Samsung Galaxy S22 Ultra: ನೀರಿಗೆ ಬಿದ್ರೂ, ಚಲಿಸುವ ಕಾರಿನಿಂದ ಕೆಳಗೆ ಬಿದ್ರೂ ಈ ಫೋನ್‍ಗೆ ಏನೂ ಆಗಲ್ಲ!

Samsung Galaxy S22 Ultra: ಈ ಫೋನ್ ಪರೀಕ್ಷೆಯಲ್ಲಿ, 10 ರಲ್ಲಿ 9.5 ಅಂಕಗಳನ್ನು ಗಳಿಸಿದೆ. ಬಾಕ್ಸ್ ಕಟರ್‌ನಿಂದ ಫೋನ್ ಕ್ಯಾಮರಾಗಳು, ಪರದೆ ಮತ್ತು ಇತರ ಭಾಗಗಳನ್ನು ಸ್ಕ್ರಾಚ್ ಮಾಡಲಾಯಿತು. ಫೋನ್ ಅನ್ನು ನೀರಿನಲ್ಲಿ ಮುಳುಗಿಸಲಾಯಿತು.

ಸ್ಯಾಮ್​ಸಂಗ್​ ಗ್ಯಾಲಕ್ಸಿ S22 ಅಲ್ಟ್ರಾ

ಸ್ಯಾಮ್​ಸಂಗ್​ ಗ್ಯಾಲಕ್ಸಿ S22 ಅಲ್ಟ್ರಾ

  • Share this:
    ಭಾರತದಲ್ಲಿ ಸ್ಯಾಮ್‍ಸಂಗ್ ಕಂಪನಿ (Samsung Company) ಇತ್ತೀಚೆಗೆ, ತನ್ನ ವಾರ್ಷಿಕ ಗ್ಯಾಲಕ್ಸಿ ಅನ್‍ಪ್ಯಾಕ್ಡ್ (Galaxy Unpacked)‌ ಸಮಾರಂಭದಲ್ಲಿ ನೂತನ ಗ್ಯಾಲಕ್ಸಿ ಎಸ್22 (Galaxy S22) ಸ್ಪಾರ್ಟ್‌ಫೋನ್ ಸರಣಿಗಳನ್ನು (Smartphone Series) ಭಾರತದಲ್ಲಿ ಅನಾವರಣಗೊಳಿಸಿತು. ಸ್ಯಾಮ್‍ಸಂಗ್ ಗ್ಯಾಲಕ್ಸಿ 22 ಅಲ್ಟ್ರಾ (Samsung Galaxy S22 Ultra), ಈ ಸರಣಿಗಳಲ್ಲಿ ಅತ್ಯಂತ ಹೆಚ್ಚು ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದ್ದು, ಅದು ಬಿಡುಗಡೆಯಾದ ಕೇವಲ ಒಂದು ವಾರದ ಒಳಗೆ ಬಾಳಿಕೆಗೆ ಸಂಬಂಧಿಸಿದ ಹಲವಾರು ಪರೀಕ್ಷೆಗಳಿಗೆ ಒಳಗಾಗಿದೆ. ಪಿಬಿಕೆ ರಿವ್ಯೂಸ್ (PBK Reviews) ಎಂಬ ಯೂಟ್ಯೂಬ್ ಚಾನಲ್ (Youtube Channel) ಒಂದು, ಸ್ಯಾಮ್‍ಸಂಗ್ ಗ್ಯಾಲಕ್ಸಿ 22 ಅಲ್ಟ್ರಾ ಫೋನ್ ನಿಜಕ್ಕೂ ಎಷ್ಟರ ಮಟ್ಟಿಗೆ ಬಾಳಿಕೆ ಹೊಂದಿದೆ ಎಂಬುದನ್ನು ತಿಳಿಯಲು ಅದರ ಪರೀಕ್ಷೆಯನ್ನು ನಡೆಸಿತು. ಇದು ಫೋನ್ ಕಂಪೆನಿಯ ಅತ್ಯಂತ ಹೆಚ್ಚು ಬಾಳಿಕೆಯುಳ್ಳ ಫೋನ್ (Phone) ಆಗಿರಬಹುದು ಎಂಬುದನ್ನು ಈ ಪರೀಕ್ಷೆಯ ಫಲಿತಾಂಶವು ತೋರಿಸಿಕೊಟ್ಟಿದೆ.

    ಈ ಫೋನ್ ಪರೀಕ್ಷೆಯಲ್ಲಿ, 10 ರಲ್ಲಿ 9.5 ಅಂಕಗಳನ್ನು ಗಳಿಸಿದೆ. ಬಾಕ್ಸ್ ಕಟರ್‌ನಿಂದ ಫೋನ್ ಕ್ಯಾಮರಾಗಳು, ಪರದೆ ಮತ್ತು ಇತರ ಭಾಗಗಳನ್ನು ಸ್ಕ್ರಾಚ್ ಮಾಡಲಾಯಿತು. ಫೋನ್ ಅನ್ನು ನೀರಿನಲ್ಲಿ ಮುಳುಗಿಸಲಾಯಿತು. ಈ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣವಾಗುವುದರಲ್ಲಿ ಸ್ಯಾಮ್‍ಸಂಗ್ ಗ್ಯಾಲಕ್ಸಿ 22 ಅಲ್ಟ್ರಾ ಫೋನ್ ಯಶಸ್ವಿಯಾಗಿದೆ. ಈ ಎರಡು ಪರೀಕ್ಷೆಗಳು ಮಾತ್ರವಲ್ಲ, ಇನ್ನೊಂದು ಅತ್ಯಂತ ರೋಚಕವಾದ ಪರೀಕ್ಷೆಯ ಕ್ಷಣವೊಂದನ್ನು ಕೂಡ ಹೊಂದಿರುವ ವಿಡಿಯೋವನ್ನು ಆ ಯೂಟ್ಯೂಬ್ ಚಾನೆಲ್‍ನಲ್ಲಿ ಕಾಣಬಹುದು.

    ಅದ್ಯಾವ ರೋಚಕ ಪರೀಕ್ಷೆ ಗೊತ್ತೇ..? ಪರದೆಯನ್ನು ಕೆಳಮುಖವಾಗಿ ಇಟ್ಟು, ಸ್ಯಾಮ್‍ಸಂಗ್ ಗ್ಯಾಲಕ್ಸಿ 22 ಅಲ್ಟ್ರಾ ಫೋನ್‍ನ ಮೇಲೆ ಕಾರ್ ಅನ್ನು ಚಲಾಯಿಸಲಾಯಿತು. ಆದರೂ ಕೂಡ ಆ ಫೋನ್ ಈಗಲೂ ಕೆಲಸ ಮಾಡುತ್ತಿದೆ ಮತ್ತು ಅದು ಒಂದಿಷ್ಟು ಬಾಗಿಲ್ಲ. ಆದರೆ ಫೋನ್‍ನ ಮುಂಭಾಗ ಮತ್ತು ಹಿಂಭಾಗದ ಪ್ಯಾನಲ್‍ಗಳ ಮೇಲೆ ಗೀರುಗಳಾಗಿವೆ. ಅಚ್ಚರಿ ಹಾಗೂ ಸಂತಸದ ಸಂಗತಿ ಎಂದರೆ, ವಿಡಿಯೋದಲ್ಲಿ ಹೇಳಿರುವ ಪ್ರಕಾರ, ಆ ಫೋನ್‍ನ ಆಂತರಿಕ ಭಾಗಗಳಿಗೆ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ.

    ಇದನ್ನು ಓದಿ: ಕಾರಿನ Brake failure​ ಆದಾಗ ಗಾಬರಿಯಾಗಬೇಡಿ.. ಈ ತಂತ್ರಗಳು ನಿಮ್ಮ ಜೀವ ಉಳಿಸಬಹುದು

    ಆ ಯೂಟ್ಯೂಬ್ ವಿಮರ್ಶಕರು ಒಂದು ಸ್ಕ್ರ್ಯಾಚ್ ಟೆಸ್ಟ್ ಅನ್ನು ಕೂಡ ಮಾಡಿದರು. ಅಲ್ಲಿ MoH ನ ಹಾರ್ಡ್‍ನೆಸ್ ಮಟ್ಟ 7ರಲ್ಲಿ ಲಘುವಾದ ಗೀರುಗಳು ಮತ್ತು ಮಟ್ಟ 8ರಲ್ಲಿ ಆಳವಾದ ಕೊರೆತವನ್ನು ಕಾಣಬಹುದು. ಅವರು ಇನ್ –ಡಿಸ್ಪ್ಲೆ ಫಿಂಗರ್ ಪ್ರಿಂಟ್ ಸಂವೇದಕದ ಪ್ರದೇಶದ ಮೇಲೂ ಗೀಚಿದರು. ಆದರೆ ಅದು ಸಂವೇದಕದ ಕೆಲಸಕ್ಕೆ ಹಾನಿ ಮಾಡಿಲ್ಲ. ಸ್ಯಾಮ್‍ಸಂಗ್ ಗ್ಯಾಲಕ್ಸಿ 22 ಅಲ್ಟ್ರಾ ಫೋನ್‍ನ ಮುಂಭಾಗ ಮತ್ತು ಹಿಂಭಾಗ Gorilla Glass Victus+ ನಿಂದ ರಕ್ಷಿಸಲ್ಪಟ್ಟಿದೆ. ಅದು ಅಲ್ಯೂಮಿನಿಯಂ ಚೌಕಟ್ಟನ್ನು ಮತ್ತು ಪ್ಲಾಸ್ಟಿಕ್‍ನಿಂದ ಮುಚ್ಚಲ್ಪಟ್ಟ ಆ್ಯಂಟೇನಾ ಪ್ರದೇಶವನ್ನು ಹೊಂದಿದೆ.

    ಇದನ್ನು ಓದಿ: Elon musk ಹಿಂದಿಕ್ಕಿ 7 ನಿಮಿಷಗಳ ಕಾಲ ವಿಶ್ವದ ಶ್ರೀಮಂತನಾದ UK ಮೂಲದ ಯೂಟ್ಯೂಬರ್!

    ವಿಡಿಯೋದಲ್ಲಿ ತೋರಿಸಲಾಗಿರುವ ನೀರಿನ ಪರೀಕ್ಷೆಯನ್ನು, ಕಂಡಾಗ ಈ ಮೊಬೈಲ್‍ಗೆ ನೀರಿನಿಂದಲೂ ಹಾನಿಯಾಗುವುದಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಅದರಲ್ಲಿ ತೋರಿಸಿರುವಂತೆ- ಸ್ಯಾಮ್‍ಸಂಗ್ ಗ್ಯಾಲಕ್ಸಿ 22 ಅಲ್ಟ್ರಾವನ್ನು ಸ್ವಲ್ಪ ಹೊತ್ತು ನೀರಿನಲ್ಲಿ ಮುಳುಗಿಸಲಾಯಿತು. ಆದರೆ ಅದರಿಂದ ಸ್ಮಾರ್ಟ್‌ಫೋನ್‍ನ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ. ಈ ಫೋನ್‍ ಅನ್ನು ಹೊಂದಿರುವವರಿಗೆ ಏನಾದರೂ ಸಂಭವಿಸಿದರೆ, ಈ ಫೋನ್ ಹೇಗಿರುತ್ತದೆ ಎಂಬುವುದರ ಬಗ್ಗೆ ವಿಡಿಯೋ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಗ್ರಾಹಕರು ಪರಿಗಣಿಸುವ ಅಂಶಗಳಲ್ಲಿ, ಸ್ಮಾರ್ಟ್‌ಫೋನ್‍ನ ಬಾಳಿಕೆ ಕೂಡ ಒಂದು, ಏಕೆಂದರೆ ಅವರು ಅದರ ಖರೀದಿಗಾಗಿ ಸುಮಾರು ಒಂದು ಲಕ್ಷ ರೂ.ಗಳನ್ನು ಖರ್ಚು ಮಾಡಿರುತ್ತಾರೆ.

    ಭಾರತದಲ್ಲಿ, ಸ್ಯಾಮ್‍ಸಂಗ್ ಗ್ಯಾಲಕ್ಸಿ ಎಸ್22 ಸರಣಿಗಳ ಬೆಲೆ 72,999 ರೂ. ನಿಂದ ಆರಂಭವಾಗುತ್ತದೆ. ಹೈ-ಎಂಡ್ ಸ್ಯಾಮ್‍ಸಂಗ್ ಗ್ಯಾಲಕ್ಷಿ 22 ಅಲ್ಟ್ರಾ ಫೋನ್‍ನ ಬೆಲೆ 1,09,999 ರೂ. ಆಗಿದ್ದು, ಅದು 12 ಜಿಬಿ ರ‍್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ. ಹೆಚ್ಚಿನ ಸ್ಟೋರೇಜ್ ಬೇಕಿದ್ದವರು, ಅದನ್ನು 16 ಜಿಬಿ ರ‍್ಯಾಮ್ ಮತ್ತು 512 ಜಿಬಿ ಸ್ಟೋರೆಜ್ ಕಾನ್ಫಿಗರೇಶನ್ ಜೊತೆ 1,18,999 ರೂ. ನೀಡಿ ಖರೀದಿಸಬಹುದು.
    First published: