Samsung Galaxy M33: ಬಹುನಿರೀಕ್ಷಿತ ಸ್ಯಾಮ್​​ಸಂಗ್​ ಗ್ಯಾಲಕ್ಸಿ M33 ಏಪ್ರಿಲ್​ನಲ್ಲಿ ಬರೋದು ಪಕ್ಕಾ!

Samsung Galaxy M33: ಗ್ಯಾಲಕ್ಸಿ ಎಂ33 5ಜಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 2022 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್‌ಸಂಗ್‌ನ ಮೊದಲ ಎಂ ಸೀರಿಸ್‌ ಸಾಧನವಾಗಲಿದೆ.

ಸ್ಯಾಮ್​​ಸಂಗ್​ ಗ್ಯಾಲಕ್ಸಿ M33

ಸ್ಯಾಮ್​​ಸಂಗ್​ ಗ್ಯಾಲಕ್ಸಿ M33

  • Share this:
    ಸ್ಯಾಮ್‌ಸಂಗ್ ಎಂ ಸೀರಿಸ್ (Samsung M Series)‌ ಸ್ಮಾರ್ಟ್‌ಫೋನ್‌ಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ಅದರಲ್ಲೂ ಹೊಸ ಎಂ ಸೀರಿಸ್ ಸ್ಮಾರ್ಟ್‌ಫೋನ್ (Smartphone) ನಿಮಗೆ ಬೇರೆ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಹೊಲಿಸಿದರೆ ಕಡಿಮೆ ಬೆಲೆಯಲ್ಲಿ (Price) ಸಿಕ್ಕರೆ ಅಂತಹ ಅವಕಾಶವನ್ನು ಯಾರು ತಾನೇ ತಪ್ಪಿಸಿಕೊಳ್ಳುತ್ತಾರೆ ನೀವೇ ಹೇಳಿ. ಖರೀದಿಸಿದರೆ ಸ್ಯಾಮ್‌ಸಂಗ್‌ನ ಎಂ ಸೀರೀಸ್ ಸ್ಮಾರ್ಟ್‌ಫೋನ್ ಅನ್ನೇ ಖರೀದಿಸಬೇಕು ಎಂದು ತುಂಬಾ ದಿನಗಳಿಂದ ಕಾಯುತ್ತಾ ಕುಳಿತಿರುವ ಜನರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಅದೇನಪ್ಪಾ ಅಂತಹ ಸುದ್ದಿ ಅಂತೀರಾ..? ಸ್ಯಾಮ್‌ಸಂಗ್ ತನ್ನ ಇತ್ತೀಚಿನ ಎಂ ಸೀರಿಸ್‌ನ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ33 (Samsung Galaxy M33) 5G ಅನ್ನು ಏಪ್ರಿಲ್ ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

    ಗ್ಯಾಲಕ್ಸಿ ಎಂ33 5ಜಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ 2022 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್‌ಸಂಗ್‌ನ ಮೊದಲ ಎಂ ಸೀರಿಸ್‌ ಸಾಧನವಾಗಲಿದೆ. ಹೆಸರೇ ಸೂಚಿಸುವಂತೆ, ಕಳೆದ ವರ್ಷ ಬಿಡುಗಡೆಯಾದ ಗ್ಯಾಲಕ್ಸಿ ಎಂ32 4ಜಿ ಮತ್ತು ಗ್ಯಾಲಕ್ಸಿ ಎಂ32 5ಜಿ ನಂತರ ಈ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 2021 ರಲ್ಲಿ ಬಿಡುಗಡೆಯಾದ 5ಜಿ ರೂಪಾಂತರವು ಕ್ವಾಡ್ ರಿಯರ್ ಕ್ಯಾಮೆರಾಗಳು ಮತ್ತು ದೊಡ್ಡ 5,000 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

    ಆದರೂ, ಗ್ಯಾಲಕ್ಸಿ ಎಂ33 5ಜಿ ಸ್ಮಾರ್ಟ್‌ಫೋನ್ ದೊಡ್ಡ 6,000 ಎಂಎಎಚ್ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ. ಇದರ ಬೆಲೆ 20,000 ರೂಪಾಯಿಗಿಂತಲೂ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. 2019 ರಲ್ಲಿ ಬಿಡುಗಡೆಯಾದ ಗ್ಯಾಲಕ್ಸಿ ಎಂ ಸಿರೀಸ್ ಸ್ಯಾಮ್‌ಸಂಗ್‌ಗೆ ಗಮನಾರ್ಹ ಸ್ಮಾರ್ಟ್‌ಫೋನ್ ಪೋರ್ಟ್‌ ಫೋಲಿಯೋ ಆಗಿ ಮಾರ್ಪಟ್ಟಿದೆ. ಗ್ಯಾಲಕ್ಸಿ ಎಂ ಸೀರಿಸ್ ಈಗಿನ ಜನರೇಷನ್ ಮತ್ತು ಸಹಸ್ರಮಾನದ ಗ್ರಾಹಕರ ಅಗತ್ಯಗಳಿಗೆ ಸರಿ ಹೊಂದುವಂತಿದೆ ಎಂದು ಕಂಪನಿ ಹೇಳಿತ್ತು.

    ಇದನ್ನೂ ಓದಿ: Instagram ಮರಳಿ ಪರಿಚಯಿಸುತ್ತಿದೆ ಕ್ರೊನಾಲಜಿಕಲ್‌ ಫೀಡ್!

    ಪ್ರಸ್ತುತ, ಗ್ಯಾಲಕ್ಸಿ ಎಂ32 5ಜಿ ಬೆಲೆಯನ್ನು 6 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ವೇರಿಯಂಟ್‌ನ ಬೆಲೆ 16,999 ರೂಪಾಯಿಯಾಗಿದ್ದು, 8 ಜಿಬಿ ರ‍್ಯಾಮ್ ಆಯ್ಕೆಗೆ 18,999 ರೂಪಾಯಿ ಮತ್ತು 4ಜಿ ಆಯ್ಕೆಯ ಬೆಲೆಯನ್ನು 6 ಜಿಬಿ ರ‍್ಯಾಮ್‌ ಮತ್ತು 128 ಜಿಬಿ ಸ್ಟೋರೇಜ್ ಆಯ್ಕೆಗೆ 16,999 ರೂಪಾಯಿ ನಿಗದಿಪಡಿಸಲಾಗಿದೆ.

    ಗ್ಯಾಲಕ್ಸಿ ಎಸ್22 ಅಲ್ಟ್ರಾ 1ಟಿಬಿ ವೇರಿಯಂಟ್ ಭಾರತದಲ್ಲಿ ಇದೀಗ ಬಿಡುಗಡೆ

    ಸ್ಯಾಮ್‌ಸಂಗ್ ಸಂಬಂಧಿತ ಮತ್ತೊಂದು ಸುದ್ದಿಯಲ್ಲಿ, ಕಂಪನಿಯು ಗ್ಯಾಲಕ್ಸಿ ಎಸ್22 ಅಲ್ಟ್ರಾದ 1 ಟಿಬಿ ಸ್ಟೋರೇಜ್ ವೇರಿಯಂಟ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಹೊಸ ಅಲ್ಟ್ರಾ ಸಾಧನವು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಸೀರಿಸ್‌ನಿಂದ ಸ್ಫೂರ್ತಿ ಪಡೆಯುತ್ತದೆ ಮತ್ತು ಎಸ್ ಪೆನ್ ಸ್ಟೈಲಸ್‌ನ ಮೀಸಲಾದ ಪೋರ್ಟ್ ಅನ್ನು ಹೊಂದಿದೆ. ಗ್ಯಾಲಕ್ಸಿ ಎಸ್22 ಅಲ್ಟ್ರಾ 1ಟಿಬಿ ವೇರಿಯಂಟ್ ಸ್ಯಾಮ್‌ಸಂಗ್ ಇ-ಸ್ಟೋರ್‌ನಲ್ಲಿ 1,34,999 ರೂಪಾಯಿಗೆ ಪ್ರತ್ಯೇಕವಾಗಿ ಲಭ್ಯವಿದೆ. ಗ್ರಾಹಕರು ಗ್ಯಾಲಕ್ಸಿ ವಾಚ್ 4 ಅನ್ನು ಕೇವಲ 2,999 ರೂಪಾಯಿಗೆ ಖರೀದಿಸುವ ಸೇಲ್ ಕೊಡುಗೆಯನ್ನು ಸಹ ಇದು ಒಳಗೊಂಡಿದೆ. ಸ್ಮಾರ್ಟ್‌ವಾಚ್‌ನ ನಿಯಮಿತ ಬೆಲೆ 23,999 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

    ಇದನ್ನೂ ಓದಿ: Vodafone-Idea: 8 ಸಾವಿರ ಸಿಮ್ ಕಾರ್ಡ್​ಗಳನ್ನು​ ಬ್ಲಾಕ್​ ಮಾಡಿದ ವೊಡಾಫೋನ್​ ಐಡಿಯಾ! ಕಾರಣವೇನು?

    ಇದರ ಮೂಲ 12 ಜಿಬಿ ರ‍್ಯಾಮ್‌ ಮತ್ತು 256 ಜಿಬಿ ಸ್ಟೋರೇಜ್ ಮಾದರಿಯು 1,09,999 ರೂಪಾಯಿಯಲ್ಲಿ ಲಭ್ಯವಿದೆ. ಇತರ 12 ಜಿಬಿ ರ‍್ಯಾಮ್‌ ಮತ್ತು 512 ಜಿಬಿ ಸ್ಟೋರೇಜ್ ಆಯ್ಕೆಯ ಬೆಲೆ 1,18,999 ರೂಪಾಯಿಯಾಗಿದೆ. ಈ ಸ್ಮಾರ್ಟ್‌ಫೋನ್ ಫ್ಯಾಂಟಮ್ ಬ್ಲ್ಯಾಕ್, ಫ್ಯಾಂಟಮ್ ವೈಟ್ ಮತ್ತು ಇತರೆ ಬಣ್ಣಗಳ ಆಯ್ಕೆಗಳಲ್ಲಿ ಸಹ ಇದು ಲಭ್ಯವಿದೆ ಎಂದು ಹೇಳಲಾಗುತ್ತಿದೆ.
    Published by:Harshith AS
    First published: