ಬಂದೇ ಬಿಡ್ತು ಸ್ಯಾಮ್ಸಂಗ್​ನವರ ಎರಡು ಕ್ಯಾಮೆರಾದ ಮೊಬೈಲ್​!


Updated:July 31, 2018, 2:06 PM IST
ಬಂದೇ ಬಿಡ್ತು ಸ್ಯಾಮ್ಸಂಗ್​ನವರ ಎರಡು ಕ್ಯಾಮೆರಾದ ಮೊಬೈಲ್​!

Updated: July 31, 2018, 2:06 PM IST
ನವದೆಹಲಿ: ಶಿಯೋಮಿಯ ಸೇರಿದಂತೆ ಇತರೇ ಚೀನಾ ಕಂಪನಿಗಳ ವಿರುದ್ಧ ತೊಡೆತಟ್ಟಿರುವ ಸ್ಯಾಮ್ಸಂಗ್​ ಸಂಸ್ಥೆ ಬಜೆಟ್​ ಮೊಬೈಲ್​ನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ತೀರ್ಮಾನಿಸಿದೆ.

ಈಗಾಗಲೇ 5-6 ಬಜೆಟ್​ ಹಾಗು ಮಧ್ಯಮ ಕ್ರಮಾಂಕದ ಬೆಲೆಯ ಮೊಬೈಲನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವ ಸ್ಯಾಮ್ಸಂಗ್​ ಇದೀಗ ಗೆಲಾಕ್ಸಿ ಆನ್​8ನ್ನು ಪರಿಚಯಿಸಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ ಉತ್ತರ ಕೋರಿಯಾದ ಮೊಬೈಲ್​ ದೈತ್ಯ 18,000 ರೂ. ಬಜೆಟ್​ನಲ್ಲಿ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಹೊಂದಿದ ಮೊಬೈಲ್​ನ್ನು ಮಾರುಕಟ್ಟೆಗೆ ಬಿಡಲಿದ್ದು, ಈ ಮೊಬೈಲ್​ 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿದೆ ಎನ್ನಲಾಗಿದೆ. ಈ ಮೆಮೊರಿ ವಿಸ್ತರಿಸಲೂ ಅವಕಾಶ ನೀಡಲಾಗಿದೆ.

ಇನ್ನು ಮೊಬೈಲ್​ನ ಪ್ರೊಸೆಸರ್​ ಹಾಗು ಆಪರೇಟಿಂಗ್​ ವಿಚಾರಕ್ಕೆ ಬಂದರೆ, ಆನ್​ 8 ಸ್ನಾಪ್​ಡ್ರಾಗನ್​ ಪ್ರೊಸೆಸರ್​ ಹೊಂದಿದ್ದು, ಫ್ಲಿಪ್​ಕಾರ್ಟ್​ನಲ್ಲಿ ಎಕ್ಸ್ಲೂಸಿವ್​ ಮಾರಟಕ್ಕೆ ಬಿಡಲಾಗುತ್ತದೆ ಎನ್ನಲಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಈ ಮೊಬೈಲ್​ ಶಿಯೋಮಿಯವರ ರೆಡ್​ಮಿ ನೋಟ್​ 5 ಪ್ರೊ , ವಿವೋ ವಿ9, ನೋಕಿಯಾ 6.1 ಹಾಗು ಒಪ್ಪೋ ಎಫ್​7 ಮೊಬೈಲ್​ಗಳಿಗೆ ಪ್ರತಿಸ್ಪರ್ಧೆಯನ್ನು ನೀಡಲಿದೆ.

ಕೆಲ ದಿನಗಳ ಹಿಂದೆ ಸ್ಯಾಮ್ಸಂಗ್​ ಗೆಲಾಕ್ಸಿ ಆನ್​6 ಮೊಬೈಲ್​ನ್ನು ಬಿಡುಗಡೆ ಮಾಡಿತ್ತು, 14,400 ರೂ, ಬಜೆಟ್​ನಲ್ಲಿ ಲಭ್ಯವಿರುವ ಈ ಮೊಬೈಲ್​ 5.6 ಇಂಚುಗಳ ಹೆಚ್​ಡಿ ಪ್ಲಸ್​ ಇನ್​ಫಿನಿಟಿ ಡಿಸ್​​ಪ್ಲೇ, ಆ್ಯಂಡ್ರಾಯ್ಡ್​ 8.0 ಓರಿಯೋ ಆಪರೇಟಿಂಗ್​ ಸಿಸ್ಟಂ, 13 ಎಂಪಿ ಕ್ಯಾಮೆರಾ, ಹಾಗು 8 ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...