HOME » NEWS » Tech » SAMSUNG GALAXY F62 AVAILABLE AT RELIANCE DIGITAL AND MY STORES HG

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ F‌62 ರಿಲಾಯನ್ಸ್‌ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಬಿಡುಗಡೆ

Samsung galaxy F62: 2021 ಫೆಬ್ರವರಿ 22 ರಿಂದ ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.

news18-kannada
Updated:February 19, 2021, 8:10 PM IST
ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ F‌62 ರಿಲಾಯನ್ಸ್‌ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಬಿಡುಗಡೆ
Samsung galaxy F62
  • Share this:
ಫೆ.19: ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಗೆ ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳು ಆಫ್‌ಲೈನ್‌ ಪಾಲುದಾರರಾಗಿರಲಿದೆ. 2021 ಫೆಬ್ರವರಿ 22 ರಿಂದ ಸ್ಯಾಮ್‌ಸಂಗ್‌ನ ಇತ್ತೀಚಿನ ಸ್ಮಾರ್ಟ್‌ಫೋನ್ ಅನ್ನು ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಗ್ರಾಹಕರು ಖರೀದಿ ಮಾಡಬಹುದು, ನೋಡಬಹುದು ಮತ್ತು ಅದರ ಅನುಭವ ಪಡೆಯಬಹುದು.

ಹೊಸ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಸ್ಯಾಮ್‌ಸಂಗ್‌ 7ಎನ್‌ಎಂ ಎಕ್ಸಿನೋಸ್‌ 9825 ಪ್ರೋಸೆಸರ್‌ ಭರಿತ 2.73 ಗಿಗಾಹರ್ಟ್ಸ್ ಒಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 128 ಜಿಬಿ ವಿಸ್ತರಿಸಬಹುದಾದ ಸ್ಟೊರೇಜ್‌ ಮತ್ತು ಕಲರ್ ಸೂಪರ್ ಅಮೊಲೆಡ್‌ ಸ್ಕ್ರೀನ್ ಹೊಂದಿದೆ. ಇದರ ಜೊತೆಗೆ 7000 ಎಂಎಎಚ್‌ ಬ್ಯಾಟರಿಯಿಂದಾಗಿ ಇದು ಗೇಮಿಂಗ್‌ಗೆ ಅತ್ಯಂತ ಉತ್ತಮವಾದದ್ದಾಗಿದೆ. ಅತ್ಯುತ್ತಮ ಗುಣಮಟ್ಟದ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳು ಮತ್ತು ಫೇಸ್ ಅನ್‌ಲಾಕ್‌ ಆಯ್ಕೆಗಳನ್ನು ಈ ಫೋನ್ ಹೊಂದಿದೆ. 64 ಎಂಪಿ ಹಿಂಬದಿ ಕ್ಯಾಮೆರಾ ಮತ್ತು ಅಲ್ಟ್ರಾ ವೈಡ್‌ ಹಾಗೂ ಮ್ಯಾಕ್ರ ಶೂಟಿಂಗ್‌ ಕೂಡಾ ಇದ್ದು, 6ಜಿಬಿ ರ್‍ಯಾಮ್‌ ಮಾದರಿಗೆ ರೂ. 21,499/-* ಹಾಗೂ 8ಜಿಬಿ ರ್‍ಯಾಮ್‌ ಮಾದರಿಗೆ ರೂ. 23,499/-* ದರದಲ್ಲಿ ಲಭ್ಯವಿದೆ. ಐಸಿಐಸಿಐ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ರೂ. 2,500/- ಅಥವಾ ರೂ.2,500/- ವರೆಗೆ ಸಿಟಿ ಬ್ಯಾಂಕ್‌ ಇನ್‌ಸ್ಟಂಟ್ ರಿಯಾಯಿತಿ ಕ್ರೆಡಿಟ್ ಕಾರ್ಡ್‌ ಇಎಂಐ ಲಭ್ಯವಿದೆ.

ರಿಲಾಯನ್ಸ್ ಡಿಜಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಿಯಾನ್‌ ಬೇಡ್‌ ಈ ಪಾಲುದಾರಿಕೆಯ ಬಗ್ಗೆ ಮಾತನಾಡಿದ್ದು, “ಭಾರತದಾದ್ಯಂತ ಗ್ರಾಹಕರಿಗೆ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಗಾಗಿ ನಾವು ಏಕೈಕ ಆಫ್‌ಲೈನ್‌ ಪಾರ್ಟ್ನರ್ ಆಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ರಿಲಾಯನ್ಸ್‌ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳ ನಮ್ಮ ದೊಡ್ಡ ನೆಟ್‌ವರ್ಕ್‌ನಿಂದಾಗಿ ದೇಶಾದ್ಯಂತ ಗ್ರಾಹಕರು ಮೊದಲಿಗೆ ಆಗಮಿಸಿ, ಫೋನ್‌ ಖರೀದಿ ಮಾಡಲು ಅನುವು ಮಾಡಲಿದೆ. ಈ ಫೋನ್‌ನ ಕಾರ್ಯಕ್ಷಮತೆಗೆ ನಮ್ಮ ಗ್ರಾಹಕರು ಮನಸೂರೆಗೊಳ್ಳುತ್ತಾರೆ ಎಂಬುದು ನಮಗೆ ಖಚಿತವಿದೆ. ಅದರಲ್ಲೂ ವಿಶೇಷವಾಗಿ ಈ ಬೆಲೆಯು ಹಲವರಿಗೆ ಕೈಗೆಟಕುವಂತಿದೆ.”

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಫ್‌62 ಅನ್ನು ರಿಲಾಯನ್ಸ್ ಡಿಜಿಟಲ್‌ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಖರೀದಿ ಮಾಡುವ ಗ್ರಾಹಕರು, ರೂ. 10,000/- ಮೌಲ್ಯದ ಇತರ ಪ್ರಯೋಜನಗಳೂ ಇರಲಿವೆ. ಈ ಪ್ರಯೋಜನಗಳೆಂದರೆ, ರೂ. 349/- ಪ್ರೀಪೇಯ್ಡ್ ರಿಚಾರ್ಜ್‌ ಮೇಲೆ ರೂ. 3,000/- ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್‌ ಹಾಗೂ ಪಾರ್ಟ್ನರ್ ಬ್ರ್ಯಾಂಡ್‌ಗಳಿಂದ ರೂ. 7,000/- ಮೌಲ್ಯದ ವೋಚರುಗಳು ಲಭ್ಯವಿವೆ. ಈ ಕೊಡುಗೆಯು ಹೊಸ ಮತ್ತು ಪ್ರಸ್ತುತ ಜಿಯೋ ಚಂದಾದಾರರಿಗೆ ಲಭ್ಯವಿದೆ.

*ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ

ರಿಲಾಯನ್ಸ್‌ ಡಿಜಿಟಲ್‌ ಬಗ್ಗೆ

ಭಾರತದಲ್ಲಿ ರಿಲಾಯನ್ಸ್ ಡಿಜಿಟಲ್‌ ಅತಿದೊಡ್ಡ ಎಲೆಕ್ಟ್ರಾನಿಕ್ಸ್‌ ರಿಟೇಲರ್ ಆಗಿದ್ದು, 800 ಕ್ಕೂ ಹೆಚ್ಚು ನಗರಗಳಲ್ಲಿ 450 ಕ್ಕೂ ಹೆಚ್ಚು ದೊಡ್ಡ ಮಟ್ಟದ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳನ್ನು ಮತ್ತು ದೇಶದ ಮೂಲೆ ಮೂಲೆಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುವ 1800 ಕ್ಕೂ ಹೆಚ್ಚು ಸಣ್ಣ ಮಟ್ಟದ ಮೈ ಜಿಯೋ ಸ್ಟೋರ್‌ಗಳನ್ನು ಇದು ಹೊಂದಿದೆ. 200 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರಾಂಡ್‌ಗಳು ಹಾಗೂ 5000 ಕ್ಕೂ ಹೆಚ್ಚು ಅದ್ಭುತ ಉತ್ಪನ್ನಗಳನ್ನು ಹೊಂದಿರುವ ರಿಲಾಯನ್ಸ್ ಡಿಜಿಟಲ್‌, ತಮ್ಮ ಜೀವನ ಶೈಲಿಗೆ ಸರಿಯಾದ ತಂತ್ರಜ್ಞಾನವನ್ನು ಕಂಡುಕೊಳ್ಳಲು ಗ್ರಾಹಕರಿಗೆ ಸಹಾಯ ಮಾಡುವುದಕ್ಕಾಗಿ ಮಾಡೆಲ್‌ಗಳ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ. ರಿಲಾಯನ್ಸ್‌ ಡಿಜಿಟಲ್‌ನಲ್ಲಿ, ಪ್ರತಿ ಸ್ಟೋರ್‌ನಲ್ಲಿ ತರಬೇತಿ ಹೊಂದಿರುವ ಮತ್ತು ಉತ್ತಮ ಮಾಹಿತಿಯುಕ್ತ ಸಿಬ್ಬಂದಿಯು ಸ್ಟೋರ್‌ನಲ್ಲಿನ ಪ್ರತಿ ಉತ್ಪನ್ನವನ್ನೂ ವಿವರವಾಗಿ ಗ್ರಾಹಕರಿಗೆ ತಿಳಿಸಲು ಸಿದ್ಧವಾಗಿರುತ್ತಾರೆ. ಅತ್ಯಂತ ಪ್ರಮುಖವಾಗಿ, ಎಲ್ಲ ತನ್ನ ಉತ್ಪನ್ನಗಳಿಗೂ ಸೇಲ್ಸ್‌ ನಂತರದ ಸರ್ವೀಸ್ ಅನ್ನು ಒದಗಿಸಲು ರಿಲಾಯನ್ಸ್‌ ಡಿಜಿಟಲ್‌ ಬದ್ಧವಾಗಿದೆ. ರಿಟೇಲರ್‌ ಸಂಸ್ಥೆಯ ಸೇವಾ ವಿಭಾಗ ಮತ್ತು ಭಾರತದ ಏಕೈಕ ಐಎಸ್‌ಒ 9001 ಪ್ರಮಾಣಿತ ಎಲೆಕ್ಟ್ರಾನಿಕ್ಸ್ ಸರ್ವೀಸ್‌ ಬ್ರ್ಯಾಂಡ್‌ ಆಗಿರುವ ರಿಲಾಯನ್ಸ್‌ ರೆಸ್‌ಕ್ಯೂ, ವಾರಪೂರ್ತಿ ಬೆಂಬಲ ನೀಡಬಲ್ಲದು ಮತ್ತು ಸಮಗ್ರ ಪರಿಹಾರವನ್ನು ಒದಗಿಸಲು ಸಿದ್ಧವಾಗಿದೆ.ಅನುಕೂಲಕರವಾಗಿ ಖರೀದಿ ಮಾಡುವುದಕ್ಕಾಗಿ, ಈಗ ಗ್ರಾಹಕರು ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗೆ ಭೇಟಿ ಮಾಡಬಹುದು ಅಥವಾ www.reliancedigital.in ಗೆ ಲಾಗಿನ್‌ ಮಾಡಬಹುದು. ಇದು ಇನ್‌ಸ್ಟಾ ಡೆಲಿವರಿಯನ್ನು ಒದಗಿಸುತ್ತದೆ (3 ಗಂಟೆಗಳೊಳಗೆ ಡೆಲಿವರಿ) ಮತ್ತು ಸಮೀಪದ ಸ್ಟೋರ್‌ಗಳಿಂದ ಸ್ಟೋರ್‌ ಪಿಕಪ್‌ ಆಯ್ಕೆಯನ್ನು ಒದಗಿಸುತ್ತದೆ.

ಹೆಚ್ಚಿನ ವಿವರಗಳಿಗೆ , ಲಾಗಿನ್ ಮಾಡಿ www.reliancedigital.in.
Published by: Harshith AS
First published: February 19, 2021, 8:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories