ಹೊಸ ಬಣ್ಣದೊಂದಿಗೆ ಎಂಟ್ರಿಕೊಡಲಿರುವ Galaxy S9+


Updated:June 15, 2018, 7:45 PM IST
ಹೊಸ ಬಣ್ಣದೊಂದಿಗೆ ಎಂಟ್ರಿಕೊಡಲಿರುವ Galaxy S9+

Updated: June 15, 2018, 7:45 PM IST
ನವದೆಹಲಿ: ಸ್ಯಾಮ್ಸ್ಂಗ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಎಸ್​9ಪ್ಲಸ್​ನ ಮೊಬೈಲ್​ನ ಹೊಸ ಆವೃತ್ತಿ ಲಿಮಿಟೆಡ್​ ಎಡಿಷನ್​ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಸನ್​ರೈಸ್​ ಗೋಲ್ಡ್​ ಬಣ್ಣದಲ್ಲಿ ಮಾರುಕಟ್ಟೆ ಪ್ರವೇಶಿಸಿರುವ Galaxy S9+ ಇದೇ 20ರಿಂದ ಗ್ರಾಹಕರಿಗೆ ಲಭ್ಯವಿರಲಿದೆ. ಮಾಹಿತಿಗಳ ಪ್ರಕಾರ 128 ಜಿಬಿಯ ಈ ಮೊಬೈಲ್​ಗೆ 68,990 ರೂ ಬೆಲೆ ನಿಗದಿ ಪಡಿಸಲಾಗಿದೆ. ಒಂದು ವೇಳೆ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಅಥವಾ ಪೇಟಿಎಂ ಮಾಲ್​ ಬಳಸಿ ಈ ಮೊಬೈಲ್​ ಖರೀದಿಸಿದರೆ 9000ರೂ ವರೆಗೂ ಕ್ಯಾಶ್​ ಬ್ಯಾಕ್​ ಹಾಗೂ ಒಂದು ಬಾರಿ ಸ್ಕ್ರೀನ್​ ರೀಪ್ಲೇಸ್​ಮೆಂಟ್​ ವ್ಯಾರೆಂಟ್​ ಆಫರ್​ನ್ನು ಸ್ಯಾಮ್ಸಂಗ್​ ನೀಡುತ್ತಿದೆ.

ಕಂಪನಿ ನೀಡಿದ ಮಾಹಿತಿಗಳ ಪ್ರಕಾರ Galaxy S9+ ಮೊಬೈಲ್​ಗೆ ಇದೇ ಮೊದಲ ಬಾರಿಗೆ ಸ್ಯಾಟಿನ್ ಗ್ಲಾಸ್ ಫಿನಿಶ್ ಮಾಡಲಾಗಿದೆ. ಇಂದು (ಜೂ.15)ರಾತ್ರಿಯಿಂದ ಈ ಮೊಬೈಲ್​ನ್ನು ಫ್ಲಿಪ್​ಕಾರ್ಟ್​ನಲ್ಲಿ ಮುಂಗಡ ಬುಕ್ಕಿಂಗ್​ ಮಾಡಿಸಿಕೊಳ್ಳಬಹುದು.

ಈ ಹೊಸ ಬಣ್ಣದೊಂದಿಗೆ ಸ್ಯಾಮ್ಸಂಗ್​ ಸಂಸ್ಥೆ ಟಿವಿಯನ್ನು ಆಪರೇಟ್​ ಮಾಡುವ ಕಂಟ್ರೋಲ್​ ವಿಡ್ಜೆಟ್​ನ್ನು ಕೂಡಾ ಪರಿಚಯಿಸಿದೆ. ಸ್ಮಾರ್ಟ್​ ಥಿಂಗ್ಸ್​ ಅಪ್ಲಿಕೇಶನ್​ ಮೂಲಕ ಇದನ್ನು ಅಳವಡಿಸಿಕೊಂಡರೆ ಮೊಬೈಲ್​ನ್ನೇ ಟಿವಿ ರಿಮೋಟ್​ ಮಾದರಿಯಲ್ಲಿ ಬಳಸಬಹುದು. ಅಲ್ಲದೇ ಎರಡೂ ಕಡೆ ಟಿವಿಯನ್ನು ವೀಕ್ಷಿಸಬಹುದು.

ಇನ್ನು ಈ ಮೊಬೈಲ್​ ಒಕ್ಟಾಕೋರ್​ ಎಕ್ಷಿಯಾನ್​ 9810 (4x 2.9GHz + 4x 1.9GHz)ಪ್ರೊಸೆಸರ್​ ಹೊಂದಿದ್ದು 6ಜಿಬಿ RAM ವ್ಯವಸ್ಥೆಯಿದೆ. ಇನ್ನು 6.2ಇಂಚ್​ಗಳ Quad HD+ ಕರ್ವ್​ಡ್​ ಡಿಸ್​ಪ್ಲೇ ವ್ಯವಸ್ಥೆಯೊಂದಿಗೆ, 400 ಜಿಬಿ ಮೆಮೊರಿ ವಿಸ್ಥರಣೆ ವ್ಯವಸ್ಥೆಯಿದೆ. ಈ ಮೊಬೈಲ್​ನಲ್ಲಿ 12MP ಟೆಲಿಫೊಟೊ and 12MP ವೈಡ್​ ರೇಂಜ್​ ಫೊಟೊ ವ್ಯವಸ್ಥೆಯನ್ನು ಹೊಂದಿದೆ. ಸೆಲ್ಫಿ ಪ್ರಿಯರಿಗೆ ಉತ್ತಮ ಆಟೋ ಫೋಕಸ್​ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

 
First published:June 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ