ಬಜೆಟ್ ಬೆಲೆಯ ಸ್ಯಾಮ್​ಸಂಗ್​ ಗ್ಯಾಲಕ್ಸಿ M02 ಬಿಡುಗಡೆ: ಏನಿದರ ವೈಶಿಷ್ಟ್ಯಗಳು..? ಇಲ್ಲಿದೆ ಮಾಹಿತಿ

ಇಂದು ಮಧ್ಯಾಹ್ನ ಬಹು ನಿರೀಕ್ಷಿತ ಬಜೆಟ್ ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ M02 ಬಿಡುಗಡೆಯಾಗಿದ್ದು, ಅಮೆಜಾನ್ ಇಂಡಿಯಾ, ಸ್ಯಾಮ್​ಸಂಗ್​ ಆನ್​ಲೈನ್​ ಸ್ಟೋರ್ ಮತ್ತು ಇತರ ಆಪ್ಪೆಯನ್ಸ್​ ಚಿಲ್ಲರೆ ವ್ಯಾಪಾರಿಗಳಲ್ಲಿ ಫೆಬ್ರವರಿ 9 ರಿಂದ ಮಾರಾಟವಾಗಲಿದೆ

ಸ್ಯಾಮ್​ಸಂಗ್​ ಗ್ಯಾಲಕ್ಸಿ M02

ಸ್ಯಾಮ್​ಸಂಗ್​ ಗ್ಯಾಲಕ್ಸಿ M02

 • Share this:
  ಸ್ಯಾಮ್​ಸಂಗ್​​ ಇಂದು ತನ್ನ ಬಹು ನಿರೀಕ್ಷಿತ ಬಜೆಟ್ ಬೆಲೆಯ ಸ್ಯಾಮ್​ಸಂಗ್​​ ಗ್ಯಾಲಕ್ಸಿ M02  ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮಧ್ಯಮ ವರ್ಗದವರನ್ನು, ಅದರಲ್ಲೂ ಮೊದಲ ಬಾರಿಯ ಸ್ಮಾರ್ಟ್​ಫೋನ್​  ಖರೀದಿದಾರರನ್ನು ಇದು ಗುರಿಯಾಗಿಸಿಕೊಂಡಿದೆ. ಸ್ಯಾಮ್​ಸಂಗ್​ ಗ್ಯಾಲಕ್ಸಿ M01 ಯಶಸ್ವಿಯ ಬಳಿಕ ಸ್ಯಾಮ್​​ಸಂಗ್​ ಗ್ಯಾಲಕ್ಸಿ M02 ಅನ್ನು ಬಿಡುಗಡೆ ಮಾಡಲಾಗಿದ್ದು, ಶಿಯೋಮಿಯ ರೆಡ್​ಮಿ 9ಎಗೆ ಪ್ರತಿಸ್ಪರ್ಧಿಯಾಗಲಿದೆ ಈ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​. ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಸ್ಮಾರ್ಟ್​ಫೋನ್​  ಬಿಡುಗಡೆ ಮಾಡುವುದನ್ನು ಇತ್ತೀಚೆಗೆ ಹಲವು ಕಂಪನಿಗಳು ಮಾಡುತ್ತಿವೆ. ಅದೇ ರೀತಿ, ಜನಪ್ರಿಯ ಸ್ಯಾಮ್​ಸಂಗ್​ ಕಂಪನಿ ಸಹ ಗ್ಯಾಲಕ್ಸಿ M02 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

  ಇಂದು ಮಧ್ಯಾಹ್ನ ಬಹು ನಿರೀಕ್ಷಿತ ಬಜೆಟ್ ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ M02 ಬಿಡುಗಡೆಯಾಗಿದ್ದು, ಅಮೆಜಾನ್ ಇಂಡಿಯಾ, ಸ್ಯಾಮ್​ಸಂಗ್​ ಆನ್​ಲೈನ್​ ಸ್ಟೋರ್ ಮತ್ತು ಇತರ ಆಪ್ಪೆಯನ್ಸ್​ ಚಿಲ್ಲರೆ ವ್ಯಾಪಾರಿಗಳಲ್ಲಿ ಫೆಬ್ರವರಿ 9 ರಿಂದ ಮಾರಾಟವಾಗಲಿದೆ. ಅಂದಹಾಗೆಯೇ, ಈ ಸ್ಮಾರ್ಟ್​ಫೋನ್  ಬೆಲೆ ಕೇವಲ 6,999 ರೂ.

  ಸ್ಯಾಮ್​ಸಂಗ್​  ಗ್ಯಾಲಕ್ಸಿ M02 ಅನ್ನು ಕಪ್ಪು, ನೀಲಿ, ಬೂದು ಮತ್ತು ಕೆಂಪು ಎಂಬ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್​ಫೋನ್​  6.5-ಇಂಚಿನ ಎಚ್​ಡಿ  + ಡಿಸ್​ಪ್ಲೇ  ಹೊಂದಿದ್ದು, ಮುಂಭಾಗದಲ್ಲಿ ವಾಟರ್​ಡ್ರಾಪ್​ ನಾಚ್ ಮತ್ತು ಟೆಕ್ಚರ್ಡ್​  ಪ್ಲಾಸ್ಟಿಕ್ ಬ್ಯಾಕ್ ಅನ್ನೂ ಒಳಗೊಂಡಿದೆ. ಹೆಸರಿಸದ ಮೀಡಿಯಾ ಟೆಕ್ ಪ್ರೊಸೆಸರ್ ಒಳಗೊಂಡಿರುವ ಗ್ಯಾಲಕ್ಸಿ M02 , ದೊಡ್ಡ 5,000 ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದ್ದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಸಹ ಹೊಂದಿದೆ. ಅಲ್ಲದೆ, ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್​ ಪ್ರೈಮರಿ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಜತೆಗೆ, 5 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನೂ ಸಹ ಈ ಬಜೆಟ್ ಸ್ಮಾರ್ಟ್​ಫೋನ್​ ಹೊಂದಿದೆ.

  ಆಂಡ್ರಾಯ್ಡ್ 10 ನೊಂದಿಗೆ ಕಾರ್ಯನಿರ್ವಹಿಸುವ ಈ ಸ್ಮಾರ್ಟ್​ರ್ಫೋನ್​, ಸ್ಯಾಮ್​ಸಂಗ್​ ಒನ್ ಯುಐ ಅನ್ನೂ ಒಳಗೊಂಡಿದೆ.

  ಸ್ಯಾಮ್​ಸಂಗ್​  ಗ್ಯಾಲಕ್ಸಿ M02 ನ ವೈಶಿಷ್ಟ್ಯಗಳು:

  ಸ್ಯಾಮ್​ಸಂಗ್​  ಗ್ಯಾಲಕ್ಸಿ M02 ಅನ್ನು ಕಪ್ಪು, ನೀಲಿ, ಬೂದು ಮತ್ತು ಕೆಂಪು ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 6.5-ಇಂಚಿನ ಎಚ್​​ಡಿ + ಡಿಸ್​ಪ್ಲೇಯೊಂದಿಗೆ ಮುಂಭಾಗದಲ್ಲಿ ವಾಟರ್​​ಡ್ರಾಪ್​  ನಾಚ್ ಮತ್ತು ಟೆಕ್​ಸ್ಟೆಡ್​  ಪ್ಲಾಸ್ಟಿಕ್ ಬ್ಯಾಕ್ ಹೊಂದಿದೆ. ಸ್ಮಾರ್ಟ್​ಫೋನ್​ ಅನ್ನು ಹೆಸರಿಸದ ಮೀಡಿಯಾ ಟೆಕ್ ಪ್ರೊಸೆಸರ್ ಹೊಂದಿದೆ, ಇದು 2GB ಮತ್ತು 3GB RAM ಆಯ್ಕೆಗಳು ಮತ್ತು 32GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ, ಇದು ಮೈಕ್ರೋ ಎಸ್​ಡಿ ಕಾರ್ಡ್ ಸ್ಲಾಟ್ ಮೂಲಕ 1 TB ವರೆಗೆ ವಿಸ್ತರಿಸಬಹುದಾಗಿದೆ. ಸ್ಯಾಮ್​ಸಂಗ್​  ಗ್ಯಾಲಕ್ಸಿ M02  ದೊಡ್ಡ 5,000 mAh ಬ್ಯಾಟರಿಯನ್ನು ಹೊಂದಿದ್ದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಿಂಭಾಗದಲ್ಲಿ, ಸ್ಮಾರ್ಟ್​ಫೋನ್​  13 ಮೆಗಾಪಿಕ್ಸೆಲ್ ಪ್ರಾಥಮಿಕ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಮುಂಭಾಗದಲ್ಲಿ, ಇದು 5 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ.

  ಸ್ಮಾರ್ಟ್​ಫೋನ್​ ಆಂಡ್ರಾಯ್ಡ್ 10 ನಲ್ಲಿ ಬಾಕ್ಸ್ ಹೊರಗೆ ಸ್ಯಾಮ್​ಸಂಗ್​ ಒನ್ ಯುಐನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಯಾಮ್​ಸಂಗ್​  ಗ್ಯಾಲಕ್ಸಿ M02  ನಲ್ಲಿನ ಕನೆಕ್ಟಿವಿಟಿ ವೈಶಿಷ್ಟ್ಯಗಳು 4 ಜಿ ಎಲ್ಟಿಇ, 3.5 ಎಂಎಂ ಹೆಡ್​​ಫೋನ್ ಜ್ಯಾಕ್, ಬ್ಲೂಟೂತ್ 4.0, ವೈ-ಫೈ 802.11 ಎ / ಬಿ / ಜಿ / ಎನ್, ಮತ್ತು ಮೈಕ್ರೋ-ಯುಎಸ್​​ಬಿ ಪೋರ್ಟ್ ಅನ್ನು ಒಳಗೊಂಡಿವೆ.

  ಸ್ಮಾರ್ಟ್​ಫೋನ್​ ಕಂಪನಿಗಳು ದುಬಾರಿ ಬೆಲೆಯ ಸ್ಮಾರ್ಟ್​ಫೋನ್​​ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಒಂದೆಡೆಯಾದರೆ ಮತ್ತೊಂದೆಡೆ ಕಡಿಮೆ ಬೆಲೆಯ ಸ್ಮಾಟ್​ಫೋನ್​ ಅನ್ನು ಸಹ ಪರಿಚಯಿಸುತ್ತಿರುತ್ತದೆ. ಅದರಂತೆ ಮಧ್ಯಮ ವರ್ಗ ಜನತೆಯನ್ನು ಗುರಿಯಾಗಿಸಿಕೊಂಡು ಈ ಸ್ಮಾರ್ಟ್​ಫೋನ್​  ಅನ್ನು ಬಿಡುಗಡೆ ಮಾಡಿದೆ ಸ್ಯಾಮ್​ಸಂಗ್​  ಗ್ಯಾಲಕ್ಸಿ M02

  ಸ್ಯಾಮ್​ಸಂಗ್​  ಕಂಪೆನಿ ಈ ಹಿಂದೆ M01 ಸರಣಿ ಪರಿಚಯಿಸಿತ್ತು. 2020ರಲ್ಲಿ ಸುಮಾರು 15 ಮಿಲಿಯನ್ನಷ್ಟು ಫೋನ್​ಗಳನ್ನ ಮಾರಾಟ ಮಾಡಿದೆ ಎಂದು ಕಂಪನಿ ತಿಳಿಸಿದೆ.
  Published by:Harshith AS
  First published: