ಕೈಗೆಟಕುವ ದರದಲ್ಲಿ ಬಿಡುಗಡೆಯಾಯ್ತು Galaxy On Nxt, ಕ್ಯಾಮರಾವೇ ಇದರ ಪ್ಲಸ್ ಪಾಯಿಂಟ್


Updated:January 3, 2018, 1:59 PM IST
ಕೈಗೆಟಕುವ ದರದಲ್ಲಿ ಬಿಡುಗಡೆಯಾಯ್ತು Galaxy On Nxt, ಕ್ಯಾಮರಾವೇ ಇದರ ಪ್ಲಸ್ ಪಾಯಿಂಟ್

Updated: January 3, 2018, 1:59 PM IST
-ನ್ಯೂಸ್ 18 ಕನ್ನಡ

ಸ್ಯಾಮ್​ಸಂಗ್ ಭಾರತದಲ್ಲಿ ತನ್ನ ನುತನ ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ಫೋನ್ ಸ್ಯಾಮ್ಸಂಗ್​ನ Galaxy On Nxt ಮಾಡೆಲ್​ನ ನೂತನ ವೇರಿಯೆಂಟ್ ಆಗಿದೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪೆನಿ 32ಜಿಬಿ ಸ್ಟೋರೇಜ್ ಹೊಂದಿರುವ, ತನ್ನ Galaxy On Nxt ಮಾಡೆಲ್​ನ್ನು 2016ರಲ್ಲಿ ಭಅರತದಲ್ಲಿ ಬಿಡುಗಡೆಗೊಳಿಸಿತ್ತು. ಈಗ ಈ ಕಂಪೆನಿ ಭಾರತದಲ್ಲಿ ಇದೇ ಫೋನ್​ನ 16ಜಿಬಿಯ ವೇರಿಯೆಂಟ್ ಬಿಡುಗಡೆಗೊಳಿಸಿದೆ.

ಇದಕ್ಕೂ ಮೊದಲು ಈ ನೂತನ ಫೋನ್ ಬೆಲೆ 10,999 ಎನ್ನಲಾಗುತ್ತಿತ್ತು. ಆದರೀಗ ಫ್ಲಿಪ್​ಕಾರ್ಟ್​ನಲ್ಲಿ ಗ್ರಾಹಕರು ಇದನ್ನು ಕೇವಲ 9,999 ರೂಪಾಯಿಗೆ ಖರೀದಿಸಬಹುದಾಗಿದೆ.

ಮೊದಲಿಗಿಂತ ಎಷ್ಟು ಬದಲಾವಣೆಗಳಾಗಿವೆ?

ಈ ಸ್ಮಾರ್ಟ್​ಫೋನ್​ನ ಫೀಚರ್ಸ್​, ಮೊದಲಿನ ಫೋನ್​ನಲ್ಲಿರುವಂತಹುದ್ದೇ ಆಗಿದೆ. ಇದರಲ್ಲೂ 5.5 ಇಂಚಿನ HD ಡಿಸ್ಪ್ಲೇ ನೀಡಲಾಗುತ್ತದೆ. ಆದರೆ ಸ್ಟೋರೇಜ್ 15 ಜಿಬಿ ಹೊಂದಿದೆ ಎನ್ನುವುದಷ್ಟೇ ಇವೆರಡರಲ್ಲಿರುವ ವ್ಯತ್ಯಾಸವಾಗಿದೆ. ಇದು 1.6 ಗೀಗಾ ಬೈಟ್ ಆಕ್ಟೋಕೋರ್ ಎಕ್ಸಿನೋಸ್ 7078 ಪ್ರೊಸೆಸರ್, 3 ಜಿಬಿ ರಾಮ್ ಹೊಂದಿದೆ. ಇದರಲ್ಲಿರುವ ಪ್ಲಸ್ ಪಾಯಿಂಟ್ ಹಾಗೂ ಆಕರ್ಷಿಸುವ ವಿಚಾರವೆಂದರೆ 13 ಮೆಗಾ ಪಿಕ್ಸೆಲ್​ನ ರೇರ್ ಕ್ಯಾಮರಾ ಹಾಗೂ 8 ಮೆಗಾ ಪಿಕ್ಸೆಲ್​ನ ಫ್ರಂಟ್ ಕ್ಯಾಮರಾ
First published:January 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...