ಒಂದು ಕೆಜಿ ಚಿನ್ನದ ಈ ಸ್ಯಾಮ್ಸಂಗ್​ ಮೊಬೈಲ್​ನ ಬೆಲೆ ಎಷ್ಟು


Updated:August 19, 2018, 12:46 PM IST
ಒಂದು ಕೆಜಿ ಚಿನ್ನದ ಈ ಸ್ಯಾಮ್ಸಂಗ್​ ಮೊಬೈಲ್​ನ ಬೆಲೆ ಎಷ್ಟು
image: www.digit.in

Updated: August 19, 2018, 12:46 PM IST
ದಕ್ಷಿಣ ಕೋರಿಯಾದ ಮೊಬೈಲ್​ ಕಂಪನಿ ಸ್ಯಾಮ್ಸಂಗ್​ ಕೆಲ ದಿನಗಳ ಹಿಂದೆ ನೂತನ ನೋಟ್​ 9 ಮೊಬೈಲ್​ನ್ನು ನ್ಯೂಯಾರ್ಕ್​ನಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಚಿನ್ನ ಪ್ರಿಯರಿಗಾಗಿಯೇ ಈ ಮೊಬೈಲ್​ ಒಂದು ಕೆಜಿ ಚಿನ್ನ ಲೇಪಿತಗೊಂಡ ಹೊಸ ಲುಕ್​ನಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಕಪ್ಪು, ತಾಮ್ರ ಬಣ್ಣ, ನೇರಳೆ ಮತ್ತು ನೀಲಿ ಬಣ್ಣದಿಂದ ಈ ಮೊಬೈಲ್​ನ್ನು ಸ್ಯಾಮ್ಸಂಗ್​ ಸಂಸ್ಥೆ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ, ಇದರೊಂದಿಗೆ ಕಳೆದ ಜೂನ್​ನಲ್ಲಿ ಸ್ಯಾಮ್ಸಂಗ್​ ಗೆಲಾಕ್ಸಿ S9+ ಮೊಬೈಲ್​ ಕೂಡ ಬಿಡುಗಡೆ ಮಾಡಿತ್ತು. ಸಂಸ್ಥೆಯ ಅತ್ಯಂತ ಸಕ್ಸಸ್​ಫುಲ್​ ಮಾರಾಟವಾದ ಮೊಬೈಲ್​ಗಳಲ್ಲಿ ಇದು ಕೂಡಾ ಒಂದು.

image: www.digit.in


ಈ ಎಲ್ಲಾ ಕಾರಣದಿಂದ ರಷ್ಯಾದ ಸೇವಿಯರ್​ ಎಂಬ ಸಂಸ್ಥೆ ನೋಟ್​ 9 ಮೊಬೈಲ್​ನ ಮತ್ತೊಂದು ಹೊಸ ಆವೃತ್ತಿಯನ್ನು ಒಂದು ಕೆಜಿ ಚಿನ್ನ ಲೇಪನವೊಂದಿಗೆ ಬಿಡುಗಡೆ ಮಾಡಲು ತೀರ್ಮಾನಿಸಿದೆ. ನೋಟ್​ 9 ಮೊಬೈಲ್​ನ ಹಿಂಬಾಗದ ಪ್ಯಾನೆಲ್​ಗೆ ಒಂದು ಕೆಜಿ ‘Fine Gold 999.9’ ಚಿನ್ನಲೇಪನ ಮಾಡಲಾಗಿದೆ. ಈ ಮೊಬೈಲ್​ಗೆ RUB3.87 ಮಿಲಿಯನ್​ ಬೆಲೆ ತಗುಲಲಿದೆ. ಭಾರತೀಯ ರುಪಾಯಿಯಲ್ಲಿ ಹೇಳುವುದಾದರೆ ಈ ಮೊಬೈಲ್​ಗೆ ಸುಮಾರು 40.6 ಲಕ್ಷ ರೂ. ಎಂದು ಟೈಮ್ಸ್​ ವರದಿ ಮಾಡಿದೆ.

ಇನ್ನು ಗೆಲಾಕ್ಸಿ ನೋಟ್​9 ಮೊಬೈಲ್​ ವಿಶೇಷತೆಗಳ ಕುರಿತು ಹೇಳುವುದಾದರೆ, 6.4 ಇಂಚುಗಳ ಡಿಸ್​​ಪ್ಲೇ ಹೊಂದಿರುವ ಈ ಮೊಬೈಲ್​, 2960x1440 ಪಿಕ್ಸೆಲ್​ಗಳ ಹೆಚ್​ಡಿ ಪ್ಲಸ್​ ಡಿಸ್​ಪ್ಲೇ ರೆಸಲ್ಯೂಶನ್​ ಹೊಂದಿದೆ. ಇನ್ನು ಪ್ರೊಸೆಸರ್​ ವಿಚಾರಕ್ಕೆ ಬರುವುದಾದರೆ ಒಕ್ಟಾಕೋರ್​ ಎಕ್ಸಿನೋಸ್​ 9810 ಪ್ರೊಸೆಸರ್​ ಅಳವಡಿಸಲಾಗಿದೆ. ಅಲ್ಲದೇ ಆ್ಯಂಡ್ರಾಯ್ಡ್​ 8.1 ಒರಿಯೋ ಆಪರೇಟಿಂಗ್ ಸಿಸ್ಟಂನಿಂದ ಕಾರ್ಯನಿರ್ವಹಿಸಲಿದೆ.

ನೋಟ್​9 ಮೊಬೈಲ್​ನಲ್ಲಿ 6GB ಮತ್ತು 8GB RAM ಹೊಂದಿದ್ದು , 128GB ಮತ್ತು 256GB ಆಂತರಿಕ ಮೆಮೊರಿ ಅಳವಡಿಸಲಾಗಿದೆ. ಕ್ಯಾಮೆರಾ ಪ್ರಿಯರಿಗಾಗಿ,12ಎಂಪಿ ವೈಡ್​ ಆ್ಯಂಗಲ್​ ಮತ್ತು 12 ಎಂಪಿ ಸೆಕಂಡರಿ ಕ್ಯಾಮೆರಾ ನೀಡಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 8 ಎಂಪಿ ಫ್ರಂಟ್​ ಕ್ಯಾಮೆರಾ ಬಳಕೆ ಮಾಡಲಾಗಿದೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ