ಸ್ಯಾಮ್ಸಂಗ್ ಕಂಪನಿ (Samsung Company) ಸ್ಮಾರ್ಟ್ಫೋನ್ ಕಂಪನಿಗಳಲ್ಲಿ ಬಹಳ ಹಿಂದಿನಿಂದಲೂ ಬಹಳ ಪ್ರಚಾರದಲ್ಲಿರುವ ಕಂಪನಿಯಾಗಿದೆ. ಇದುವರೆಗೆ ಸ್ಯಾಮ್ಸಂಗ್ನಿಂದ ಹಲವಾರು ಸ್ಮಾರ್ಟ್ಫೋನ್ಗಳು (Smartphone) ಬಿಡುಗಡೆಯಾಗಿದೆ ಆದರೆ ಮುಂದಿನ ವರ್ಷ ಸ್ಯಾಮ್ಸಂಗ್ ಬ್ರಾಂಡ್ನ ಅಡಿಯಲ್ಲಿ ಹೊಸ ಫೋನ್ ಬಿಡುಗಡೆಯಾಗಲಿದೆ. ಆದರೆ ಈ ಸ್ಮಾರ್ಟ್ಫೋನ್ ಗ್ರಾಹಕರು ಇದುವರೆಗೆ ಊಹೆ ಮಾಡಿರದ ಫೀಚರ್ಸ್ಗಳನ್ನು ಒಳಗೊಂಡಿದೆ. ಸ್ಯಾಮ್ಸಂಗ್ ನಿಂದ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ ಎಂಬುದಾಗಿದೆ. ಇದು ಮುಂದಿನ ವರ್ಷದ ಫೆಬ್ರವರಿ 1 ರಂದು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸೀರಿಸ್ನಲ್ಲಿ ಗ್ಯಾಲಕ್ಸಿ ಎಸ್23 (Samsung Galaxy S23), ಗ್ಯಾಲಕ್ಸಿ ಎಸ್23 ಪ್ಲಸ್ (Galaxy S23 Plus) ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ (Galaxy S23 Ultra) ಎಂಬ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಲಿವೆ.
ಹೌದು, ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳು ಈ ವರ್ಷ ಬಿಡುಗಡೆಯಾಗಲಿದ್ದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ. ಇದು ಗುಣಮಟ್ಟದ ಫೀಚರ್ಸ್ಗಳನ್ನು ಒಳಗೊಂಡಿದ್ದು ಇದರ ಫೀಚರ್ಸ್, ಬೆಲೆಯ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಡಿಸ್ಪ್ಲೇ ವಿನ್ಯಾಸ ಹೇಗಿದೆ?
ಐಸ್ ಯೂನಿವರ್ಸ್ ಎಂಬ ಹೆಸರಿನಿಂದ ಪ್ರಸಿದ್ಧವಾದ ಟಿಪ್ಸ್ಟರ್ ವರದಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಫೀಚರ್ಸ್ಗಳನ್ನು ಸೋರಿಕೆ ಮಾಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸ್ಮಾರ್ಟ್ಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿರುವ ಸಾಧ್ಯತೆಯಿದೆ. ಆದರೆ ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್23 ಅಲ್ಟ್ರಾ ಮಾದರಿಗಳು 6.7 ಇಂಚಿನ ಬಿಗ್ ಡಿಸ್ಪ್ಲೇಯನ್ನು ಹೊಂದಿರಬಹುದು.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಹೊಸ ಸ್ಮಾರ್ಟ್ವಾಚ್! ಫೀಚರ್ಸ್ ನೋಡಿದ್ರೆ ಗ್ಯಾರಂಟಿ ತಗೊಳ್ತೀರಾ
ಇದಲ್ಲದೆ ಈ ಡಿಸ್ಪ್ಲೇಗಳಲ್ಲಿ ವಿಷಯಕ್ಕೆ ಅನುಗುಣವಾಗಿ ರಿಫ್ರೆಶ್ ರೇಟ್ ಅನ್ನು ಸೆಟ್ ಮಾಡಲುಇವುಗಳು LTPO ಪ್ಯಾನೆಲ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಅಲ್ಲದೆ ಫೋನ್ನಲ್ಲಿ ಸೆಲ್ಫಿ ಕ್ಯಾಮೆರಾಗಾಗಿ ಹೋಲ್-ಪಂಚ್ ಕಟೌಟ್ ನೀಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಗ್ಯಾಲಕ್ಸಿ ಎಸ್23 ಅಲ್ಟ್ರಾ ಫೋನ್ 200 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಹೊಂದಿರುವ ನಿರೀಕ್ಷೆಯಿದೆ.
ಪ್ರೊಸೆಸರ್ ಹೇಗೆ ಕಾರ್ಯನಿರ್ವಹಿಸಲಿದೆ?
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಪ್ರೊಸೆಸರ್ ನಿಮಗೆ ವೇಗವಾದ ಮತ್ತು ಸ್ಥಿರವಾದ ಇಂಟರ್ನೆಟ್ ಬೆಂಬಲಕ್ಕಾಗಿ ವೈ-ಫೈ 7 ಟೆಕ್ನಾಲಜಿಯನ್ನುಹೊಂದಿರಲಿದೆ. ಸ್ಯಾಮ್ಸಂಗ್ ಕನೆಕ್ಟಿವಿಟಿ ಆಯ್ಕೆಯನ್ನು ವೈ-ಫೈ 6e ಗೆ ಮಾತ್ರ ಸೀಮಿತವಾಗಿರಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಈ ಚಿಪ್ಸೆಟ್ ಗೇಮ್ಗಳಲ್ಲಿ ರೇ-ಟ್ರೇಸಿಂಗ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ ಎಂದು ವರದಿ ಹೇಳಿದೆ.
ಇದರಿಂದ ಸ್ಯಾಮ್ಸಂಗ್ನ ಹೈ-ರೆಸಲ್ಯೂಶನ್ ಡಿಸ್ಪ್ಲೇಯಲ್ಲಿ ಗೇಮಿಂಗ್ ಅನುಭವವನ್ನು ಬಹಳ ಉತ್ತಮವಾಗಿ ಪಡೆಯಬಹುದು ಎಂದು ಹೇಳಿದ್ದಾರೆ. ಇನ್ನು ಈ ಸರಣಿಯಲ್ಲಿ ಬರುವ ಎಲ್ಲಾ ಮೂರು ಸ್ಮಾರ್ಟ್ಫೋನ್ಗಳು ಕೂಡ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 2 SoC ಪ್ರೊಸೆಸರ್ ಒಳಗೊಂಡಿರುತ್ತವೆ ಎನ್ನಲಾಗಿದೆ. ಇದು ಬಹಳಷ್ಟು ಸಾಮರ್ಥ್ಯಗಳನ್ನು ಅನ್ಲಾಕ್ ಮಾಡುತ್ತದೆ ಎಂಬ ನಿರೀಕ್ಷೆಯಿದೆ.
ಬ್ಯಾಟರಿ ಫೀಚರ್ಸ್
ಇನ್ನು ಈ ಸ್ಮಾರ್ಟ್ಫೋನ್ಗಳಲ್ಲಿ ಯಾವ ಬ್ಯಾಟರಿಯನ್ನು ಅಳವಡಿಸಲಾಗುತ್ತದೆ, ಅದರ ಬ್ಯಾಕಪ್ ಸಾಮರ್ಥ್ಯ ಎಷ್ಟು ಎಂಬುದನ್ನೆಲ್ಲಾ ಸೋರಿಕೆ ಮಾಡಿಲ್ಲ. ಆದರೆ ಸ್ಯಾಮ್ಸಂಗ್ ಕಂಪನಿಯ ಈ ಸ್ಮಾರ್ಟ್ಫೋನ್ಗಳು ಸಾಮಾನ್ಯವಾಗಿ ಹೆಚ್ಚಿನ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅದು ಗ್ಯಾಲಕ್ಸಿ ಎಸ್23 ಸರಣಿಯಲ್ಲಿಯೂ ಕೂಡ ಮುಂದುವರೆಯುವ ಸಾಧ್ಯತೆಯಿದೆ. ಅದರಂತೆ ಈ ಸರಣಿಯಲ್ಲಿ ಗರಿಷ್ಠ 50W ವೇಗದ ಚಾರ್ಜಿಂಗ್ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ನೀಡುವ ನಿರೀಕ್ಷೆಯಿದೆ.
2023ರಲ್ಲಿ ಬಿಡುಗಡೆ
ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಸೀರಿಸ್ನ ಸ್ಮಾರ್ಟ್ಫೋನ್ಗಳು ಮುಂದಿ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಇದುವರೆಗೆ ಬೆಲೆ, ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ