಗಾಪಿಕ್ಸೆಲ್ ಅಂಡರ್-ಡಿಸ್‌ಪ್ಲೇ ಫ್ರಂಟ್ ಕ್ಯಾಮೆರಾವನ್ನು ಫೋಲ್ಡೇಬಲ್ ಸ್ಕ್ರೀನ್‌ನಲ್ಲಿ ಹೊಂದಿದ್ದು 10 ಮೆಗಾಪಿಕ್ಸೆಲ್ ಶೂಟರ್ ಅನ್ನು ಕವರ್ ಸ್ಕ್ರೀನ್‌ನಲ್ಲಿ ಹೊಂದಿದೆ.
Published by:Ashwini Prabhu
First published: