news18-kannada Updated:October 8, 2020, 1:45 PM IST
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್41
ಸ್ಯಾಮ್ಸಂಗ್ ಸಂಸ್ಥೆ ಗ್ಯಾಲಕ್ಸಿ ಎಫ್41 ಹೆಸರಿನ ನೂತನ ಸ್ಮಾರ್ಟ್ಫೋನನ್ನುಇಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡ ಈ ಸ್ಮಾರ್ಟ್ಫೋನ್ ಆಕರ್ಷಕ ಡಿಸ್ಪ್ಲೇ ಮತ್ತು ದೀರ್ಘ ಸಾಮರ್ಥ್ಯದ ಬ್ಯಾಟಟರಿಯನ್ನು ಒಳಗೊಂಡಿದೆ. ಕ್ಯಾಮೆರಾ ಪ್ರಿಯರ ಮನತಣಿಸುವಂತಹ ಅಧಿಕ ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಜೋಡಿಸಲಾಗಿದೆ. ನೂತನ ಗ್ಯಾಲಕ್ಸಿ ಎಫ್41 ಸ್ಮಾರ್ಟ್ಫೋನ್ ಹತ್ತಾರು ವಿಶೇಷತೆಗಳ ಒಳಗೊಂಡಿದ್ದು, ಆ ಬಗ್ಗೆ ಇಲ್ಲಿದೆ ಮಾಹಿತಿ…
ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್41 ಇಂದು ಸಂಜೆ 5 ಗಂಟೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದೆ. ನೂತನ ಸ್ಮಾರ್ಟ್ಫೋನ್ ಸೂಪರ್ ಅಮೋಲ್ಡ್ ಇನ್ಫಿನಿಟಿ-ಯು ಡಿಸ್ಪ್ಲೇ ಹೊಂದಿದೆ. ತ್ರಿವಳಿ ಕ್ಯಾಮೆರಾವನ್ನು ಒಳಗೊಂಡಿದೆ. ಅದರಲ್ಲೂ 64 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ, ದೀರ್ಘ ಕಾಲದ ಬಾಳಿಕೆಗಾಗಿ 6 ಸಾವಿರ ಎಮ್ಎಹೆಚ್ ಬ್ಯಾಟರಿ ನೀಡಲಾಗಿದೆ. ಪಿಂಗರ್ಪ್ರಿಂಟ್ ಸೆನ್ಸಾರ್ ಇದರಲ್ಲಿದೆ.
ನೂತನ ಸ್ಮಾರ್ಟ್ಫೋನ್ ಎಕ್ಸಿನೋಸ್ 9611 ಎಸ್ಒಸಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಆ್ಯಂಡ್ರಾಯ್ಡ್ 10 ಬೆಂಬಲವನ್ನು ಪಡೆದಿದೆ. ಗ್ರಾಹಕರಿಗಾಗಿ 6ಜಿಬಿ ರ್ಯಾಮ್ ಆಯ್ಕೆಯಲ್ಲಿ ಪರಿಚಯಿಸುತ್ತಿದೆ.
ಅಷ್ಟು ಮಾತ್ರವಲ್ಲದೆ, ಸ್ಮಾರ್ಟ್ಫೋನಿನಲ್ಲಿ ಯುಎಸ್ಬಿ ಟೈಪ್-ಸಿ ಪೋರ್ಟ್, ಹೆಡ್ಫೋನ್ ಜಾಕ್, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ.
ಬೆಲೆ: ಮಾಹಿತಿಗಳ ಪ್ರಕಾರ ನೂತನ ಸ್ಮಾರ್ಟ್ಫೋನ್ 15 ಸಾವಿರದಿಂದ 20 ಸಾವಿರ ಒಳಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ನಂತರ ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್41ನ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.
Published by:
Harshith AS
First published:
October 8, 2020, 1:45 PM IST