ಸ್ಯಾಮ್​ಸಂಗ್​ ಗ್ಯಾಲಕ್ಸಿ S10: ವಿಶ್ವದ ಮೊದಲ ಸಾವಿರ GB ಮೊಬೈಲ್

ಈ ಹಿಂದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9, ಗ್ಯಾಲಕ್ಸಿ ಎಸ್9 ಪ್ಲಸ್ ಮತ್ತು ನೋಟ್ 9 ಮಾಡೆಲ್​ಗಳಲ್ಲಿ ಗರಿಷ್ಠ 512GB ಸ್ಟೋರೆಜ್ ವ್ಯವಸ್ಥೆಗಳನ್ನು ಪರಿಚಯಿಸಿತ್ತು.

zahir | news18
Updated:January 31, 2019, 4:36 PM IST
ಸ್ಯಾಮ್​ಸಂಗ್​ ಗ್ಯಾಲಕ್ಸಿ S10: ವಿಶ್ವದ ಮೊದಲ ಸಾವಿರ GB ಮೊಬೈಲ್
@www.youtube.com
zahir | news18
Updated: January 31, 2019, 4:36 PM IST
ಸ್ಯಾಮ್​ಸಂಗ್ ಕಂಪೆನಿಯು ಮೊಬೈಲ್​ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಛಾಪು ಮೂಡಿಸಲು ಹೊಸ ಮಾದರಿಯ ಗ್ಯಾಲಕ್ಸಿ S10 ಸ್ಮಾರ್ಟ್​ಫೋನ್​ ಬಿಡುಗಡೆಗೆ ಸರ್ವ ತಯಾರಿಯಲ್ಲಿದೆ. ಮುಂದಿನ ಪೀಳಿಗೆಯನ್ನು ಗಮನದಲ್ಲಿರಿಸಿ ನಿರ್ಮಿಸಲಾಗುತ್ತಿರುವ ಈ ಮೊಬೈಲ್​ನಲ್ಲಿ 1TB ಸ್ಟೊರೇಜ್​ ಸಾಮರ್ಥ್ಯ ನೀಡುತ್ತಿರುವುದು ವಿಶೇಷ. ಈ ಮೂಲಕ ಅತಿ ಹೆಚ್ಚು ಶೇಖರಣಾ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್​ಫೋನ್ ಎಂಬ ಹೆಗ್ಗಳಿಕೆ ಸ್ಯಾಮ್​ಸಂಗ್ ಗ್ಯಾಲಕ್ಸಿ S10 ಪಾಲಾಗಲಿದೆ. ಕೆಲ ಮೂಲಗಳ ಪ್ರಕಾರ, ಜನವರಿ 25 ರಿಂದ ಸ್ಯಾಮ್​ಸಂಗ್ ಕಂಪೆನಿ​ ಎಸ್​10 ಮೊಬೈಲ್​ಗಳ ಉತ್ಪಾದನೆಯನ್ನು ಆರಂಭಿಸಿದ್ದು, ಫೆಬ್ರವರಿ 20 ರಂದು ಸ್ಯಾನ್​ ಫ್ರಾನ್ಸಿಸ್ಕೊನಲ್ಲಿ ನೂತನ ಗ್ಯಾಲಕ್ಸಿ  ಸಿರೀಸ್​ನ ಮೊಬೈಲ್​ ಅನ್ನು ಬಿಡುಗಡೆ ಮಾಡಲಿದೆ.

ಹೊಸ ಗ್ಯಾಲಕ್ಸಿ 5G?
ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​10 ಸ್ಮಾರ್ಟ್​ಫೋನ್​ ಈ ಹಿಂದೊಮ್ಮೆ ಸುದ್ದಿಯಾಗಿತ್ತು. ಆ ಬಳಿಕ ಕಂಪೆನಿ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಪ್ರಕಟವಾಗಿರಲಿಲ್ಲ. ಆದರೀಗ ಸ್ಯಾಮ್​ಸಂಗ್ ವಿಯೆಟ್ನಾಂ ಘಟಕದಲ್ಲಿ ಗ್ಯಾಲಕ್ಸಿ ಎಸ್ 10, ಎಸ್ 10 +, ಮತ್ತು ಎಸ್ 10 ಸ್ಮಾರ್ಟ್​ಫೋನ್​ಗಳನ್ನು ಉತ್ಪಾದಿಸಲಾಗುತ್ತಿದೆ. ಹಾಗೆಯೇ ಕೊರಿಯಾದ ಸ್ಯಾಮ್​ಸಂಗ್​ ಗುಮಿ ಘಟಕದಲ್ಲಿ ಗ್ಯಾಲೆಕ್ಸಿಯ S10ನ 5 ಜಿ ತಯಾರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸ್ಯಾಮ್​ಸಂಗ್​ S10 ಮೂಲಕ 5G ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಈ ಕಾರಣದಿಂದ ಗ್ಯಾಲಕ್ಸಿ ಎಸ್​10 ಸ್ಮಾರ್ಟ್​ಫೋನ್​ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಸುದ್ದಿಗಳು ಕೇಳಿ ಬಂದಿದೆ.

ಇದನ್ನೂ ಓದಿ: ಮಾನವೀಯತೆ ಮೆರೆದ ನವೀನ್ ಸಜ್ಜು: ಯುವ ಗಾಯಕ ಎಲ್ಲೂ ಕಾಣಿಸದಿರಲು ಇಲ್ಲಿದೆ ಕಾರಣ!

ಸ್ಯಾಮ್​ಸಂಗ್​ ಗ್ಯಾಲಕ್ಸಿ S10- 1TB
ಸ್ಯಾಮ್​ಸಂಗ್ ಪರಿಚಯಿಸಲಿರುವ ಹೊಸ ಮೊಬೈಲ್​ ವಿಶ್ವದ ಮೊದಲ 1TB  ಯೂನಿವರ್ಸಲ್ ಫ್ಲ್ಯಾಶ್ ಸ್ಟೋರೇಜ್ (ಇಯುಎಫ್ಎಸ್) 2.1 ​ ಹೊಂದಿರುವ ಸ್ಮಾರ್ಟ್​ಫೋನ್​ ಆಗಲಿದೆ. 1024GB ಶೇಖರಣಾ ಸಾಮರ್ಥ್ಯ ಈ ಮೊಬೈಲ್​ನಲ್ಲಿರಲಿದ್ದು, ಈ ಮೂಲಕ ಫೋನ್​ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಸ್ಯಾಮ್​ಸಂಗ್​ ಸನ್ನದ್ಧವಾಗಿದೆ. ಈ ಹಿಂದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್9, ಗ್ಯಾಲಕ್ಸಿ ಎಸ್9 ಪ್ಲಸ್ ಮತ್ತು ನೋಟ್ 9 ಮಾಡೆಲ್​ಗಳಲ್ಲಿ ಗರಿಷ್ಠ 512GB ಸ್ಟೋರೆಜ್ ವ್ಯವಸ್ಥೆಗಳನ್ನು ಪರಿಚಯಿಸಿತ್ತು. ಮುಂಬರುವ ಎಲ್ಲ S10 ಸಿರೀಸ್​ನಲ್ಲೂ 1TB ಸ್ಟೊರೇಜ್​ ಸಾಮರ್ಥ್ಯ ನೀಡಲು ಸ್ಯಾಮ್​ಸಂಗ್ ನಿರ್ಧರಿಸಿದೆ. ಈ ಸ್ಮಾರ್ಟ್​ಫೋನ್​ಗಳ ಬೆಲೆಯು ಭಾರತದಲ್ಲಿ 70 ಸಾವಿರದಿಂದ 1 ಲಕ್ಷದೊಳಗಿರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಹಾನರ್​ ಡೇಸ್​ ಸೇಲ್: 10 ಸಾವಿರದ ಸ್ಮಾರ್ಟ್​ಫೋನ್​ಗೆ​ ಕೇವಲ 283 ರೂ!
Loading...

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ