ಹೊಸ ಸ್ಯಾಮ್​ಸಂಗ್ ನೋಟ್​ 10 ಮೊಬೈಲ್ ಖರೀದಿಸುವ ಮುನ್ನ​ ಈ ವಿಷಯ ಗೊತ್ತಿರಲಿ

Samsung Galaxy Note 10 : ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್‌ಗೆ ಅತ್ಯಾಧುನಿಕ ಮತ್ತು ಮರು ವಿನ್ಯಾಸಗೊಳಿಸಿದ ಎಸ್-ಪೆನ್ ಜತೆಗೆ ಹೊರ ಬರಲಿದೆ. ಇದನ್ನು ಬ್ಲೂಟೂತ್ ಮೂಲಕ ಇತರ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂಪರ್ಕಿಸಬಹುದು.

zahir | news18-kannada
Updated:August 8, 2019, 4:11 PM IST
ಹೊಸ ಸ್ಯಾಮ್​ಸಂಗ್ ನೋಟ್​ 10 ಮೊಬೈಲ್ ಖರೀದಿಸುವ ಮುನ್ನ​ ಈ ವಿಷಯ ಗೊತ್ತಿರಲಿ
samsung note 10
  • Share this:
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್‌ ಕಂಪೆನಿಯು ತನ್ನ ಅತ್ಯಾಕರ್ಷಕ ಸ್ಮಾರ್ಟ್​ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಒಂದೇ ಬಾರಿ 2 ಮಾದರಿಯ ಮೊಬೈಲ್​ನ್ನು ಸ್ಯಾಮ್​ಸಂಗ್ ಹೊರ ತರುತ್ತಿದ್ದು, ಅದರಲ್ಲೊಂದು ಸಾಂಪ್ರದಾಯಿಕ ಗ್ಯಾಲೆಕ್ಸಿ ನೋಟ್ 10 ಮತ್ತು ಇನ್ನೊಂದು ಗ್ಯಾಲಕ್ಸಿ ನೋಟ್ 10+. ಸೊಗಸಾದ ವಿನ್ಯಾಸವನ್ನು ಹೊಂದಿರುವ ಈ ಫೋನ್​ಗಳು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಗ್ಯಾಲೆಕ್ಸಿ ನೋಟ್​ 10 ಜತೆಗೆ ಈ ಬಾರಿ ಎಸ್​ ಪೆನ್ ಸಹ ಇರಲಿದೆ ಎನ್ನಲಾಗಿದೆ. ಇನ್ನು ನೋಟ್​ 10+ ಸ್ಯಾಮ್​ಸಂಗ್ ಕಂಪೆನಿಯ ಇದುವರೆಗಿನ ಮೊಬೈಲ್​ಗಳಲ್ಲೇ ಅತಿದೊಡ್ಡ ಡಿಸ್​ಪ್ಲೇ ಮತ್ತು ಟಾಪ್ ಎಂಡ್ ಸೆಪ್ಕ್ಸ್​ ಹೊಂದಿರಲಿದೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ಆಗಸ್ಟ್​ 23 ರಂದು ಈ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗಲಿದ್ದು, ಸ್ಯಾಮ್‌ಸಂಗ್.ಕಾಮ್ / ಇನ್, ಫ್ಲಿಪ್‌ಕಾರ್ಟ್, ಅಮೆಜಾನ್, ಪೇಟಿಎಂ ಮತ್ತು ಟಾಟಾ ಕ್ಲಿಕ್ ಮೂಲಕ ಫೋನ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮೊದಲೇ ಬುಕ್ ಮಾಡಬಹುದು. ಹಾಗೆಯೇ ಆಯ್ದ ಸ್ಮಾರ್ಟ್​ಫೋನ್​ ಸ್ಟೋರ್​ಗಳಲ್ಲೂ ಸ್ಯಾಮ್​ಸಂಗ್ 10 ಹಾಗೂ ಸ್ಯಾಮ್​ಸಂಗ್ 10+ ಲಭ್ಯವಿರಲಿದೆ ಎಂದು ಸ್ಯಾಮ್​ಸಂಗ್ ಕಂಪೆನಿ ಹೇಳಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಬೆಲೆ
ಸ್ಯಾಮ್​ಸಂಗ್ ನೋಟ್ 10 ಸ್ಮಾರ್ಟ್​ಫೋನ್​ ಔರಾ ಗ್ಲೋ, ಔರಾ ರೆಡ್ ಮತ್ತು ಔರಾ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ದೊರೆಯಲಿದ್ದು, ಇದರ ಬೆಲೆ ಭಾರತದಲ್ಲಿ 69,999 ರೂ. ನಿಗದಿ ಪಡಿಸಲಾಗಿದೆ. ಇನ್ನು ರಿಟೇಲ್ ಮಾರಾಟ ಮಳಿಗೆಗಳು ಮತ್ತು ಸ್ಯಾಮ್‌ಸಂಗ್.ಕಾಮ್ / ಇನ್‌ಗಳಲ್ಲಿ ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿ ಖರೀದಿಸಿದರೆ 6,000 ರೂ ಕ್ಯಾಶ್‌ಬ್ಯಾಕ್ ಸಿಗಲಿದೆ. ಇನ್ನು ಸ್ಯಾಮ್​ಸಂಗ್ ನೋಟ್ 10+ ಬೆಲೆಯು 79,990 ರೂ ಆಗಿರಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 10 ಫೀಚರ್ಸ್​
ಡಿಸ್​ಪ್ಲೇ: ಫೋನ್ 6.3 ಇಂಚಿನ ಪೂರ್ಣ-ಎಚ್‌ಡಿ + ಡೈನಾಮಿಕ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್​ಪ್ಲೇ ಇರಲಿದ್ದು, ಇದು 401 ಪಿಪಿಐ ಪಿಕ್ಸೆಲ್ ಡೆನ್​ಸಿಟಿ ಮತ್ತು ರೆಸಲ್ಯೂಶನ್ 1080x2280 ಪಿಕ್ಸೆಲ್‌ಗಳನ್ನು ಹೊಂದಿರಲಿದೆ.
Loading...

ವಿನ್ಯಾಸ: ಇದು 151 x 71.8 x 7.9 ಮಿಮೀ ಅಳತೆ ಮತ್ತು 168 ಗ್ರಾಂ ತೂಕ ಹೊಂದಿರಲಿದೆ. ಇದಕ್ಕೆ ಮೆಟಲ್ ಮತ್ತು ಗ್ಲಾಸ್​ನ ಪಂಚ್-ಹೋಲ್ AMOLED ಡಿಸ್​ಪ್ಲೇ ನೀಡಲಾಗಿದೆ.

ಪ್ರೊಸೆಸರ್: ಈ ಫೋನ್ ಆಕ್ಟಾ-ಕೋರ್ ಎಕ್ಸಿನೋಸ್ 9825 ಪ್ರೊಸೆಸರ್ ಹೊಂದಿರಲಿದ್ದು, ಇದು 1.9GHz ಅಡಿಯಲ್ಲಿ ಕಾರ್ಯಾಚರಿಸಲಿದೆ.

RAM ಮತ್ತು ಸ್ಟೋರೇಜ್: 8GB RAM + 256GB ಸ್ಟೊರೇಜ್ ಸಾಮರ್ಥ್ಯ ಇದರಲ್ಲಿರಲಿದ್ದು, ಅದರೊಂದಿಗೆ ಮೈಕ್ರೊ SD ಕಾರ್ಡ್ ಬಳಸುವ ಅವಕಾಶ ಕೂಡ ನೀಡಲಾಗಿದೆ.

ಸಾಫ್ಟ್​ವೇರ್: ಈ ಸ್ಮಾರ್ಟ್​ಫೋನ್ ಒನ್ ಯುಐ ಆಧಾರಿತ ಆ್ಯಂಡ್ರಾಯ್ಡ್​ 9 (ಪೈ) ಸಾಫ್ಟ್​ವೇರ್ ಹೊಂದಿರಲಿದೆ.

ಕ್ಯಾಮೆರಾಗಳು: ಸೆಲ್ಫಿಗಾಗಿ ಈ ಮೊಬೈಲ್​ನಲ್ಲಿ 10 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದರೆ, ಹಿಂಬದಿಯಲ್ಲಿ 12mp + 16mp+ 12mp ಮೂರು ಕ್ಯಾಮೆರಾಗಳನ್ನು ಒಳಗೊಂಡಿರಲಿದೆ.

ಎಸ್-ಪೆನ್: ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಸ್ಮಾರ್ಟ್‌ಫೋನ್‌ಗೆ ಅತ್ಯಾಧುನಿಕ ಮತ್ತು ಮರು ವಿನ್ಯಾಸಗೊಳಿಸಿದ ಎಸ್-ಪೆನ್ ಜತೆಗೆ ಹೊರ ಬರಲಿದೆ. ಇದನ್ನು ಬ್ಲೂಟೂತ್ ಮೂಲಕ ಇತರ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಂಪರ್ಕಿಸಬಹುದು. ಹೊಸ ಮಾದರಿಯ ಎಸ್ ಪೆನ್ ಸಾಧನದಿಂದ ದೂರದಿಂದಲೇ ಸ್ಮಾರ್ಟ್​ಫೋನ್​ನ್ನು ನಿಯಂತ್ರಿಸಬಹುದು. ಕ್ಯಾಮೆರಾ ಮೋಡ್‌ಗಳನ್ನು ಬದಲಾಯಿಸಲು ಅಥವಾ ರಿವೈಂಡ್ ಮಾಡಲು ಮತ್ತು ವೀಡಿಯೊವನ್ನು ವೇಗವಾಗಿ ಫಾರ್ವರ್ಡ್ ಮಾಡಲು ಪೆನ್ ಅನ್ನು ಬಳಸಬಹುದು. ಹಾಗೆಯೇ ಬರೆಯಲು ಇದನ್ನು ಹೆಚ್ಚುವರಿಯಾಗಿ ಬಳಸಬಹುದು.

ಬ್ಯಾಟರಿ: ನೋಟ್ 10 ನಲ್ಲಿ 3500mAh ಸಾಮರ್ಥ್ಯದ ಬ್ಯಾಟರಿ ಇರಲಿದ್ದು, ಇದು ನೋಟ್ 9 ಹೋಲಿಸಿದರೆ ಕಡಿಮೆ ಎನ್ನಬಹುದು. ಏಕೆಂದರೆ ಈ ಹಿಂದೆ ನೋಟ್​ 9 ನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿತ್ತು.


First published:August 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...