ಸ್ಯಾಮ್ಸಂಗ್​ ಗೆಲಾಕ್ಸಿ ನೋಟ್​ 9 ಬೆಲೆ, ಇತರೇ ವಿಶೇಷತೆಗಳು


Updated:August 23, 2018, 5:06 PM IST
ಸ್ಯಾಮ್ಸಂಗ್​ ಗೆಲಾಕ್ಸಿ ನೋಟ್​ 9 ಬೆಲೆ, ಇತರೇ ವಿಶೇಷತೆಗಳು

Updated: August 23, 2018, 5:06 PM IST
ಸ್ಯಾಮ್ಸಂಗ್​ ತನ್ನ ನೂತನ ಗೆಲಾಕ್ಸಿ ನೋಟ್​ ಮೊಬೈಲ್​ನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಇದೇ ಮೊದಲ ಬಾರಿಗೆ ನೋಯ್ಡಾದ ಸ್ಯಾಮ್ಸಂಗ್​ ಮೊಬೈಲ್​ ಉತ್ಪಾದನಾ ಘಟಕದಲ್ಲಿ ತಯಾರಾದ ಮೊಬೈಲ್​ ಇದಾಗಿದೆ.

ಇದೇ ತಿಂಗಳ ಆರಂಭದಲ್ಲಿ ಗೆಲಾಕ್ಸಿ ನೋಟ್​ 9 ಕುರಿತು ಮುಂಗಡ ಬುಕ್ಕಿಂಗ್​ ಆರಂಭ ಮಾಡಲಾಗಿತ್ತು. ಇದೀಗ ಈ ಮೊಬೈಲ್​ ಫ್ಲಿಪ್​ಕಾರ್ಟ್​, ಸ್ಯಾಮ್ಸಂಗ್​ ಅಧಿಕೃತ ವೆಬ್​ಸೈಟ್​, ಅಮೆಜಾನ್​ ಸೇರಿದಂತೆ ಶೋರೂಂಗಳಲ್ಲಿ ಮಾರಾಟಕ್ಕಿವೆ.
ಬೆಲೆ: 6GB RAM and 128GB : Rs 67,900
8GB RAM+512GB : Rs 84,900

ಅಲ್ಲದೇ ಆರು ಸಾವಿರ ರೂಪಾಯಿವರೆಗೂ ಕ್ಯಾಶ್​ಬ್ಯಾಕ್​ ಸೌಲಭ್ಯ ಕೂಡಾ ಈ ಮೊಬೈಲ್​ನಲ್ಲಿದೆ. ಬಜಾಜ್​ ಫಿನ್​ಕಾರ್ಡ್​ ಸೌಲಭ್ಯದಲ್ಲಿ ಈ ಮೊಬೈಲ್​ ಬುಕ್ಕಿಂಗ್​ ಮಾಡಿದರೆ ಜಿರೋ ಕಾಸ್ಟ್​ ಇಎಂಐ ಸೌಲಭ್ಯವಿದೆ. ಪೇಟಿಎಂ ಮಾಲ್​ನಲ್ಲಿ 6,000ರೂ ಕ್ಯಾಶ್​ಬ್ಯಾಕ್​ ಆಫರ್​ ನೀಡಲಾಗಿದೆ.

6.4 ಇಂಚಿನ ಕ್ಯೂಹೆಚ್​ಡಿ ಪ್ಲಸ್​ ಸೂಪರ್​ ಅಮೊಲೆಡ್​ ಡಿಸ್​ಪ್ಲೇ ಹೊಂದಿರುವ ಗೆಲಾಕ್ಸಿ ನೋಟ್​ 9, ಕ್ವಾಲ್ಕಂ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​ ಅಳವಡಿಸಲಾಗಿದೆ. ಆದರೆ ಭಾರತ ಮತ್ತು ಇತರೇ ಏಶ್ಯನ್​ ದೇಶಗಳಲ್ಲಿ ಎಕ್ಸಿನೋಸ್​ 9810 ಪ್ರೊಸೆಸರ್​ ಬಳಕೆ ಮಾಡಲಾಗುತ್ತದೆ. ಇನ್ನು ಕ್ಯಾಮೆರಾ ಕುರಿತು ಹೇಳುವುದಾದರೆ ಅಡ್ಡಲಾಗಿ ಎರಡು ಕ್ಯಾಮೆರಾವನ್ನು ಹಿಂಭಾಗದಲ್ಲಿ ಜೋಡಿಸಲಾಗಿದೆ.

12 ಮೆಗಾಪಿಕ್ಸೆಲ್​ ಟಿಲಿಫೋಟೊ ಕ್ವಾಲಿಟಿಯ ಕ್ಯಾಮೆರಾಗಳು ವೈಡ್​ ಆ್ಯಂಗಲ್​ ಚಿತ್ರಗಳನ್ನು ಸೆರೆ ಹಿಡಿಯಲು ಸೂಕ್ತವಾಗಿದೆ. 2ಎಕ್ಸ್​ ಮತ್ತು 10 ಎಕ್ಸ್​ ಜೂಮ್​ ವ್ಯವಸ್ಥೆಯ ಮೂಲಕ ಉತ್ತಮ ಜೂಮಿಂಗ್​ ಸೌಲಭ್ಯ ಒದಗಿಲಸಾಗಿದೆ. ಸೆಲ್ಪೀ ಪ್ರಿಯರಿಗಾಗಿ 8 ಎಂಪಿ ಸೆನ್ಸಾರ್​ ಕ್ಯಾಮೆರಾವಿದೆ. ವೈಯರ್​ ಲೆಸ್​ ಚಾರ್ಜರ್​ ಮೂಲಕ 4000mAh ಬ್ಯಾಟರಿ ಚಾರ್ಜ್​ ಮಾಡಲಾಗುತ್ತದೆ. ನೋಟ್​ ಶ್ರೇಣಿಯ ಎಲ್ಲಾ ಮೊಬೈಲ್​ಗಳಿಗೆ ಇದೇ ಮೊದಲ ಬಾರಿಗೆ 4000mAh ಬ್ಯಾಟರಿ ಅಳವಡಿಕೆ ಮಾಡಲಾಗಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ