ಜೂ.28ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ J8 ಮಾರಾಟ, ಬೆಲೆ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ


Updated:June 26, 2018, 3:58 PM IST
ಜೂ.28ಕ್ಕೆ ಸ್ಯಾಮ್‌ಸಂಗ್ ಗ್ಯಾಲಕ್ಸಿ J8 ಮಾರಾಟ, ಬೆಲೆ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ

Updated: June 26, 2018, 3:58 PM IST
ನ್ಯೂಸ್​ 18 ಕನ್ನಡ 

ನವದೆಹಲಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ J8 ಸ್ಪಾರ್ಟ್​ಫೊನ್​ನ್ನು ಕಳೆದ ತಿಂಗಳು ಬಿಡುಗಡೆ ಮಾಡಿತ್ತು, ಇದೀಗ ಜೂನ್​ 28ರಿಂದ ಈ ಮೊಬೈಲ್​ ಗ್ರಾಹಕರಿಗೆ ದೊರೆಯಲಿದೆ ಎಂದು ಹೇಳಿಕೊಂಡಿದೆ.

ಈ ಹಿಂದೆಯಿದ್ದ ಮಾಹಿತಿಗಳ ಪ್ರಕಾರ ಗೆಲಾಕ್ಸಿ J8 ಜುಲೈನಲ್ಲಿ ಮಾರಾಟವಾಗುತ್ತದೆ ಎನ್ನಲಾಗಿತ್ತು, ಆದರೆ ಸೋಮವಾರದಂದು ಅಧಿಕೃತವಾಗಿ ಟ್ವೀಟ್​ ಮಾಡಿರುವ ಸ್ಯಾಂಮ್ಸಂಗ್​ ಇಂಡಿಯಾ, ಜೂನ್​ 28ರಂದು ದೇಶದೆಲ್ಲೆಡೆ ಮಾರಾಟವಾಗಲಿದೆ ಎಂದು ಹೇಳಿಕೊಂಡಿದೆ.

ಗೆಲಾಕ್ಸಿ J8 ಬೆಲೆ: 18, 990

ಫೋನ್ ಕುರಿತಾದ ಇತರ ಅನನ್ಯ ವೈಶಿಷ್ಟ್ಯಗಳು ಮತ್ತು ಮಾಹಿತಿ ಈ ಕೆಳಕಂಡಂತೆ ಇರುತ್ತದೆ:

ಎರಡು ಸಿಮ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ J8 ಮೊಬೈಲ್​, ಸ್ನ್ಯಾಪ್​ಡ್ರಾಗನ್​ 450 ಪ್ರೊಸೆಸರ್ ಹೊಂದಿದೆ. 4 GB RAM ಮತ್ತು 64 GB ಆಂತರಿಕ ಸಂಗ್ರಹಣಾ ವ್ಯವಸ್ಥೆಯಿದೆ. ಸಂಗ್ರಹಣಾ ಸಾಮರ್ಥ್ಯವನ್ನು ಎಸ್​ಡಿ ಕಾರ್ಡ್​ ಮೂಲಕ 256 GBಗೆ ವರೆಗೂ ವಿಸ್ತರಿಸಬಹುದು. 3500 mAh ಬ್ಯಾಟರಿ ಸಾಮರ್ಥ್ಯದೊಂದಿಗೆ ,ವೈಫೈ,ಹಾಟ್​ಸ್ಪಾಟ್​, ಬ್ಲೂಟೂತ್​ ಕನೆಕ್ಟಿವಿಟಿ ಹೊಂದಿದೆ.

ಹಿಂಬದಿ 16 + 5 MP ಶೂಟರ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು ಆಟೋ ಫೋಕಸ್​, ಫೇಸ್​ ಡಿಟೆಕ್ಷನ್​, ಹೆಚ್​ಡಿಆರ್​, ಸೇರಿದಂತೆ ಹಲವು ಫೀಚರ್​ಗಳನ್ನು ನೀಡಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 16 MP ಸೆಲ್ಫೀ ಕ್ಯಾಮೆರಾವನ್ನು ಸಹ ಸ್ಮಾರ್ಟ್‌ಫೋನ್ ಹೊಂದಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ