ಇಂದು 12 ಗಂಟೆಗೆ ಬಿಡುಗಡೆಯಾಗಲಿದೆ ಈ ಮೊಬೈಲ್​


Updated:August 6, 2018, 10:31 AM IST
ಇಂದು 12 ಗಂಟೆಗೆ ಬಿಡುಗಡೆಯಾಗಲಿದೆ ಈ ಮೊಬೈಲ್​

Updated: August 6, 2018, 10:31 AM IST
ಕಳೆದ ವಾರ ಬಿಡುಗಡೆಯಾಗಿದ್ದ ಸ್ಯಾಮ್ಸಂಗ್​ ಗೆಲಾಕ್ಸಿ ಆನ್​8 ಮೊಬೈಲ್​ ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್​ಕಾರ್ಟ್​ ಮತ್ತು ಸ್ಯಾಮ್ಸಂಗ್​ ಸ್ಟೋರ್​ನಲ್ಲಿ ಮಾರಾಟಕ್ಕಿದೆ.

ಈಗಾಗಲೇ 5-6 ಬಜೆಟ್​ ಹಾಗು ಮಧ್ಯಮ ಕ್ರಮಾಂಕದ ಬೆಲೆಯ ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವ ಸ್ಯಾಮ್ಸಂಗ್​ ಮತ್ತೊಂದು ಬಜೆಟ್​ ಮೊಬೈಲ್​ ಗೆಲಾಕ್ಸಿ ಆನ್​8ನ್ನು ಪರಿಚಯಿಸಿ, 16,990ಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿತ್ತು.

ಆನ್​8ನ ಮೂಲ ಬೆಲೆ 17,990 ಆಗಿದ್ದು, ಸಾಕಷ್ಟು ಲಾಂಚ್​ ಆಫರ್​ ಕೂಡಾ ಈ ಮೊಬೈಲ್​ ಖರೀದಿದಾರರಿಗೆ ಲಭಿಸುತ್ತದೆ. ರಿಲಯನ್ಸ್​ ಜಿಯೋದಿಂದ ಡಬಲ್​ ಡೇಟಾ, ಹಾಗೂ 2,750 ರೂ ವರೆಗಿನ ಕ್ಯಾಶ್​ ಬ್ಯಾಕ್​ ಆಫರ್​ ಸಿಗಲಿದೆ. ಇನ್ನು ಆ್ಯಕ್ಸಿಸ್​ ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಬಳಕೇದಾರರಿಗೆ 400 ರೂ. ಕ್ಯಾಶ್​ ಬ್ಯಾಕ್​ ದೊರಕಲಿದೆ.

ಆನ್​8 ಮೊಬೈಲ್​ ವಿಶೇಷತೆಗಳು

ಹಿಂಭಾಗದಲ್ಲಿ (16+5 ಎಂಪಿ)ಎರಡು ಕ್ಯಾಮೆರಾ ಹೊಂದಿದ ಮೊಬೈಲ್​ 6 ಇಂಚುಗಳ ಅಮೊಲೆಡ್​ ಡಿಸ್ಪ್ಲೇಯಿಂದ ಕೂಡಿದೆ. ಬೆಜಟ್​ ಮೊಬೈಲ್​ಗಳಿಗೆ ಸಾಮಾನ್ಯವಾಗಿ ಬಳಕೆಯಾಗುವ ಸ್ನಾಪ್​ಡ್ರಾಗನ್​ 450 ಪ್ರೊಸೆಸರ್​ ಈ ಮೊಬೈಲ್​ನಲ್ಲಿ ಅಳವಡಿಸಲಾಗಿದೆ. 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿರುವ ಆನ್​ 8 ಮೊಬೈಲ್​ 256GB ವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.

ಆ್ಯಂಡ್ರಾಯ್ಡ್​ 8.0 ಒರಿಯೋ ಒಎಸ್​ನಿಂದ ಕಾರ್ಯನಿರ್ವಹಿಸಲಿರುವ ಈ ಮೊಬೈಲ್​ಗೆ, ಚಾಟ್​ ಓವರ್​ ವಿಡಿಯೋ ಫೀಚರ್​ ಕೂಡಾ ಹೊಂದಿದೆ. 3,500mAh ಬ್ಯಾಟರಿ ವ್ಯವಸ್ಥೆಯಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ