ಸ್ಯಾಮ್ಸಂಗ್​ ನೋಟ್​ 9 ಚಿತ್ರ ಲೀಕ್​!


Updated:June 8, 2018, 12:56 PM IST
ಸ್ಯಾಮ್ಸಂಗ್​ ನೋಟ್​ 9 ಚಿತ್ರ ಲೀಕ್​!

Updated: June 8, 2018, 12:56 PM IST
ನ್ಯೂಯಾರ್ಕ್: ಸ್ಯಾಮ್ಸಂಗ್ ಮೊಬೈಲ್​ನ ಬಹು ನಿರೀಕ್ಷಿತ ಮೊಬೈಲ್​ಗಳಲ್ಲಿ ಒಂದಾಗಿರುವ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್​ 9 ಮೊಬೈಲ್​ನ ವೀಡಿಯೊ ಹಾಗೂ ಚಿತ್ರಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿದ್ದು ವೈರಲ್​ ಆಗಿದೆ.

ಇದೇ ಆಗಸ್ಟ್​ನಲ್ಲಿ ಸ್ಯಾಮ್ಸಂಗ್ ನೋಟ್​ 9 ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ವರದಿಯಾಗಿತ್ತು, ಈ ನಡುವೆ ಎಸ್​ 9 ಮೊಬೈಲ್​ ಮಾರುಕಟ್ಟೆಗೆ ಬಂದರೂ ಭಾರತೀಯ ಸ್ಮಾರ್ಟ್​ಫೋನ್​ ಮಾರ್ಕೆಟ್​ನಲ್ಲಿ ಅಷ್ಟೊಂದು ಮಹತ್ತರ ಬದಲಾವಣೆಯನ್ನೇನೂ ಕಾಣಿರಲಿಲ್ಲ. ಈ ನಡುವೆ ಕಂಪನಿಯ ವರ್ಷದ ಮಹತ್ತರ ಪ್ರಾಜೆಕ್ಟ್​ನಲ್ಲಿ ಒಂದಾದ ನೋಟ್​ 9 ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ ಬೆನ್ನಲ್ಲೇ ಇದರ ಚಿತ್ರಗಳು ಲೀಕ್​ ಆಗಿವೆ.

3D ಡಿಗ್ರಿ ವೀಡಿಯೋ ವ್ಯವಸ್ಥೆಯನ್ನು ನೂತನವಾಗಿ ಮೊಬೈಲ್​ಗಳಲ್ಲಿ ಅಳವಡಿಸಿರುವದಾಗಿ ಹೇಳಿಕೊಂಡಿದ್ದ ಬ್ಲೂಂಬರ್ಗ್​ ವರದಿ ನಿಜವಾಗಿದ್ದು, ಈಗಿರು ತುಣುಕುಗಳ ಪ್ರಕಾರ ನೋಟ್​ 9 ಮೊಬೈಲ್​ 3D ಕ್ಯಾಮೆರಾ ವ್ಯವಸ್ಥೆಯೊಂದಿಗೆ 4K renders ಸೌಲಭ್ಯವನ್ನೂ ಒಳಗೊಂಡಿರುತ್ತದೆ. ಉಳಿದಂತೆ ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ್ದ ಎಸ್​ 8 ಮೊಬೈಲ್​ ಮಾದರಿಯಲ್ಲೇ ಈ ಮೊಬೈಲ್​ ಕಾಣುತ್ತಿದೆ. ಅಲ್ಲದೇ ಮಾಹಿತಿಗಳ ಪ್ರಕಾರ ನೋಟ್​ 9 8GB RAM and 512GB ಆಂತರಿಕ ಮೆಮೋರಿ ವ್ಯವಸ್ಥೆ ಹೊಂದಿದೆ ಎಂದು 91ಮೊಬೈಲ್ಸ್​.ಕಾಂ ವರದಿ ಮಾಡಿದೆ.


Loading...

ನೋಟ್​ 9 ಮೊಬೈಲ್​ ಕುರಿತು ಟ್ವಿಟರ್​ ಖಾತೆ​ ಸ್ಟೀವ್​ ಹೆಚ್​. ನಿಂದ ಮಾಹಿತಿ ಸೋರಿಕೆಯಾಗಿದ್ದು, ಈ ಖಾತೆ 91ಮೊಬೈಲ್ಸ್​.ಕಾಂ ಪಾಲುದಾರಿಕೆ ಹೊಂದಿದೆ. ಇದರ ವರದಿ ಅನ್ವಯ ನೋಟ್​ 9 ಮೊಬೈಲ್​ 6.3 ಇಂಚ್​ಗಳ ಡಿಸ್​ಪ್ಲೇಯೊಂದಿಗೆ ಕಡಿಮೆ ಬೆಳಕಿನ ಸಮಯದಲ್ಲೀ ಉತ್ತಮ ಕ್ಯಾಮೆರಾ ನಿರ್ವಹಣೆಯ ಸೌಲಭ್ಯವನ್ನು ಅಳವಡಿಸಲಾಗಿದೆ. ಪ್ರೊಸೆಸರ್​ ವಿಚಾರದಲ್ಲಿ Samsung Exynos 810 ಅಥವಾ Qualcomm Snapdragon 845 SoC ಪ್ರೊಸೆಸರ್​​ ಬಳಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.
First published:June 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ