HOME » NEWS » Tech » SAMSUNG GALAXY S20 FE 5G WITH SNAPDRAGON 865 SOC LAUNCHED IN INDIA HG

ಸ್ಯಾಮ್​ಸಂಗ್​ ಗ್ಯಾಲಕ್ಸಿ S20 FE 5G ಮೇಲೆ 8 ಸಾವಿರ ರೂ ಕ್ಯಾಶ್​ ಬ್ಯಾಕ್​ ಆಫರ್​!

Samsung Galaxy S20 FE 5G: ನೂತನ ಸ್ಮಾರ್ಟ್​ಫೋನ್​ ಗೊರಿಲ್ಲಾ ಗ್ಲಾಸ್​ 3 ಪ್ರೊಟೆಕ್ಷನ್​ ಹೊಂದಿದೆ. ಕ್ವಾಲ್​ಕ್ಯಾಮ್​ ಸ್ನಾಪ್​​ಡ್ರಾಗನ್​ 865 ಪ್ರೊಸೆಸರ್​ ಇದರಲ್ಲಿದೆ. ಆ್ಯಂಡ್ರಾಯ್ಡ್​ 11 ಬೆಂಬಲ ಪಡೆದಿದೆ.

news18-kannada
Updated:April 1, 2021, 10:17 AM IST
ಸ್ಯಾಮ್​ಸಂಗ್​ ಗ್ಯಾಲಕ್ಸಿ S20 FE 5G ಮೇಲೆ 8 ಸಾವಿರ ರೂ ಕ್ಯಾಶ್​ ಬ್ಯಾಕ್​ ಆಫರ್​!
Samsung Galaxy S20 FE 5G
  • Share this:
ಸ್ಯಾಮ್​ಸಂಗ್​ ತನ್ನ ಬಹುನಿರೀಕ್ಷತ ಗ್ಯಾಲಕ್ಸಿ S20 FE 5G ಸ್ಮಾರ್ಟ್​ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನೂತನ ಫೋನ್​ 6.5 ಇಂಚಿನ ಎಫ್​ಹೆಚ್​ಡಿ+ ಇನ್ಫಿನಿಟಿ-ಒ ಡಿಸ್​ಪ್ಲೇ ಅಳವಡಿಸಿಕೊಂಡಿದೆ. ಗೇಮಿಂಗ್​ ಪ್ರೀಯರಿಗೆ ಇದು ಹೇಳಿ ಮಾಡಿಸಿದಂತಿದೆ.

ನೂತನ ಸ್ಮಾರ್ಟ್​ಫೋನ್​ ಗೊರಿಲ್ಲಾ ಗ್ಲಾಸ್​ 3 ಪ್ರೊಟೆಕ್ಷನ್​ ಹೊಂದಿದೆ. ಕ್ವಾಲ್​ಕ್ಯಾಮ್​ ಸ್ನಾಪ್​​ಡ್ರಾಗನ್​ 865 ಪ್ರೊಸೆಸರ್​ ಇದರಲ್ಲಿದೆ. ಆ್ಯಂಡ್ರಾಯ್ಡ್​ 11 ಬೆಂಬಲ ಪಡೆದಿದೆ.

Samsung Galaxy S20 FE 5G ಸ್ಮಾರ್ಟ್​ಫೋನ್​ ತ್ರಿವತಿ ಕ್ಯಾಮೆರ ಹೊಂದಿದ್ದು, ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​ ಸೆನ್ಸಾರ್​, 2ನೇ ಕ್ಯಾಮೆರಾ 12 ಮೆಗಾಫಿಕ್ಸೆಲ್​ ಅಲ್ಟ್ರಾ ಆ್ಯಂಗಲ್​ ಲೆನ್ಸ್​ ಮತ್ತು ಮೂರನೇ ಕ್ಯಾಮೆರಾ 8 ಮೆಗಾಫಿಕ್ಸೆಲ್​ ಟೆಲಿಫೋಟೋ ಲೆನ್ಸ್​ ಹೊಂದಿದೆ. ಇನ್ನು ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮರಾ ಅಳವಡಿಸಲಾಗಿದೆ.

ಗ್ರಾಹಕರಿಗಾಗಿ 8GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಧೀರ್ಘಕಾಲದ ಬ್ಯಾಟರಿಗಾಗಿ ಈ ಸ್ಮಾರ್ಟ್​ಫೋನ್​ನಲ್ಲಿ 4,500mAh​ ಬ್ಯಾಟರಿ ಅಳವಡಿಸಲಾಗಿದೆ. 15 ವ್ಯಾಟ್​ ವೇಗದ ಚಾರ್ಜಿಂಗ್​ ಸೌಲಭ್ಯ  ನೀಡಲಾಗಿದೆ. ಫಿಂಗರ್​ಪ್ರಿಂಟ್​, ವೈ_ಫೈ, ಬ್ಲೂಟೂತ್​, ಯುಎಸ್​ಬಿ-ಟೈಪ್​ ಸಿ ಪೋರ್ಟ್​ ನೀಡಲಾಗಿದೆ. ಅದರ ಜೊತೆಗೆ ಅಕ್ಸೆಲೆರೊಮೀಟರ್​, ಆಂಬಿಯಂಟ್​ ಲೈಟ್​ ಸೆನ್ಸರ್​, ಗೈರೊಸ್ಕೋಪ್​, ಹಾಲ್​ ಸೆನ್ಸರ್​ ಹೊಂದಿದೆ.

Galaxy S20 FE 5G ಸ್ಮಾರ್ಟ್​ಫೊನ್​ ಬೆಲೆ 55,999 ರೂ ಆಗಿದೆ. ನೂತನ ಸ್ಮಾರ್ಟ್​ಫೋನ್ ಮೇಲೆ 8 ಸಾವಿರ ಕ್ಯಾಶ್​ಬ್ಯಾಕ್​ ಆಫರ್​ ನೀಡುತ್ತಿದೆ. ಗ್ರಾಹಕರಿಗೆ ಸ್ಯಾಮ್​ಸಂಗ್​ ಎಕ್ಸ್​​ಕ್ಲೂಸಿವ್​ ಸ್ಟೋರ್​, ಅಮೆಜಾನ್​ ಮತ್ತು ರಿಟೇಲ್​ ಸ್ಟೋರ್​ಗಳಲ್ಲಿ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.
Published by: Harshith AS
First published: April 1, 2021, 10:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories