ಮಾರುಕಟ್ಟೆಯತ್ತ ಮುಖ ಮಾಡಿದೆ ಸ್ಯಾಮ್​ಸಂಗ್​ M30s ಸ್ಮಾರ್ಟ್​ಫೋನ್..!​ ಇದರ ಕ್ಯಾಮೆರಾ, ಬ್ಯಾಟರಿ ಮಾಡುತ್ತೆ ಗ್ರಾಹಕರನ್ನು ಮೋಡಿ

ನೂತನ ಗ್ಯಾಲಕ್ಸಿ M30s​ ಸ್ಮಾರ್ಟ್​ಫೋನ್ ಶಿಯೋಮಿ ಕೆ20 ಪ್ರೊ, ಶಿಯೋಮಿ ಮಿ A3, ರಿಯಲ್​ಮಿ 5 ಪ್ರೊ ಸ್ಮಾರ್ಟ್​ಫೋನ್​ಗಳಿಗೆ ಸ್ವರ್ಧೆ ನೀಡಲಿದೆ.

news18-kannada
Updated:September 3, 2019, 4:05 PM IST
ಮಾರುಕಟ್ಟೆಯತ್ತ ಮುಖ ಮಾಡಿದೆ ಸ್ಯಾಮ್​ಸಂಗ್​ M30s ಸ್ಮಾರ್ಟ್​ಫೋನ್..!​ ಇದರ ಕ್ಯಾಮೆರಾ, ಬ್ಯಾಟರಿ ಮಾಡುತ್ತೆ ಗ್ರಾಹಕರನ್ನು ಮೋಡಿ
ಸ್ಯಾಮ್​ಸಂಗ್​ ಗ್ಯಾಲಕ್ಸಿ M30S​ ಸ್ಮಾರ್ಟ್​ಫೋನ್
  • Share this:
ಸ್ಯಾಮ್​ಸಂಗ್​ ಕಂಪೆನಿ ತಯಾರಿಸಿದ ಗ್ಯಾಲಕ್ಸಿ M30s​ ಸ್ಮಾರ್ಟ್​ಫೋನ್ ಬಿಡುಗಡೆಯ​ ದಿನಾಂಕ ನಿಗದಿಯಾಗಿದೆ. ನೂತನ ಸ್ಮಾರ್ಟ್​ಫೋನ್​ ಅನ್ನು ಅಮೆಜಾನ್​​ ಇಂಡಿಯಾದಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಸೆಪ್ಟಂಬರ್​ 18 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಹಕರಿಗೆ ಪರಿಚಯಿಸಲಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ M30s​ ಸ್ಮಾರ್ಟ್​ಫೋನ್​ ವಿಶೇಷ ಫೀಚರ್​ ಅನ್ನು ಹೊಂದಿದ್ದು, ಬಿಡುಗಡೆಗೂ ಮುನ್ನವೇ  ಗ್ರಾಹಕರನ್ನು ಇದರತ್ತ ಸೆಳೆದುಕೊಂಡಿದೆ. 6,000mAh ಅಧಿಕ ಬ್ಯಾಟರಿ ಅನ್ನು ನೀಡುವ ಮೂಲಕ ದೀರ್ಘ ಕಾಲದ ಬಳಕೆಗಾಗಿ ಈ ಸ್ಮಾರ್ಟ್​ಫೋನ್​ ಅನ್ನು ಸಿದ್ಧಪಡಿಸಲಾಗಿದೆ. ಗ್ಯಾಲಕ್ಸಿ M30s ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾವಿದ್ದು, 48 ಮೆಗಾಫಿಕ್ಸೆಲ್​ ಕ್ಯಾಮೆರಾ ಇದಾಗಿದೆ.

ನೂತನ ಗ್ಯಾಲಕ್ಸಿ M30s​ ಸ್ಮಾರ್ಟ್​ಫೋನ್ ಶಿಯೋಮಿ K20 ಪ್ರೊ, ಶಿಯೋಮಿ ಮಿ A3, ರಿಯಲ್​ಮಿ 5 ಪ್ರೊ ಸ್ಮಾರ್ಟ್​ಫೋನ್​ಗಳಿಗೆ ಸ್ವರ್ಧೆ ನೀಡಲಿದೆ. ಗ್ರಾಹಕರಿಗೆ ಈ ಸ್ಮಾರ್ಟ್​ಫೋನ್​ ಅಮೆಜಾನ್​ ಮತ್ತು ಸ್ಯಾಮ್​ಸಂಗ್​ ಸ್ಟೋರ್​ ಮೂಲಕ ಸಿಗಲಿದೆ.

ಇದನ್ನೂ ಓದಿ: Video: ಚಂದ್ರನಂಗಳಕ್ಕೆ ಕಾಲಿಟ್ಟ ಬೆಂಗಳೂರಿಗ!; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಇನ್ನು ಮಧ್ಯಮ ಶ್ರೇಣಿಯ ಸರಣಿಯಲ್ಲಿ ಸ್ಯಾಮ್​ಸಂಗ್​ ಕಂಪೆನಿ ಸ್ಮಾರ್ಟ್​ಫೋನ್​ಗಳು ಹೆಚ್ಚು ಜನಪ್ರಿಯವಾಗಿದೆ. ಗ್ಯಾಲಕ್ಸಿ M10, ಗ್ಯಾಲಕ್ಸಿ M20, ಗ್ಯಾಲಕ್ಸಿ M30, ಗ್ಯಾಲಕ್ಸಿ M40 ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಭಾರತದ ಮಾರುಕಟ್ಟೆಯಲ್ಲಿ 7000 ರೂ. ವಿನಿಂದ 25000 ರೂ. ವರೆಗಿನ ಸ್ಮಾರ್ಟ್​ಫೋನ್​​ಗಳ ಮಾರಾಟ ಪ್ರಮಾಣ ಹೆಚ್ಚಿದೆ. ಹಾಗಾಗಿ, ಸ್ಯಾಮ್​ಸಂಗ್​ ಕಂಪೆನಿ ತನ್ನ ಬಜೆಟ್​ ಸ್ಮಾರ್ಟ್​ಫೋನ್​ಗಳನ್ನು ನವೀಕರಣಗೊಳಿಸಿ ಮಾರಾಟ ಮಾಡಲು ಮುಂದಾಗಿದೆ.

First published: September 3, 2019, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading