HOME » NEWS » Tech » SAMSUNG GALAXY S21 PLUS CASHBACK OF 10000 ANNOUNCED CHECK NEW PRICE HG

ಸ್ಯಾಮ್​ಸಂಗ್​ Galaxy S21+ ಮೇಲೆ 10 ಸಾವಿರ ರೂ. ಕ್ಯಾಶ್​ಬ್ಯಾಕ್​ ಆಫರ್​!

Samsung Galaxy S21+: ಸ್ಯಾಮ್​ಸಂಗ್​ ಇನ್ನೂ ಕೆಲವು ಆಫರ್​ಗಳನ್ನು ತೆರೆದಿಟ್ಟಿದೆ. ಗ್ರಾಹಕರು ಗ್ಯಾಲಕ್ಸಿ ಎಸ್21 ಅಲ್ಟ್ರಾ, Samsung Galaxy S21+ ಮತ್ತು ಗ್ಯಾಲಕ್ಸಿ S21 ಖರೀದಿಸಿದರೆ 15,990 ರೂ. ಬೆಲೆಯ  ಗ್ಯಾಲಕ್ಸಿ ಬಡ್ಸ್​ ಪ್ರೊ 990 ರೂ.ಗೆ ಸಿಗಲಿದೆ. ಅಥವಾ ಸ್ಯಾಮ್​ಸಂಗ್​ ಶಾಪ್​ ವಾಚರ್​ ಸಿಗಲಿದೆ.

news18-kannada
Updated:June 7, 2021, 2:35 PM IST
ಸ್ಯಾಮ್​ಸಂಗ್​ Galaxy S21+ ಮೇಲೆ 10 ಸಾವಿರ ರೂ. ಕ್ಯಾಶ್​ಬ್ಯಾಕ್​ ಆಫರ್​!
Samsung Galaxy S21+
  • Share this:
ಸ್ಯಾಮ್​ಸಂಗ್ ಕಂಪನಿ ಗ್ರಾಹಕರಿಗಾಗಿ ​ಸೋಮವಾರದಂದು  ಹೊಸ ಸ್ಕೀಮ್​​ವೊಂದನ್ನು ತೆರೆದಿಟ್ಟಿದೆ. ಗ್ಯಾಲಕ್ಸಿ S21+ ಖರೀದಿಸುವ ಗ್ರಾಹಕರಿಗಾಗಿ 10 ಸಾವಿರ ರೂ. ಕ್ಯಾಶ್​ಬ್ಯಾಕ್​​ ಆಫರ್​ ನೀಡಿದೆ. ಅಂದಹಾಗೆಯೇ ಇದರ ನೈಜ್ಯ ಬೆಲೆ 71,999 ರೂ ಆಗಿದೆ.

ಇದರ ಜೊತೆಗೆ ಸ್ಯಾಮ್​ಸಂಗ್​ ಇನ್ನೂ ಕೆಲವು ಆಫರ್​ಗಳನ್ನು ತೆರೆದಿಟ್ಟಿದೆ. ಗ್ರಾಹಕರು ಗ್ಯಾಲಕ್ಸಿ ಎಸ್21 ಅಲ್ಟ್ರಾ, Samsung Galaxy S21+ ಮತ್ತು ಗ್ಯಾಲಕ್ಸಿ S21 ಖರೀದಿಸಿದರೆ 15,990 ರೂ. ಬೆಲೆಯ  ಗ್ಯಾಲಕ್ಸಿ ಬಡ್ಸ್​ ಪ್ರೊ 990 ರೂ.ಗೆ ಸಿಗಲಿದೆ. ಅಥವಾ ಸ್ಯಾಮ್​ಸಂಗ್​ ಶಾಪ್​ ವಾಚರ್​ ಸಿಗಲಿದೆ.

ಗ್ರಾಹಕರು ಗ್ಯಾಲಕ್ಸಿ S21 ಅಲ್ಟ್ರಾ ಅಥವಾ ಎಸ್​21 ಖರೀದಿಸುವ ಯೋಜನೆ ಹಾಕಿಕೊಂಡಿರುವವರಿಗೆ ಸ್ಯಾಮ್​ಸಂಗ್​ 10 ಸಾವಿರ ಮತ್ತು 5 ಸಾವಿರದ ಅಪ್​​ಗ್ರೇಡ್​ ಬೋನಸ್​ ನೀಡುತ್ತಿದೆ. ಅದರ ಜೊತೆಗೆ ಈ ಎರಡು ಸ್ಮಾರ್ಟ್​ಫೋನ್​ಗಳು ಬ್ಯಾಕ್​ ಕ್ಯಾಶ್​​ ಬ್ಯಾಕ್​ ಆಫರ್​ ಅನ್ನು ಒಳಗೊಂಡಿದೆ. 10 ಸಾವಿರ ಮತ್ತು 5 ಸಾವಿರಗೆ ಹೆಚ್​ಡಿಎಫ್​ಸಿ ಬ್ಯಾಂಕ್​ ಕಾರ್ಡ್​ ಮೂಲಕ ಖರೀದಿಸುವ ಅವಕಾಶ ನೀಡಿದೆ. ಅಷ್ಟು ಮಾತ್ರವಲ್ಲದೆ, ಇಎಮ್​ಐ ಆಯ್ಕೆಯಲ್ಲೂ ಖರೀದಿಸಿದೆ.

ಜೂನ್​ 30ರವರೆಗೆ ಈ ಅವಕಾಶವನ್ನು ಸ್ಯಾಮ್​ಸಂಗ್​ ಕಲ್ಪಿಸಿದೆ. ಸ್ಯಾಮ್​ಸಂಗ್​ ಶಾಪ್​, ಸ್ಯಾಮ್​ಸಂಗ್​ ಎಕ್ಸಿಕ್ಲೂಸೀವ್​ ಮಳಿಗೆ, ರಿಟೇಲ್​ ಮಳಿಗೆ ಮತ್ತು ಆನ್​ಲೈನ್​ ಮಳಿಗೆಯಿಂದ ಖರೀದಿಸಲು ಅವಕಾಶ ನೀಡಿದೆ.

Samsung Galaxy S21+ ವಿಶೇಷತೆ:

ಸ್ಯಾಮ್​ಸಂಗ್​ ಗ್ಯಾಲಕ್ಸಿ S21+, ಗ್ಯಾಲಕ್ಸಿ S21 ಅಲ್ಟ್ರಾ ಮತ್ತು ಗ್ಯಾಲಕ್ಸಿ S21 ಸ್ಮಾರ್ಟ್​ಫೊನ್​ಗಳು ಜನವರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿತು. ಗ್ಯಾಲಕ್ಸಿ S21+ ಸ್ಮಾರ್ಟ್​ಫೋನ್​ 6.7 ಇಂಚಿನ ಫುಲ್​ ಹೆಚ್​ಡಿ+ ಡಿಸ್​ಪ್ಲೇ  ಜೊತೆಗೆ ಅಮೊಲ್ಡ್​​ ಪ್ಯಾನೆಲ್​ ಹೊಂದಿದೆ. ಒಕ್ಟಾ-ಕೋರ್​ ಪ್ರೊಸೆಸರ್​ರಲ್ಲಿ ಕಾರ್ಯನಿರ್ವಹಿಸುತ್ತದೆ. 8ಜಿಬಿ ರ್ಯಾಮ್​ ಮತ್ತು 256ಜಿಬಿ ಸ್ಟೊರೇಜ್​ ಆಐ್ಕೆಯಲ್ಲಿ ಸಿಗುತ್ತಿದೆ.

ಕ್ಯಾಮೆರಾ:ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​ + 12 ಮೆಗಾಫಿಕ್ಸೆಲ್​+ 64 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿಗಾಗಿ 10 ಮೆಗಾಫಿಕ್ಸೆಲ್​ ನೀಡಿದೆ. ಇನ್ನು ಧೀರ್ಘ ಕಾಲದ ಬ್ಯಾಟರಿ ಬಾಳಿಕೆಗಾಗಿ 4,800 ಎಮ್​ಎಹೆಚ್​ ಬ್ಯಾಟರಿ ನೀಡಲಾಗಿದೆ.
Published by: Harshith AS
First published: June 7, 2021, 2:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories